Renukacharya's brother's son missing case: ಮಾಜಿ ಸಚಿವ ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್ ನಾಪತ್ತೆ ಪ್ರಕರಣ ಸಂಬಂಧ ಪೊಲೀಸರು ಆತನ ಸ್ನೇಹಿತ ಕಿರಣ್‌ನನ್ನು ಬಂಧಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಚಂದ್ರಶೇಖರ್ ಕಾಣೆಯಾಗಿದ್ದಾನೆ.
ದಾವಣಗೆರೆ: ಶಾಸಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್ ನಾಪತ್ತೆ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಚಂದ್ರಶೇಖರ್ ಆಪ್ತ ಸ್ನೇಹಿತ ಕಿರಣ್‌ನನ್ನು ಪೊಲೀಸರು ಬಂಧಿಸಿದ್ಧಾರೆ. ಕಳೆದ ನಾಲ್ಕು ದಿನಗಳಿಂದ ಚಂದ್ರಶೇಖರ್ ಕಾಣೆಯಾಗಿದ್ದಾರೆ. ಶಿವಮೊಗ್ಗದ ಗೌರಿ ಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ವಾಪಸ್ ಹೊನ್ನಾಳಿಗೆ ಬಂದ ನಂತರದಿಂದ ಕಿರಣ್ ಕಾಣೆಯಾಗಿದ್ದಾನೆ. ಆತ ಅಪಹರಣಕ್ಕೊಳಗಾಗಿದ್ದಾನ ಅಥವಾ ಯಾರಾದರೂ ಆತನ ಕೊಲೆ ಮಾಡಿದ್ದಾರ ಎಂಬ ಬಗ್ಗೆ ಯಾವುದೇ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಆದರೆ ರೇಣುಕಾಚಾರ್ಯ ಮಾತ್ರ ನಾಪತ್ತೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಹೇಳಿಕೆ ನೀಡಿದ್ದಾರೆ. ಎಸ್‌ಪಿ ರಿಶ್ಯಂತ್ ಕೂಡ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಕಿರಣ್‌ನನ್ನು ಕಳೆದ ಮೂರು ದಿನಗಳಿಂದ ವಿಚಾರಣೆಗೊಳಪಡಿಸಿದ್ದು, ಸಂಶಯದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆಯಾಗಿ ನಾಲ್ಕು ದಿನಗಳಾದರೂ ಇನ್ನೂ ಯಾವುದೇ ಕ್ಲೂ ಸಿಕ್ಕಿಲ್ಲ. ಶಿವಮೊಗ್ಗಕ್ಕೆ ಹೋಗಿ ಬರುತ್ತೇನೆ ಎಂದು ಹೊರಟಿದ್ದ ಚಂದ್ರಶೇಖರ್ ವಾಪಸ್ ಮನೆ ತಲುಪಲೇ ಇಲ್ಲ. ಈ ಬಗ್ಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರಾದರೂ ಇದುವರೆಗೂ ಯಾವುದೇ ಲೀಡ್ ಸಿಕ್ಕಿಲ್ಲ. ರೇಣುಕಾಚಾರ್ಯ ತಮ್ಮ ಅಣ್ಣನ ಮಗ ಚಂದ್ರಶೇಖರ್‌ರನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಎಲ್ಲರಂತಲ್ಲ ನನ್ನ ಮಗ, ತುಂಬಾ ಒಳ್ಳೆಯ ವ್ಯಕ್ತಿ ಎಂದು ಅವರು ನೋವು ತೊಂಡಿದ್ದಾರೆ. ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ನಾನು ಬೇಗ ಸಿಟ್ಟಾಗಿ ಜಗಳವಾಡುತ್ತೇನೆ. ಆದರೆ ಅವನು ನನ್ನಂತಲ್ಲ. ತುಂಬಾ ತಾಳ್ಮೆ ಹೊಂದಿರುವ ವ್ಯಕ್ತಿ. ಆತ ನಾಪತ್ತೆಯಾದ ದಿನದಿಂದ ನೆಮ್ಮದಿಯಿಲ್ಲ. ಎಲ್ಲರೂ ಕರೆ ಮಾಡಿ ಮಗ ಸಿಗುತ್ತಾನೆ ಎಂಬ ಭರವಸೆ ನೀಡುತ್ತಿದ್ದಾರೆ. ಎಂದಿಗೂ ಈ ರೀತಿ ಹೇಳದೇ ಕೇಳದೇ ಹೋದವನಲ್ಲ ಎಂದು ತಮ್ಮ ಭಯವನ್ನು ವ್ಯಕ್ತಪಡಿಸಿದ್ದಾರೆ.
