Davanagere crime: ಪ್ರೀತಿ ನಿರಾಕರಿಸಿದ ಯವತಿಯನ್ನು ನಡುರಸ್ತೆಯಲ್ಲೇ ಕತ್ತು ಸೀಳಿ ಕೊಂದು, ವಿಷ ಸೇವಿಸಿದ ಪಾಗಲ್ ಪ್ರೇಮಿ

By Suvarna News  |  First Published Dec 22, 2022, 10:18 PM IST

 ದಾವಣಗೆರೆಯಲ್ಲಿ ಹಾಡು ಹಗಲೇ ಯುವತಿಯ ಭೀಕರ ಕೊಲೆಯಾಗಿದೆ. ಆಕ್ಟೀವ್ ಹೊಂಡಾದಲ್ಲಿ  ಹೋಗುತ್ತಿದ್ದ ಯುವತಿಯನ್ನ ತಡೆದು ಮಾತಾಡಿಸಿದ ದುಷ್ಟ ಕೆಲ ಕ್ಷಣದಲ್ಲಿ ಮನ ಬಂದಂತೆ ಚುಚ್ಚಿ ಕೊಲೆ ಮಾಡಿ ತಾನೂ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಡಿ.22): ಮಧ್ಯಕರ್ನಾಟಕದ ವಿದ್ಯಾನಗರಿ  ದಾವಣಗೆರೆಯಲ್ಲಿ ಹಾಡು ಹಗಲೇ ಭೀಕರ ಕೊಲೆಯಾಗಿದೆ. ನಡು ರಸ್ತೆಯಲ್ಲಿ ನೂರಾರು ಜನರು  ಓಡುವಾಡುವ ರಸ್ತೆಯಲ್ಲಿ  ಆಕ್ಟಿವ್ ಹೊಂಡಾದಲ್ಲಿ  ತನ್ನ ಕೆಲ್ಸಕ್ಕೆ  ಹೋಗುತ್ತಿದ್ದ ಯುವತಿ ಕೊಲೆಯಾಗಿದೆ. ಆಕ್ಟೀವ್ ಹೊಂಡಾದಲ್ಲಿ  ಹೋಗುತ್ತಿದ್ದ ಯುವತಿಯನ್ನ ತಡೆದು ಮಾತಾಡಿಸಿದ ದುಷ್ಟ ಕೆಲ ಕ್ಷಣದಲ್ಲಿ ಮನ ಬಂದಂತೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ ದುಷ್ಟ ತಾನು ಕೂಡಾ ಆಸ್ವತ್ರೆ  ಸೇರಿದ್ದಾನೆ. 

Tap to resize

Latest Videos

ದಾವಣಗೆರೆ ನಗರದ ಪಿಜೆ ಬಡಾವಣೆಯ ಚರ್ಚ್ ಮುಂಭಾಗ ವಿನೋಭ ನಗರದ ನಿವಾಸಿ ಚಾಂದ್ ಸುಲ್ತಾನಾ ಮರ್ಡರ್ ಆದ ಯುವತಿ.ಚಾಂದ್ ಸುಲ್ತಾನ್  ಹೆಸರಿನಂತೇ  ಸುಂದರ ಹುಡುಗಿ. ದಾವಣಗೆರೆ ವಿವಿಯಲ್ಲಿ ಎಂಕಾಂ ಮುಗಿಸಿ ತೆರಿಗೆ ಸಲಹೆ ಸಲಹೆಗಾರ ಕೆ. ಮಹ್ಮದ್ ಭಾಷಾ ಕಡೆ ಸಿಎ ಗಾಗಿ ತೆರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿನ ಹುಡುಗನ ಜೊತೆಗೆ ಇತ್ತೀಚಿಗೆ ನಿಶ್ವಿತಾರ್ಥ ಬೇರೆ ಆಗಿತ್ತು. ಆದ್ರೆ ದುಷ್ಟ ಸಾದತ್ ಅಲಿಯಾಸ್ ಚಾಂದ್ ಫೀರ್  ಹರಿಹರದ ನಿವಾಸಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. 

