ಮಹಿಳೆಯ ಕಿರುಕುಳ ತಾಳದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ| ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ನಡೆದ ಘಟನೆ| ಈ ಸಂಬಂಧ ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಚಿಂಚೋಳಿ(ಜು.08): ಅನೈತಿಕ ಸಂಬಂಧ ಹೊಂದಿದ ಮಹಿಳೆಯ ಕಿರುಕುಳ ತಾಳದೇ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಪಟ್ಟಣದ ಸುಂದರನಗರ ನಿವಾಸಿ ಸುರೇಶ ಧರ್ಮಣ್ಣ ತುಮಕುಂಟಾ ಗೃಹರಕ್ಷಕ(43) ಎಂಬಾತನೇ ಮೃತಪಟ್ಟಿದ್ದಾನೆ. ವಿಧವೆ ಮಲ್ಲಮ್ಮ ಪ್ರಕಾಶ ವಚ್ಚ ಎಂಬ ಮಹಿಳೆಯೊಂದಿಗೆ ಕಳೆದ ಒಂದು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ. ಹೆಂಡತಿ ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಸಂಸಾರ ನಡೆಸಬೇಕೆಂದು ದಿನಾಲೂ ಕಿರುಕುಳ ನೀಡುತ್ತಿದ್ದರಿಂದ ಮಹಿಳೆಯ ಕಿರುಕುಳ ತಾಳದೇ ತನ್ನ ಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ಜಗದೇವಿ ಸುರೇಶ ತುಮಕುಂಟಾ ದೂರು ನೀಡಿದ್ದಾಳೆ.
KR ನಗರ: ಗೆಳೆಯರ ಮಧ್ಯೆ ಗಲಾಟೆ, ಬೇಸತ್ತು ಆತ್ಮಹತ್ಯೆಗೆ ಶರಣಾದ ಯುವಕ
ಈ ಸಂಬಂಧ ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಮ್ಮ ಪ್ರಕಾಶ ವಚ್ಚ ಇವಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಸಿಪಿಐ ಮಹಾಂತೇಶ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.