Asianet Suvarna News Asianet Suvarna News

ಮನೆಗೆ ಬರ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ಸುರಿಮಳೆ

ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ನಾಯಕನ ಹತ್ಯೆ/ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಮುಖಂಡ/ ಗುಂಡಿಟ್ಟು ಹತ್ಯೆ ಮಾಡಿದ ದುಷ್ಕರ್ಮಿಗಳು/ ಘಟನೆಗೆ ಕಾರಣ ಗೊತ್ತಾಗಿಲ್ಲ

BJP leader Arjun Yadav shot dead in Azamgarh UP Mah
Author
Bengaluru, First Published Oct 9, 2020, 5:36 PM IST
  • Facebook
  • Twitter
  • Whatsapp

ಅಜಮ್ ಘಡ(ಅ. 09) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಅಲ್ಲಿನ ಸರ್ಕಾರದ ವಿರುದ್ಧ ಕೇಸರಿ ಪಡೆ ಬೃಹತ್ ಪ್ರತಿಭಟನೆ ನಡೆಸಿತ್ತು. ಆದರೆ  ಇದೀಗ ಉತ್ತರ ಪ್ರದೇಶದ ಹರಿಪುರ್ ಬಳಿಯ ಪೊವಲ್ ನಲ್ಲಿ ದುಷ್ಕರ್ಮಿಗಳು  ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಹತ್ರಾಸ್ ರೇಪ್ ಪ್ರಕರಣದಲ್ಲಿ ಗೊತ್ತಿರದ ಶಾಕಿಂಗ್ ಮಾಹಿತಿ ಹೊರಬಿತ್ತು!

ಸ್ಥಳೀಯ  ಪಂಚಾಯತ್ ಸದಸ್ಯರೂ ಆಗಿರುವ ಅರ್ಜುನ್ ಯಾದವ್ (46) ಗುರುವಾರ ರಾತ್ರಿ ತಮ್ಮ ಅಂಗಡಿ ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ.  ಪೊಲೀಸರು ಘಟನೆ ಏನು ಕಾರಣ ಎಂಬ ಮಾಹಿತಿ ಕಲೆ  ಹಾಕುತ್ತಿದ್ದಾರೆ. ಹತ್ಯೆಯಿಂದಾಗಿ ಗ್ರಾಮದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದರಿಂದ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. 

Follow Us:
Download App:
  • android
  • ios