ರೈಲ್ವೆ ಇಲಾಖೆಯ ನೌಕರ ಎಂದು ಗಾಂಜಾ ಸಾಗಾಟ ಮಾಡುತ್ತಿದ್ದ ಅರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಮಹಮದ್ ಅಸ್ವಕ್ ಆರೋಪಿಯಾಗಿದ್ದು, ಈತ ಇಬ್ಬರನ್ನ ಮದುವೆ ಮಾಡಿಕೊಂಡಿದ್ದಾನೆ.
ಬೆಂಗಳೂರು (ಸೆ.01): ರೈಲ್ವೆ ಇಲಾಖೆಯ ನೌಕರ ಎಂದು ಗಾಂಜಾ ಸಾಗಾಟ ಮಾಡುತ್ತಿದ್ದ ಅರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಮಹಮದ್ ಅಸ್ವಕ್ ಆರೋಪಿಯಾಗಿದ್ದು, ಈತ ಇಬ್ಬರನ್ನ ಮದುವೆ ಮಾಡಿಕೊಂಡಿದ್ದಾನೆ. ಅಸ್ಸಾಂನಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಯು ಪುಣೆಯಲ್ಲಿ ರೈಲ್ವೆ ನೌಕರ ಎಂದು ಐಡಿ ಕಾರ್ಡ್ ಮಾಡಿಸಿಕೊಂಡಿದ್ದ. ಜೊತೆಗೆ ಎಸಿ ಕೋಚ್‌ಗಳಲ್ಲಿ ಕೆಲಸ ಮಾಡ್ತಿದ್ದವರನ್ನು ಪರಿಚಯ ಮಾಡಿಕೊಂಡಿದ್ದ. ಇನ್ನು ಅಸ್ಸಾಂ ರೈಲ್ವೆ ನಿಲ್ದಾಣದಲ್ಲಿ ರೈಲು ಕ್ಲೀನಿಂಗ್ ಸಮಯದಲ್ಲಿ ಗಾಂಜಾ ಲೋಡ್ ಮಾಡಿಸುತಿದ್ದ. ಸದ್ಯ ಅರೋಪಿಗೆ ಸಂಪರ್ಕವಿರುವ ರೈಲ್ವೆ ಎಂಪ್ಲಾಯ್‌ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಹೆಚ್ಚಿನ ತನಿಖೆಯನ್ನು ಉಪ್ಪಾರಪೇಟೆ ಪೊಲೀಸರು ಕೈಗೊಂಡಿದ್ದಾರೆ.
ಬೆಂಗಳೂರು ಮೂಲದ 6 ಜನ ನಕಲಿ ಪತ್ರಕರ್ತರ ಬಂಧನ: ಯೂಟ್ಯೂಬ್ ವಾಹಿನಿ ಹೆಸರಲ್ಲಿ ಬ್ಲ್ಯಾಕ್ ಮೇಲ್‌ಗೆ ಯತ್ನಿಸುತ್ತಿರುವ ಬೆಂಗಳೂರು ಮೂಲದ 6 ನಕಲಿ ಪತ್ರಕರ್ತರನ್ನು ಸ್ಥಳೀಯರ ಸಹಾಯದೊಂದಿಗೆ ಸೋಮವಾರ ರಾತ್ರಿ ಬಂಧಿಸಲಾಗಿದೆ. ಬೆಂಗಳೂರು ಮೂಲದ ರಾಜು.ಬಿ., ನಾಗರಾಜ ಸಿ, ಪ್ರದೀಪಗೌಡ, ಅರ್ಪಿತಾ, ಮಹಾದೇವಿ, ಮೇಘಾ ಎಸ್. ನಕಲಿ ಪತ್ರಕರ್ತರಾಗಿದ್ದು, ಅವರಿಂದ ಕ್ಯಾಮೆರಾ ಐಡಿ ಕಾರ್ಡ್ ಮತ್ತು ಮಾರುತಿ ಸ್ವಿಫ್ಟ್ ಕಾರ್‌ನ್ನು ಪೋಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಮೊದಲ ಪತಿಯ ಹತ್ಯೆಗೆ 2ನೇ ಗಂಡನಿಂದ ಕಿಡ್ನಾಪ್ ಮಾಡಿಸಿದ ಪತ್ನಿ, ಕಾರು ಕೈಕೊಟ್ಟು ಲಾಕ್ !
