
ಪಾಟ್ನ(ಮೇ.30): ಮದುವೆಯಾಗಿ ವರ್ಷಗಳು ಕಳೆದಿದೆ. ಪತ್ನಿ ಮೇಲೆ ಅತಿಯಾದ ಪ್ರೀತಿ. ಆದರೆ ಪತ್ನಿ ಮಾತ್ರ ತನ್ನ ಖತರ್ನಾಕ್ ಬುದ್ದಿ ತೋರಿಸಿದ್ದಾಳೆ. ತನ್ನ ಹಳೇ ಲವರ್ ಜೊತೆ ನಿರಂತರ ಸಂಪರ್ಕದಲ್ಲಿದ್ದಳು. ಒಲ್ಲದ ಮನಸ್ಸಿನಿಂದ ಗಂಡನ ಜೊತೆ ಸಂಸಾರ ದೂಡುತ್ತಿದ್ದಳು. ಇದ್ಯಾವುದು ಅರಿಯದ ಪತಿ, ಸುಂದರ ಸಂಸಾರದಲ್ಲಿ ಹಾಯಾಗಿದ್ದ. ಆದರೆ ಸೋಮವಾರ ಸಂಜೆ ಪತ್ನಿ ತನ್ನ ಹಳೇ ಲವರ್ ಜೊತೆ ಓಡಿ ಹೋಗಿದ್ದಾಳೆ. ಈ ವಿಷಯ ತಿಳಿದು ಪತಿಗೆ ಆಘಾತವಾಗಿದೆ. ಜೊತೆಗೆ ಆಕ್ರೋಶವೂ ಹೆಚ್ಚಾಗಿದೆ. ಪತ್ನಿಯ ಮೇಲಿನ ಸಿಟ್ಟಿಗೆ ಮಾಡಿದ ಒಂದು ಕರೆಯಿಂದ ಇದೀಗ ಪತಿಯೇ ಅರೆಸ್ಟ್ ಆಗಿದ್ದಾರೆ. ಅಷ್ಟಕ್ಕೂ ಪತಿ ಮಾಡಿದ ಎಡವಟ್ಟು ಏನು ಗೊತ್ತಾ? ಪಾಟ್ನಾ ರೈಲು ನಿಲ್ದಾಣಕ್ಕೆ ಕರೆ ಮಾಡಿ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಇತ್ತ ಅಲರ್ಟ್ ಆದ ಪೊಲೀಸರು ಈತನ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ರಾಜೇಶ್ ಕುಮಾರ್ ರಂಜನ್ ಸೋಮವಾರ(ಮೇ.29) ರಾತ್ರಿ ಪಾಟ್ನಾ ರೈಲು ನಿಲ್ದಾಣದ ಕಚೇರಿಗೆ ಕರೆ ಮಾಡಿದ್ದಾನೆ. ಬಳಿಕ ಇದೇ ರಾತ್ರಿ ಪಾಟ್ನಾ ರೈಲು ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ರೈಲು ನಿಲ್ದಾಣದ ಸಿಬ್ಬಂದಿಗಳು, ರೈಲ್ವೇ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಇತ್ತ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.ಶ್ವಾನದಳ, ಪೊಲೀಸರು ದೌಡಾಯಿಸಿದ ಪಾಟ್ನಾ ರೈಲು ನಿಲ್ದಾಣವನ್ನು ಪರಿಶೀಲನೆ ನಡೆಸಿದ್ದಾರೆ. ತಡ ರಾತ್ರಿವರೆಗೂ ಪರಿಶೀಲನೆ ನಡೆದಿದೆ. ಪಾಟ್ನಾಗೆ ಆಗಮಿಸಬೇಕಿದ್ದ ಹಲವು ರೈಲುಗಳನ್ನು ಇತರ ನಿಲ್ದಾಣಗಲ್ಲಿ ನಿಲ್ಲಿಸಲಾಗಿತ್ತು. ಪ್ರಯಾಣಿಕರ ಬ್ಯಾಗು, ಲಗೇಜ್‌ಗಳನ್ನು ತಪಾಸಣೆ ಮಾಡಲಾಗಿತ್ತು. ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಕರೆ ಅನ್ನೋದು ಖಚಿತವಾಗಿದೆ.
ಯಪ್ಪಾ..ಹೀಗೂ ಮಾಡ್ತಾರಾ, ಒಬ್ನೇ ಗಂಡ ಬೋರಿಂಗ್ ಅಂತೆ, ಪತಿಯನ್ನೇ ಎಕ್ಸ್‌ಚೇಂಜ್ ಮಾಡ್ಕೊಂಡ ಹೆಂಡ್ತೀರು!
ಆತಂಕದ ವಾತಾರವಣ ಸೃಷ್ಟಿದ ವ್ಯಕ್ತಿ ಯಾರು ಅನ್ನೋ ತನಿಖೆ ಆರಂಭಗೊಂಡಿತು. ನಿನ್ನೆ ರಾತ್ರಿಯಿಂದ ತನಿಖೆ ಚುರುಕುಗೊಂಡಿತ್ತು. ಇಂದು ರಾಜೇಶ್ ಕುಮಾರ್ ರಂಜನ್ ಫೋನ್ ಟ್ರ್ಯಾಕ್ ಮಾಡಲಾಗಿತ್ತು. ಬಳಿಕ ರಾಜೇಶ್ ಕುಮಾರ್‌ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬೆದರಿಕೆ ಹಿಂದಿನ ಸತ್ಯ ಬಾಯ್ಬಿಟ್ಟಿದ್ದಾನೆ. ಪತ್ನಿ ಬೇರೊಬ್ಬನ ಜೊತೆ ಓಡಿ ಹೋದ ಕಾರಣದಿಂದ ಆಕ್ರೋಶಗೊಂಡಿದ್ದೆ. ಹೀಗಾಗಿ ದಿಕ್ಕು ತೋಚದೆ ಹುಸಿ ಬಾಂಬ್ ಕರೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಗಂಡ ಬೇಡ, ಅವ್ನೇ ಸಾಕು..ಹನಿಮೂನ್ ವೇಳೆ ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ!
ಪ್ರೀತಿಯಿಂದ ನೋಡಿಕೊಂಡಿದ್ದ ಪತ್ನಿ ಯಾರೊಬ್ಬನ ಜೊತೆ ಓಡಿ ಹೋಗಿದ್ದಾಳೆ. ಆಕೆಗೆ ಏನೂ ಕಡಿಮೆ ಮಾಡಿಲ್ಲ. ಆದರೆ ನನಗೆ ಮೋಸ ಮಾಡಿದ್ದಾಳೆ. ನನ್ನೊಂದಿಗೆ ನಾಟಕವಾಡಿ ಬೇರೊಬ್ಬನ ಜೊತೆ ಓಡಿ ಹೋಗಿದ್ದಾಳೆ. ಒಡವೆ, ಹಣ ದೋಚಿದ್ದಾಳೆ. ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಬಳಿ ಅಂಗಲಾಚಿದ್ದಾನೆ. ಹುಸಿ ಬಾಂಬ್ ಕರೆಗೆ ಆತನ ಮೇಲೆ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