ವಯಸ್ಕರ 70  ಸೈಟ್‌ಗೆ ಭೇಟಿ ಕೊಟ್ಟವರ ಮಾಹಿತಿ ಲೀಕ್! ಲಿಸ್ಟ್‌ನಲ್ಲಿ ಯಾವುದೆಲ್ಲ ಇದೆ?

By Suvarna NewsFirst Published Sep 14, 2020, 9:04 PM IST
Highlights

ವಯಸ್ಕರ ವೆಬ್ ತಾಣಕ್ಕೆ ಭೇಟಿ ನೀಡಿದ್ದವರಿಗೆ ಶಾಕಿಂಗ್ ಸುದ್ದಿ/ ಡೇಟಾ ಕದ್ದ ಸೈಬರ್ ಕಳ್ಳರು/ ವೈಯಕ್ತಿಕ ಮಾಹಿತಿ ಕಳ್ಳತನ/ 66 ಮಿಲಿಯನ್ ವೈಯಕ್ತಿಕ  ಡೇಟಾ ಗಾಯಬ್

ನವದೆಹಲಿ(ಸೆ. 14)  ವಯಸ್ಕರ ವೆಬ್ ತಾಣಕ್ಕೆ ಭೇಟಿ ನೀಡಿದ್ದವರಿಗೆ ಶಾಕಿಂಗ್ ಸುದ್ದಿಯೊಂದಿದೆ.  ಅಡಲ್ಟ್ ವೆಬ್ ತಾಣಕ್ಕೆ ಭೇಟಿ ನೀಡಿದ್ದ ಸಾವಿರಾರು ಜನರ ಪರ್ಸನಲ್ ಮಾಹಿತಿ ಲೀಕ್ ಆಗಿದೆ.

ಎಪ್ಪತ್ತಕ್ಕೂ ಅಧಿಕ ಅಡಲ್ಟ್ ಸೈಟ್ ಮತ್ತು ಕೆಲ ಇ ಕಾಮರ್ಸ್ ಸೈಟ್ ಗಳಿಂದ ಮಾಹಿತಿ ಸೋರಿಕೆಯಾಗಿದೆ. ಹ್ಯಾಕ್ ಮಾಡಿದ ಸೈಬರ್ ಶೂರರು ಮಾಹಿತಿ ಕದ್ದಿದ್ದಾರೆ. ಸುರಕ್ಷತೆ ಇಲ್ಲದ ಇಲಾಸ್ಟಿಕ್ ಸರ್ಚ್ ಮಾಡಿದವರ ಮಾಹಿತಿ ಸೋರಿಕೆಯಾಗಿದೆ.  ಬ್ಲಾಕ್ ಮೇಲ್ ಮತ್ತು ವಂಚನೆಗೆ ಇದು ದಾರಿ ಮಾಡಿಕೊಡಬಹುದು ಎಂದು ಸೈಬರ್ ಸೆಕ್ಯೂರಿಟಿ ವಾರ್ನಿಂಗ್ ನೀಡಿದೆ.

ಕನ್ನಡದ ನಟ ನಟಿಯರೇ ಹ್ಯಾಕರ್ಸ್ ಟಾರ್ಗೆಟ್ ಯಾಕೆ?

ಡೇಟಿಂಗ್ ಆಪ್ ಹೆಸರಿನಲ್ಲಿ ಪುರುಷರು ಮಹಿಳೆಯರನ್ನು ಹುಡುಕುವುದನ್ನೇ ಬಂಡವಾಳ ಮಾಡಿಕೊಳ್ಳಲಾಗಿದೆ. 882ಜಿಬಿಗೂ ಅಧಿಕ ಮಾಹಿತಿಯನ್ನು ಕದ್ದು ಸೈಬರ್ ವಂಚಕರು ಸ್ಟೋರ್ ಮಾಡಿಕೊಂಡಿದ್ದಾರೆ ಎಂದು ವಿಪಿಎನ್ ತಿಳಿಸಿದೆ.

ಹೆಸರು, ಡೇಟ್ ಆಫ್ ಬರ್ತ್, ಲಿಂಗ, ಇಮೇಲ್ ಅಡ್ರೆಸ್, ಲೋಕೇಶನ್, ಐಪಿ ಅಡ್ರೆಸ್, ಪ್ರೋಪೈಲ್ ಚಿತ್ರವನ್ನು ಕದಿಯಲಾಗಿದೆ.  ಇದು ಬಳಕೆದಾರರು ಮತ್ತು ಸಂಬಂಧಿಸಿದ ಸೈಟ್ ಮೇಲೆ ಪರಿಣಾಮ ಬೀರಬಲ್ಲದು. ಡೇಟಿಂಗ್ ಮಿಲಿಯನ್ ವೈಯಕ್ತಿಕ ವಿಚಾರಗಳು ಸೈಬರ್ ಕಳ್ಳರ ಕೈ ಸೇರಿದೆ ಎಂದು ವಿಪಿಎನ್ ಮೆಂಟರ್ ತಂಡ ತಿಳಿಸಿದೆ.

click me!