ಸ್ಥಳೀಯ ಅಕ್ಕಿ ವ್ಯಾಪಾರಿ ವೀರೇಶ ಎನ್ನುವವರ ಗೋದಾಮಿಗೆ ಮೂವರು ಯುವತಿಯರು ಮತ್ತು ಮೂವರು ಯುವಕರು ಸೇರಿಕೊಂಡು ಯೂಟ್ಯೂಬ್ ಲೋಗೋ ಮತ್ತು ಕ್ಯಾಮರಾ ಹಿಡಿದುಕೊಂಡು ಸಾರ್ವಜನಿಕವಾಗಿ ಮೀಡಿಯಾದವರಂತೆ ವರ್ತಿಸಿದ್ದಾರೆ. 112ಗೆ ಕಾಲ್ ಮಾಡಿ ಅಹಾರ ಇಲಾಖೆ ಅಧಿಕಾರಿಗಳಿಗೆ ಕಾಲ್ ಮಾಡಿ ಅವರನ್ನು ಕರೆಯಿಸಿ ಅಧಿಕಾರಿಗಳೊಂದಿಗೆ ಮಾಧ್ಯಮ ದವರಂತೆ ವರ್ತಿಸಿದ್ದಾರೆ. ಅಲ್ಲದೇ ಪಡಿತರ ಆಹಾರ ಧಾನ್ಯಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.
ಇದರ ಬಗ್ಗೆ ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡುವದಾಗಿ ಬೆದರಿಕೆಯನ್ನು ಅಂಗಡಿ ಮಾಲೀಕರಿಗೆ ಹಾಕಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಸೇರಿದ್ದರಿಂದ ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ಆರು ಜನ ಗಲಿಬಿಲಿಯಾಗಿದ್ದು, ಠಾಣೆ ಪಿಎಸ್‌ಐ ಪ್ರಕಾಶರಡ್ಡಿ ಡಂಬಳರವರು ಠಾಣೆಗೆ ಕರೆತಂದು ವಿಚಾರಿಸುತ್ತಿದ್ದಂತೆ ನಕಲಿ ಪತ್ರಕರ್ತರು ಎನ್ನುವ ಸತ್ಯ ಹೊರಬಿದ್ದಿದೆ. ಈ ಕುರಿತು ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈಕೊಟ್ಟ ಲಿಫ್ಟ್: ಭದ್ರತಾ ಸಿಬ್ಬಂದಿ, ಲಿಫ್ಟ್ ಆಪರೇಟರ್‌ಗೆ ಥಳಿಸಿದ ಉದ್ಯಮಿ ಬಂಧನ
ಅಕ್ರಮವಾಗಿ ಬೆಳೆದ ಗಾಂಜಾ ಗಿಡ ವಶಕ್ಕೆ: ಔರಾದ್ ತಾಲೂಕಿನ ಚಿಕ್ಲಿ (ಜೆ) ಗ್ರಾಪಂ ವ್ಯಾಪ್ತಿಯ ಕಿಶನ್ ತಾಂಡಾದ ಪುಂಡಲಿಕ್ ಬಂಧಿತ ಆರೋಪಿ. ತನ್ನ ಸ್ವಂತ ಜಮೀನಿನಲ್ಲಿ ಹತ್ತಿ ಬೆಳೆಗಳ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಔರಾದ್ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ಅವರ ಮಾರ್ಗದರ್ಶನದಲ್ಲಿ ಚಿಂತಾಕಿ ಪೊಲೀಸ್ ಠಾಣಾ ಪಿಎಸ್‌ಐ ಸಿದ್ದಲಿಂಗ ಹಾಗೂ ತಂಡ ದಾಳಿ ನಡೆಸಿ ಆರೋಪಿ ಪುಂಡಲಿಕ್ ನನ್ನು ಬಂಧಿಸಿ ಸುಮಾರು 15ಕೆ.ಜಿ ಗಾಂಜಾ ಗಿಡಗಳನ್ನು ವಶಪಡಿಕೊಂಡು ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾಳಿಯಲ್ಲಿ ಮುಖ್ಯಪೇದೆ ಸತೀಶ ಗಂಗಾ, ಶಿವಕುಮಾರ ಸ್ವಾಮಿ, ಅರುಣ್ ಪಟೇಲ್, ಗೋರಖನಾಥ್ ರಾಠೋಡ್, ಪ್ರಕಾಶ ಉಪಸ್ಥಿತರಿದ್ದರು.