Bengaluru: ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದ ವಿದ್ಯಾರ್ಥಿ ಜೈಲು ಪಾಲು

By Govindaraj SFirst Published Dec 23, 2022, 8:01 AM IST
Highlights

ಇತ್ತೀಚೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ಬಾಂಬ್‌ ಇಡುವುದಾಗಿ ಟ್ವಿಟ್‌ ಮಾಡಿ ಕುಚ್ಯೋದತನ ಮಾಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. 

ಬೆಂಗಳೂರು (ಡಿ.23): ಇತ್ತೀಚೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ಬಾಂಬ್‌ ಇಡುವುದಾಗಿ ಟ್ವೀಟ್‌ ಮಾಡಿ ಕುಚ್ಯೋದತನ ಮಾಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಕೂಡ್ಲೇಗೇಟ್‌ ನಿವಾಸಿ ವೈಭವ್‌ ಗಣೇಶ್‌ ಬಂಧಿತನಾಗಿದ್ದು, ಇತ್ತೀಚೆಗೆ ಟ್ವೀಟರ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಡುವುದಾಗಿ ಅಪರಿಚಿತನ ಟ್ವೀಟ್‌ ಬಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಗೆ ಕೆಐಎನ ಟರ್ಮಿನಲ್‌ ವ್ಯವಸ್ಥಾಪಕರು ದೂರು ಸಲ್ಲಿಸಿದ್ದರು. ಅದರನ್ವಯ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಮಿಳುನಾಡು ಮೂಲದ ಗಣೇಶ್‌ ಪೋಷಕರು, ನಗರದಲ್ಲಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಕೂಡ್ಲುಗೇಟ್‌ ಬಳಿ ಅವರು ನೆಲೆಸಿದ್ದಾರೆ. ಪಂಜಾಬ್‌ ರಾಜ್ಯದ ಎನ್‌ಐಟಿ ಕಾಲೇಜಿನಲ್ಲಿ 3ನೇ ವರ್ಷದ ಎಂಜಿನಿಯರಿಂಗ್‌ ಓದುತ್ತಿರುವ ಗಣೇಶ್‌, ಡಿ.10ರಂದು ಪಂಜಾಬ್‌ನಿಂದ ವಿಮಾನದಲ್ಲಿ ಕೆಐಎಗೆ ಬಂದಿಳಿದಿದ್ದ. ಬಳಿಕ ವಿಮಾನ ನಿಲ್ದಾಣದಿಂದ ಬಸ್ಸಿನಲ್ಲಿ ತನ್ನ ಮನೆಗೆ ಆತ ಹೊರಟ್ಟಿದ್ದ. 

ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ‌ ಆರೋಪ: ಪ್ರಾಂಶುಪಾಲನ ಬಂಧನ

ಆಗ ಮಾರ್ಗ ಮಧ್ಯೆ ‘i will bomb the airport so they can rebuild one closer to the city’ ಎಂದು ಗಣೇಶ್‌ ಟ್ವೀಟ್‌ ಮಾಡಿದ್ದಾನೆ. ಈ ಟ್ವಿಟ್‌ ಗಮನಿಸಿದ ಟರ್ಮಿನಲ್‌ ವ್ಯವಸ್ಥಾಪಕರು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳು ತಪಾಸಣೆ ನಡೆಸಿದ ಬಳಿಕ ಇದೊಂದು ಹುಸಿ ಬೆದರಿಕೆ ಟ್ವೀಟ್‌ ಎಂದು ಖಚಿತವಾಗಿದೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಟ್ವಿಟ್‌ ಬೆನ್ನು ಹತ್ತಿದ್ದಾಗ ಆರೋಪಿಯ ಜಾಡು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಧಿಕೃತವಾಗಿ ವನ್ಯಜೀವಿಗಳ ಸಾಕಾಣಿಕೆ: ಮಾಜಿ ಸಚಿವ ಮಲ್ಲಿಕಾರ್ಜುನ್ ಫಾರ್ಮ್‌ ಹೌಸ್‌ ಮೇಲೆ ಸಿಸಿಬಿ ಪೊಲೀಸರ ದಾಳಿ

ಅಮ್ಮನಿಂದ ನಿರಂತರ ಕರೆ: ವಿಮಾನ ನಿಲ್ದಾಣದಿಂದ ಹೊರ ಬಂದ ಬಳಿಕ ಮನೆಗೆ ಬೇಗ ಬರುವಂತೆ ಮಗನಿಗೆ ಗಣೇಶ್‌ ತಾಯಿ ನಿರಂತರವಾಗಿ ಕರೆ ಮಾಡುತ್ತಿದ್ದರು. ಆದರೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಆತ, ತಾನು ಮನೆಗೆ ಹೋಗಲು ತಡವಾಯಿತು ಎಂದು ಸಿಡಿಮಿಡಿಗೊಂಡಿದ್ದ. ಟ್ರಾಫಿಕ್‌ ಸಮಸ್ಯೆಯಿಂದ ಬೇಸರಗೊಂಡು ಟ್ವೀಟ್‌ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಪೊಲೀಸ್‌ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

click me!