ನಾಲ್ಕು ವರ್ಷದ ಬಾಲಕನ ಕೊಲೆ| ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದಲ್ಲಿ ನಡೆದ ಘಟನೆ| ಮಾರಕಾಸ್ತ್ರಗಳಿಂದ ಕೊಚ್ಚಿ ಬಾಲಕನ ಕೊಲೆ ಮಾಡಿದ ಆರೋಪಿ|
ಬೆಳಗಾವಿ(ಜ.20): ಆಸ್ತಿ ವಿವಾದ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಬಾಲಕನನ್ನ ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ.
ಮಾರುತಿ ಸಂಕಣ್ಣವರ್ (4) ಕೊಲೆಯಾದ ದುರ್ದೈವಿ ಬಾಲಕನಗಿದ್ದಾನೆ. ಇಂದು ಬೆಳ್ಳಂಬೆಳಗ್ಗೆ ಸಂಬಂಧಿಯಿಂದಲೇ ಬಾಲಕನ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು; ಆಸ್ತಿಗಾಗಿ ತಾಯಿ ಕುತ್ತಿಗೆ ಸೀಳಿದ ಪಾಪಿ ಮಗ ಗೋಪಿ!
ಆರೋಪಿ ಈರಪ್ಪಾ ಸಂಕಣ್ಣವರ್ (35) ಎಂಬಾತನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬಾಲಕನನ್ನ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.