ಪ್ಲಾಸ್ಟಿಕ್ ಕವರ್‌ನಲ್ಲಿ ನವಜಾತ ಗಂಡು ಮಗು ಪತ್ತೆ: ರಕ್ಷಣೆ ಮಾಡಿದ ಶಿವಮೊಗ್ಗ ಆರೋಗ್ಯ ಇಲಾಖೆ

ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟುಹೋಗಿರುವ ನವಜಾತ ಗಂಡು ಮಗುವನ್ನು ಶಿವಮೊಗ್ಗ ಆರೋಗ್ಯ ಇಲಾಖೆ ರಕ್ಷಣೆ ಮಾಡಿದೆ.


ಶಿವಮೊಗ್ಗ, (ಸೆ.14): ಶಿಕಾರಿಪುರ ತಾಲ್ಲೂಕು ಅಂಜನಾಪುರ ಗ್ರಾಮದ ಕರಿಬಸಪ್ಪ ಎಂಬುವರ ವಾಸದ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆ ಮನೆಯ ಬಲಭಾಗದಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟುಹೋಗಿರುವ ನವಜಾತ ಗಂಡು ಮಗುವು ಪತ್ತೆಯಾಗಿದೆ.

 ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಜಿಲ್ಲೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಭಾರ, ಶಿಕಾರಿಪುರ ಇವರ ನೇತೃತ್ವದಲ್ಲಿ ಮಗುವಿನ ರಕ್ಷಣೆ ಮಾಡಿದ್ದಾರೆ.

Latest Videos

 ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಮುಖಾಂತರ ಗ್ರಾಮಾಂತರ ಪೊಲೀಸ್ ಠಾಣೆ, ಶಿಕಾರಿಪುರಯಲ್ಲಿ FIR ದಾಖಲಿಸಿ ಮಗುವನ್ನು ಆರೋಗ್ಯ ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ಬಳಿಕ ಅಂಬ್ಯುಲೆನ್ಸ್ ಮೂಲಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ NICU ಘಟಕಕ್ಕೆ ಮಗುವಿನ ಸೂಕ್ತ ಚಿಕಿತ್ಸೆಗೆ ದಾಖಲಿಸಲಾಗಿದೆ.

ಶಿವಮೊಗ್ಗ  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಜಿ.ಜಿ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!