ರೇಣುಕಾಚಾರ್ಯ ಮಾತಿನಲ್ಲೂ ಸ್ವಲ್ಪ ಗೊಂದಲಗಳಿವೆ. ರಾಜಕೀಯ ದ್ವೇಷದಿಂದ ಅಣ್ಣನ ಮಗನನ್ನು ಅಪಹರಿಸಲಾಗಿದೆಯಾ ಎಂಬ ಬಗ್ಗೆಯೂ ಅನುಮಾನಗಳು ಸೃಷ್ಟಿಯಾಗಿವೆ. ಶಿವಮೊಗ್ಗದ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ವಾಪಸ್ ಹೊನ್ನಾಳಿಗೆ ಬಂದ ನಂತರ ಚಂದ್ರಶೇಖರ್ ನಾಪತ್ತೆಯಾಗಿದ್ದಾರೆ. ಇದರ ನಡುವೆ ಕಿರಣ್ ಎಂಬ ಸ್ನೇಹಿತನನ್ನು ಚಂದ್ರಶೇಖರ್ ಡ್ರಾಪ್ ಮಾಡಿದ್ದ. ನಂತರ ಹೊನ್ನಾಳಿಗೆ ವಾಪಸ್ ತಲುಪಿದ್ದ. ಹೊನ್ನಾಳಿ ತಲುಪಿದ ನಂತರವೂ ಇಬ್ಬರು ಸ್ನೇಹಿತರ ಜೊತೆ ಮಾತನಾಡಿದ್ದಾನೆ. ಅದಾದ ನಂತರ ಫೋನ್ ಸ್ವಿಚ್ ಆಫ್ ಆಗಿದೆ, ಆತ ಎಲ್ಲಿ ಹೋಗಿದ್ದಾನೆ ಎಂಬ ಕುರುಹೂ ಸಿಗುತ್ತಿಲ್ಲ.
ಏನಿದು ಪ್ರಕರಣ?:
ಮಾಜಿ ಸಚಿವ, ಹೊನ್ನಾಳಿ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ, ಹಿರಿಯ ಗುತ್ತಿಗೆದಾರ ಎಂ.ಪಿ.ರಮೇಶ್‌ರ ಪುತ್ರ ಎಂ.ಆರ್.ಚಂದ್ರಶೇಖರ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇಡೀ ಶಾಸಕರ ಕುಟುಂಬ ಈಗ ತೀವ್ರ ಆತಂಕಕ್ಕೆ ಸಿಲುಕಿದೆ.
ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಹೋಗಿ ಬರುವುದಾಗಿ ಅ.೩೦ರಂದು ರಾತ್ರಿ ೭.೩೦ಕ್ಕೆ ಹೋದ ಎಂ.ಆರ್.ಚಂದ್ರಶೇಖರ(ಚಂದ್ರು) ಈವರೆಗೆ ಮನೆಗೆ ಬಂದಿಲ್ಲ. ಹೊನ್ನಾಳಿಯಿಂದ ಮನೆ ಬಿಟ್ಟ ಸ್ವಲ್ಪ ಹೊತ್ತಿನಲ್ಲೇ ಚಂದ್ರು ಮೊಬೈಲ್ ಸ್ವಿಚ್ ಆ- ಆಗಿದ್ದು, ಎರಡು ದಿನವಾದರೂ ಮನೆಗೆ ಬರದಿದ್ದರಿಂದ, ಮೊಬೈಲ್ ಸ್ವಿಚ್ ಆ- ಆಗಿದ್ದರಿಂದ ಇಡೀ ಕುಟುಂಬ ಆತಂಕದಿಂದ ಗೌರಗದ್ದೆ ಶಿವಮೊಗ್ಗ, ಹೊನ್ನಾಳಿ ಇತರೆಡೆ ಎಲ್ಲಾ ಕಡೆ ವಿಚಾರಿಸಿದರೂ ಪ್ರಯೋಜನವಾಗದ್ದರಿಂದ ತೀವ್ರ ಆತಂಕಕ್ಕೀಡಾಗಿದೆ.
