
ಬೆಂಗಳೂರು(ಜು.09): ಚಲಿಸುತ್ತಿದ್ದ ಕಾರಿನಿಂದ ಎಳೆದು ಕಾರ್ಪೊರೇಟರ್ ಅಣ್ಣನ ಮಗನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಚೌಡೇಶ್ವರಿ ನಗರ ಬಸ್ ನಿಲ್ದಾಣದ ಹತ್ತಿರ ನಡೆದಿದೆ. ವಾರ್ಡ್ ನಂಬರ್ 186 ಕಾರ್ಪರೇಟರ್ ಸೋಮಶೇಖರ್ ಅವರ ಅಣ್ಣನ ಮಗ ವಿನೋದ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ.
ಸಂಬಂಧಿಕರ ಮನೆಗೆ ತೆರಳಿ ವಿನೋದ್ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ವಿನೋದ್ ಜೊತೆ ಕಾರಿನಲ್ಲಿ ಇಬ್ಬರು ಮಹಿಳಾ ಸಂಬಂಧಿಕರು ಕೂಡ ಇದ್ದರು. ಈ ವೇಳೆ ಚೌಡೇಶ್ವರಿ ನಗರ ಬಸ್ ನಿಲ್ದಾಣದ ಬಳಿ ಕಾರು ಬರುತ್ತಿದ್ದಂತೆ ಆಗಮಿಸಿದ ದುಷ್ಕರ್ಮಿಗಳು ತಂಡವೊಂದು ಚಲಿಸುತ್ತಿದ್ದ ಕಾರಿಂದ ವಿನೋದ್‌ನನ್ನ ಎಳೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಕಾರಿನ ಗಾಜು ಪುಡಿಪುಡಿಯಾಗಿದೆ. ಕುಟುಂಬಸ್ಥರ ಎದುರಲ್ಲೇ ವಿನೋದ್ ಪ್ರಾಣಪಕ್ಷಿ ಹಾರಿಹೋಗಿದೆ. ಇದರಿಂದ ಘಟನಾ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
17 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಅಂಗವಿಕಲನ ಮರ್ಡರ್
ಕೊಲೆಯಾದ ವಿನೋದ್ ಅವರು ರಿಯಲ್ ಎಸ್ಟೇಟ್ ಮತ್ತು ಬ್ಯುಸಿನೆಸ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಐದು ವರ್ಷದ ಹಿಂದಷ್ಟೇ ವಿನೋದ್ ವಿವಾಹವಾಹಿದ್ದರು. ವಿನೋದ್‌ಗೆ ಇಬ್ಬರು ಪುಟ್ಟ ಕಂದಮ್ಮಗಳಿದ್ದಾರೆ.
ವಿನೋದ್‌ನನ್ನ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾದ ಆರೋಪಿಗಳನಮ್ನ ಹೆಡೆಮುರಿಕಟ್ಟಲು ರಾಮನಗರ ಎಸ್ಪಿ ರಾಮನಗರ ಎಸ್ಪಿ ಬಲೆ ಬೀಸಿದ್ದಾರೆ. ವಿನೋದ್ ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