ಚಿಂಚೋಳಿ: ನಕಲಿ ಬಿಲ್‌ಗೆ ಸಹಿ ಮಾಡದ ಅಧಿಕಾರಿ ಮೇಲೆ ಪುರಸಭೆ ಸದಸ್ಯನ ಗುಂಡಾಗಿರಿ

By Suvarna News  |  First Published Jan 20, 2021, 10:33 AM IST

ಪುರಸಭೆಯ ಮುಖ್ಯಾಧಿಕಾರಿ ಮೇಲೆ ಹಲ್ಲೆ ಮಾಡಿದ ಸದಸ್ಯ| ಪುರಸಭೆ ಕಚೇರಿಯಲ್ಲಿಯೇ ಹಲ್ಲೆ| ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ನಡೆದ ಘಟನೆ| ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಸದಸ್ಯ ಆನಂದ್ ಮತ್ತು ಆತನ ಸಹಚರ ಶಶಿಕುಮಾರ್ ವಿರುದ್ಧ ದೂರು ದಾಖಲು| 


ಕಲಬುರಗಿ(ಜ.20): ಅಧಿಕಾರಿ ಮೇಲೆ ಪುರಸಭೆ ಸದಸ್ಯನೊಬ್ಬ ಗುಂಡಾಗಿರಿ ನಡೆಸಿದ ಘಟನೆ ಜಿಲ್ಲೆಯ ಚಿಂಚೋಳಿ ಪಟ್ಟಣದ ಪುರಸಭಾ ಕಚೇರಿಯಲ್ಲಿ ನಿನ್ನೆ(ಮಂಗಳವಾರ) ಸಂಜೆ ನಡೆದಿದೆ. ಪುರಸಭೆ ಸದಸ್ಯನ ಗುಂಡಾಗಿರಿಯ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.  ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯ್ ಅವರ ಮೇಲೆ ಸದಸ್ಯ ಆನಂದ್ ಟೈಗರ್ ಕಚೇರಿಯಲ್ಲಿಯೇ ಹಲ್ಲೆ ನಡೆಸಿದ್ದಾರೆ. 

ತನ್ನ ಬೆಂಬಲಿಗ ಶಶಿಕುಮಾರ್ ಜೊತೆ ಆಗಮಿಸಿದ ಪುರಸಭೆ ಸದಸ್ಯ ಆನಂದ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾನೆ.  ನಕಲಿ ಬಿಲ್‌ಗಳಿಗೆ ಸಹಿ ಮಾಡಿ, ಚೆಕ್ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಅಭಯ್ ಅವರಿಗೆ ಆನಂದ್ ಡಿಮ್ಯಾಂಡ್ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

Tap to resize

Latest Videos

ಕಲಬುರಗಿ ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆ..!

ಸಹಿ ಮಾಡದೇ ಇರೋದಕ್ಕೆ ಅಭಯ್ ಮೇಲೆ ಆನಂದ್ ಟೈಗರ್ ಹಲ್ಲೆ ಮಾಡಿದ್ದಾನೆ. ಅಧಿಕಾರಿ ಅಭಯ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಸದಸ್ಯ ಆನಂದ್ ಮತ್ತು ಆತನ ಸಹಚರ ಶಶಿಕುಮಾರ್ ವಿರುದ್ಧ ದೂರು ದಾಖಲಾಗಿದೆ. 
 

click me!