ಚಂದ್ರು ಸ್ನೇಹಿತರು, ಪರಿಚಯಸ್ಥರು, ಬಂಧು-ಬಳಗ ಹೀಗೆ ಎಲ್ಲರಿಗೂ ಸಂಪರ್ಕಿಸಿ, ಎಲ್ಲಾ ಕಡೆ ಹುಡುಕಾಡಿದರೂ ಮಗ ಪತ್ತೆಯಾಗದ ಹಿನ್ನೆಲೆಯಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಚಂದ್ರು ತಂದೆ, ಗುತ್ತಿಗೆದಾರರೂ ಆಗಿರುವ ಎಂ.ಪಿ.ರಮೇಶ್, ಶಾಸಕ ಎಂ.ಪಿ.ರೇಣುಕಾಚಾರ್ಯ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೊನ್ನಾಳಿ ಪೊಲೀಸರು ವೃತ್ತ ನಿರೀಕ್ಷಕ ಸಿದ್ದೇಗೌಡ ನೇತೃತ್ವದಲ್ಲಿ ನಾಪತ್ತೆಯಾಗಿರುವ ಚಂದ್ರಶೇಖರಗಾಗಿ ಶೋಧ ನಡೆಸಿದ್ದಾರಾದರೂ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಮಾಜಿ ಸಚಿವ ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ: ಹುಡುಕಾಟಕ್ಕೆ ವಿಶೇಷ ತಂಡ ರಚನೆ
ಕುಟುಂಬದ ಹಿರಿಯ, ಮುದ್ದಿನ ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ಧುಪಡಿಸಿ, ಮಗನ ಹುಡುಕಾಟದಲ್ಲಿ ತೊಡಗಿದ್ದರು. ಮಗ ನಾಪತ್ತೆಯಾದ ಆತಂಕದಲ್ಲಿದ್ದರೂ ಸಹ ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ಕೇವಲ ಒಂದು ಗಂಟೆ ಮಾತ್ರ ಪಾಲ್ಗೊಂಡು, ಸೀದಾ ಮನೆಗೆ ಬಂದವರೆ ಮನೆಯ ಮಗ ಚಂದ್ರಶೇಖರ ಪತ್ತೆ ಕಾರ್ಯದ ಬಗ್ಗೆ ಪೊಲೀಸ್ ಅಽಕಾರಿಗಳು, ಎಲ್ಲಾ ಕಡೆ ಹುಡುಕಾಟ ನಡೆಸಿರುವ ತಮ್ಮ ಬೆಂಬಲಿಗರು, ಆತ್ಮೀಯರ ಜೊತೆಗೆ ಮೊಬೈಲ್‌ನಲ್ಲಿ ಮಾಹಿತಿ ಪಡೆಯುತ್ತಿರುವುದು ಕಂಡು ಬಂದಿತು.
ಇದನ್ನೂ ಓದಿ: ಐದು ವರ್ಷದ ಕಂದನನ್ನು ಕೊಂದು ನೇಣಿಗೆ ಶರಣಾದ ತಂದೆ
ವಿಷಯ ತಿಳಿದ ಜನರೂ ಸಹ ಶಾಸಕರ ಮನೆ ಬಳಿ ಜಮಾಯಿಸುತ್ತಿದ್ದು, ಆ ಎಲ್ಲರಿಗಿಗೂ ಸಮಾಧಾನ ಮಾಡುತ್ತಾ, ಮನೆ ಮಂದಿಗೆಲ್ಲಾ ಧೈರ್ಯ ಹೇಳುತ್ತಿದ್ದರೂ ರೇಣುಕಾಚಾರ್ಯ ಸಹ ಮಗ ಎಲ್ಲಿದ್ದಾನೋ ಎಂಬ ಆತಂಕ ಸಹಜವಾಗಿತ್ತು. ಯಾರೂ ಆತಂಕ ಪಡಬೇಡಿ, ಚಂದ್ರು ಬರುತ್ತಾನೆಂದು ಮನೆ ಬಳಿ ಬಂದವರಿಗೆಲ್ಲಾ ರೇಣುಕಾಚಾರ್ಯ ಸಮಾಧಾನಪಡಿಸುತ್ತಿದ್ದರು. ಮತ್ತೊಂದು ಕಡೆ ಪೊಲೀಸರು ನಾಪತ್ತೆಯಾಗಿರುವ ಚಂದ್ರಶೇಖರನಿಗಾಗಿ ತೀವ್ರ ಶೋಧ ಕೈಗೊಂಡಿದ್ದು, ಪತ್ತೆಗಾಗಿ ವಿಶೇಷ ತಂಡವನ್ನೂ ತೊಡಗಿಸಿದ್ದಾರೆಂದು ಹೇಳಲಾಗಿದೆ.
ಇದನ್ನೂ ಓದಿ: Crime News: ಬ್ರೇಕಪ್ ಮಾಡಿದಳೆಂದು ಪ್ರೇಯಸಿಯನ್ನು ಕೊಂದ ವಿವಾಹಿತ
ಚಂದ್ರು ಕಳೆದ ಭಾನುವಾರ ಸಂಜೆ ಮನೆಯಿಂದ ಹೋದವನು ಮರಳಿ ಬಂದಿಲ್ಲ. ಆತನ ಮೊಬೈಲ್ ಸ್ವಿಚ್ ಆ- ಆಗಿದೆ. ಯಾವಾಗಲೂ ಎಲ್ಲಿಗೆ ಹೋಗಬೇಕೆಂದರು ಜೊತೆಗೆ ಸ್ನೇಹಿತರು ಇದ್ದೇ ಇರುತ್ತಿದ್ದರು. ಆದರೆ, ಭಾನುವಾರ ಮಾತ್ರ ಆತನ ಒಬ್ಬನೇ ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ಬರುತ್ತೇನೆಂದು ಹೋಗಿದ್ದ. ಶಿವಮೊಗ್ಗದಲ್ಲಿ ತನ್ನ ಸ್ನೇಹಿತನನ್ನು ಎರಡು ದಿನಗಳ ಹಿಂದಷ್ಟೇ ಚಂದ್ರಶೇಖರ ಮಾತನಾಡಿಸಿಕೊಂಡು ಬಂದಿದ್ದ ಎಂದು ತಿಳಿದು ಬಂದಿದೆ.