ಇಬ್ಬರ ಬಟ್ಟೆ ಬಿಚ್ಚಿಸಿ, ಬಳಿಕ ಹಲ್ಲೆ ನಡೆಸಿ ನಂತರ ಕೇವಲ ಒಳವಸ್ತ್ರದಲ್ಲಿ ಗ್ರಾಮದ ತುಂಬಾ ಮೆರವಣಿಗೆ ಮಾಡಿರುವುದನ್ನು ವಿಡಿಯೋ ತೋರಿಸುತ್ತದೆ. ಹಲ್ಲೆಗೊಳಗಾದ ಇವರಿಬ್ಬರು ಗೋಮಾಂಸ ತುಂಬಿಕೊಂಡ ಚೀಲವನ್ನು ಬಿಲಾಸ್‌ಪುರದ ಹೈಕೋರ್ಟ್ ಕಾಲೋನಿ ಹಿಂಭಾಗ ಹೊತ್ತುಕೊಂಡಿದ್ದರು.
ಛತ್ತೀಸ್‌ಗಢ: ಗೋಮಾಂಸ ಮಾರಾಟ (Beef Selling) ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗ್ರಾಮಸ್ಥರು ವಿವಸ್ತ್ರಗೊಳಿಸಿ (Stripped), ಗ್ರಾಮದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಛತ್ತೀಸ್‌ಗಢದ (Chhattisgarh) ಬಿಲಾಸ್‌ಪುರ (Bilaspur) ಬಳಿ ಗ್ರಾಮವೊಂದರಲ್ಲಿ ಬುಧವಾರ ನಡೆದಿದೆ. ನರಸಿಂಗ್ ದಾಸ್ ಹಾಗೂ ರಾಮನಿವಾಸ್ ಮೆಹರ್ ಎಂಬಿಬ್ಬರು ಬೈಕ್‌ನಲ್ಲಿ (Bike) 33 ಕೆ.ಜಿ ಗೋಮಾಂಸ ಕೊಂಡೊಯ್ಯುತ್ತಿದ್ದದ್ದನ್ನು ಪತ್ತೆಹಚ್ಚಿದ ಗ್ರಾಮಸ್ಥರು, ಇಬ್ಬರ ಬಟ್ಟೆ ಬಿಚ್ಚಿಸಿ, ಬಳಿಕ ಹಲ್ಲೆ ನಡೆಸಿ ನಂತರ ಕೇವಲ ಒಳವಸ್ತ್ರದಲ್ಲಿ ಗ್ರಾಮದ ತುಂಬಾ ಮೆರವಣಿಗೆ (Parade) ಮಾಡಿ, ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ಘಟನೆ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರ ಬಟ್ಟೆ ಬಿಚ್ಚಿಸಿ, ಬಳಿಕ ಹಲ್ಲೆ ನಡೆಸಿ ನಂತರ ಕೇವಲ ಒಳವಸ್ತ್ರದಲ್ಲಿ ಗ್ರಾಮದ ತುಂಬಾ ಮೆರವಣಿಗೆ ಮಾಡಿರುವುದನ್ನು ವಿಡಿಯೋ ತೋರಿಸುತ್ತದೆ. ಹಲ್ಲೆಗೊಳಗಾದ ಈ ಇಬ್ಬರನ್ನು ನರಸಿಂಗ್ ದಾಸ್ (50) ಹಾಗೂ ರಾಮ್ ನಿವಾಸ್ ಮೆಹರ್ (52) ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಮಾಂಸ ತುಂಬಿಕೊಂಡ ಚೀಲವನ್ನು ಬಿಲಾಸ್‌ಪುರದ ಹೈಕೋರ್ಟ್ ಕಾಲೋನಿ ಹಿಂಭಾಗ ಹೊತ್ತುಕೊಂಡಿದ್ದರು.
ಇದನ್ನು ಓದಿ: ನಾನು ಗೋಮಾಂಸ ತಿಂತೀನಿ; ರಣಬೀರ್ ಬಳಿಕ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಹೇಳಿಕೆ ವೈರಲ್
ಈ ಬಗ್ಗೆ ಮಾಹಿತಿ ತಿಳಿದುಕೊಂಡ ಬೆನ್ನಲ್ಲೇ ಕೆಲವು ಸ್ಥಳೀಯರು ಆ ಸ್ಥಳಕ್ಕೆ ಭೇಟಿ ನೀಡಿ ಇಬ್ಬರ ಮೇಲೆ ಹಲ್ಲೆ ಮಾಡಿ ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಇನ್ನು, ಪೊಲೀಸರ ಪ್ರಕಾರ, ಸುಮಿತ್ ನಾಯಕ್ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ ಹಾಗೂ ಇಬ್ಬರು ಬಿಳಿ ಚೀಲವನ್ನು ಇಟ್ಟುಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಚೀಲದಲ್ಲಿ ಏನಿದೆ ಎಂದು ದುರುದಾಋ ಹಾಗೂ ಇತರೆ ಸ್ಥಳೀಯರು ಕೇಳಿದ್ದಕ್ಕೆ ಅವರು ಗೋಮಾಂಸ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಅವರಿಬ್ಬರನ್ನು ಬಂಧಿಸಲಾಗಿದೆ ಹಾಗೂ 33 ಕೆಜಿಗೂ ಹೆಚ್ಚು ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೌದು, ಪೊಲೀಸರ ಮಾಹಿತಿ ಪ್ರಕಾರ 33.5 ಕೆಜಿ ಗೋಮಾಂಸವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬುಧವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು ಎಂದೂ ಛತ್ತೀಸ್‌ಗಢ ಪೊಲೀಸರು ಹೇಳಿದ್ದಾರೆ. ಅಲ್ಲದೆ, ಈ ಮಾಂಸವನ್ನು ಪಶು ವೈದ್ಯರು ಪರೀಕ್ಷೆ ಮಾಡಿದ್ದು, ಆ ಕುರಿತ ವರದಿ ಇನ್ನೂ ನಮ್ಮ ಕೈಸೇರಬೇಕಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನು ಓದಿ: Chikkamagaluru ಪೊಲೀಸರಿಂದ ಗೋಮಾಂಸ ಮಾರಾಟಗಾರರಿಗೆ ವಾರ್ನಿಂಗ್
ಇನ್ನು, ಸ್ಥಳಕ್ಕೆ ಹೋದ ಬಳಿಕ ನಾವು ಆಕ್ರೋಶಗೊಂಡಿದ್ದ ವ್ಯಕ್ತಿಗಳನ್ನು ನಾವು ಸಂತೈಸಿದೆವು. ಹಾಗೂ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆವು. ಹಾಗೂ ಸಂಬಂಧಿತ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು. ಆದರೆ, ಆ ಇಬ್ಬರು ಆರೋಪಿಗಳ ಮೇಲೆ ಹಲ್ಲೆ ಮಾಡಿ, ಅವರನ್ನು ಅರೆಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: Chikkamagaluru ; ಅಕ್ರಮ ಗೋಮಾಂಸ ಮಾರಾಟ ಶೆಡ್ ತೆರವು