ಚಾಂದ್ ಸುಲ್ತಾನಾಳನ್ನ ಮದ್ವೆ  ಆಗಲು ಪ್ರಯತ್ನಿಸಿದ್ದ. ಆದ್ರೆ ಕುಟುಂಬ ಸದಸ್ಯರು ಹಾಗೂ ಸುಲ್ತಾನಾ ನಿರಾಕರಿಸಿ  ಮತ್ತೊಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಇದನ್ನ ಸಹಿಸದ  ಸಾದತ್    ನೂರಾರು ಜನ ಸುತ್ತಾಡುವ ರಸ್ತೆಗೆ ಮೂಲಕ ಸುಲ್ತಾನಾ ತನ್ನ ಕಚೇರಿಗೆ ಹೋಗುವುದು ಗೊತ್ತಿತ್ತು.  ಸ್ವಲ್ಪ  ಮಾತಾಡಬೇಕು ಎಂದು  ರಸ್ತೆ ಬದಿಯ ಮರದ ಕೆಳಗೆ ಕರೆದು ಚಾಕು ಹಾಕಿಯೇ ಬಿಟ್ಟಿದ್ದಾನೆ ದುಷ್ಟ.

Udupi: 2 ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನ-ಬೆಳ್ಳಿ ಕದ್ದಿದ್ದ ಕಾರ್ಕಳ ಮನೆಗಳ್ಳರ ಬಂಧನ

ಸುಲ್ತಾನಾ  ಸಾವನ್ನಪ್ಪಿದ್ದ ಸುದ್ದಿ ಹಬ್ಬಿದ ತಕ್ಷಣ  ನೂರಾರು ಜನರು ಘಟನಾ ಸ್ಥಳಕ್ಕೆ ಬಂದರು. ಸುಲ್ತಾನಾಳದ್ದು ಮಧ್ಯಮ ವರ್ಗದ  ಕುಟುಂಬ ಒಂದು ರೀತಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಒಬ್ಬಳೇ ಮಗಳು. ಹೀಗೆ ಸುಲ್ತಾನಾಳ ಕೊಲೆ ವಿಚಾರ ತಿಳಿದು ಯಾರು ಕೊಲೆ ಮಾಡಿರಬೇಕು ಎಂದು ಹುಡುಕಾಡುವಷ್ಟರಲ್ಲಿ ಘಟನೆ ನಡೆದ  ಕೆಲ ದೂರದಲ್ಲಿಯೇ ಇರುವ  ಸಿಟಿ ಸೇಂಟ್ರಲ್ ಆಸ್ಪತ್ರೆಯಲ್ಲಿ ದುಷ್ಟ  ಸಾದತ್  ಸುಲ್ತಾಳ ಕೊಲೆ ಮಾಡಿ ನಂತರ ತಾನು ವಿಷ ಸೇವಿಸಿದ್ದಾನೆ.

HAVERI: ಕಿರಿಯ ಮಗ ಪ್ರೀತಿಸಿದ ತಪ್ಪಿಗೆ ಮನೆಯ ಮೂವರು ನೇಣಿಗೆ ಶರಣು!

ಹಾಡು ಹಗಲೇ ನಡು ರಸ್ತೆಯಲ್ಲಿ  ಚಿನ್ನದಂತ ಹುಡುಗಿಯ ಬರ್ಬರ ಹತ್ಯೆಯಾಗಿರುವುದು ದಾವಣಗೆರೆ ಜನತೆಯನ್ನು ಬೆಚ್ಚಿಬೀಳಿಸಿದೆ. ಚಾಂದ್ ಸುಲ್ತಾನ್  ಆ ಕುಟುಂಬಕ್ಕೆ  ಒಬ್ಬಳೇ ಮಗಳು. ಇನ್ನೇನು ಇಷ್ಟರಲ್ಲಿಯೇ  ಮದ್ವೆ ಆಗಬೇಕಿತ್ತು.  ಸುಲ್ತಾನಾಳ ಮದ್ವೆ ಆಗಬೇಕಾದ ಹುಡುಗ ಸಹ ಹರಿಹರ ಮೂಲದವನೇ.  ಇಬ್ಬರು ತೆರಿಗೆ ಸಲಹೆ ಗಾರ ಮಹ್ಮದ್ ಭಾಷಾ ಕಚೇರಿಯಲ್ಲಿ ಕೆಲ್ಸಾ ಮಾಡುತ್ತಿದ್ದರು.  ಬಾಳಿ ಬದುಕ ಬೇಕಾದ  ಚಿನ್ನದಂತಹ ಹುಡುಗಿ  ದುಷ್ಟನ ಕೈಗೆ ಸಿಕ್ಕು ಕೊಲೆಯಾಗಿ ದುರಂತ ಅಂತ್ಯ ಕಂಡಿದ್ದು ಮಾತ್ರ  ದೊಡ್ಡ ಅನ್ಯಾಯ. ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿದ ದೃಶ್ಯಗಳ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು ಘಟನೆ ಬಗ್ಗೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

click me!