ಸಾವಿರಾರು ಫಾಲೋವರ್‌ಗಳಿಗೆ ಕೋಟಿ ಕೋಟಿ ಪಂಗನಾಮ ಹಾಕಿದ ಯೂಟ್ಯೂಬ್‌ ಸ್ಟಾರ್‌..!

By BK AshwinFirst Published Aug 31, 2022, 5:05 PM IST
Highlights

ಥೈಲ್ಯಾಂಡ್ ಪೊಲೀಸರು ಯೂಟ್ಯೂಬ್‌ ಸ್ಟಾರ್‌ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ್ದಾರೆ. ಇದಕ್ಕೆ ಕಾರಣ ಆಕೆ ಆವಿರಾರು ಜನರಿಗೆ ಕೋಟಿ ಕೋಟಿ ಹಣ ವಂಚನೆ ಮಾಡಿದ್ದಾರೆ ಎಂದು ವರದಿಯಾಗಿದೆ. 

ಜನಪ್ರಿಯ ಥಾಯ್ಲೆಂಡ್‌ ಯೂಟ್ಯೂಬರ್‌ ಒಬ್ಬರು  ತನ್ನ ಸಾವಿರಾರು ಅನುಯಾಯಿಗಳಿಗೆ ವಿದೇಶಿ ವಿನಿಮಯ ವ್ಯಾಪಾರ ಹಗರಣದ ಮೂಲಕ ಸುಮಾರು 55 ಮಿಲಿಯನ್ ಡಾಲರ್‌ ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಹಣ ಹೂಡಿಕೆಯ ಮೇಲೆ ಆಕರ್ಷಕ ಬಡ್ಡಿ ನೀಡುವುದಾಗಿ ಹಾಗೂ ಹೆಚ್ಚು ಆದಾಯದ ಭರವಸೆ ನೀಡಿ ತನ್ನ ಫಾಲೋವರ್‌ಗಳಿಗೆ ಈಕೆ ವಂಚಿಸಿದ್ದಾಳೆ ಎಂದು ವರದಿಯಾಗಿದೆ. ನಟ್ಟಿ ಎಂದು ಖ್ಯಾತಿ ಪಡೆದಿರುವ ನಟ್ಟಮನ್ ಖೊಂಗ್‌ಚಾಕ್ ಅವರು ಡ್ಯಾನ್ಸ್ ವೀಡಿಯೊಗಳನ್ನು ಪೋಸ್ಟ್ ಮಾಡಿದ ಯೂಟ್ಯೂಬ್‌ (YouTube) ಚಾನಲ್‌ ಮೂಲಕ ಈಕೆ 8 ಲಕ್ಷ 47 ಸಾವಿರಕ್ಕೂ ಅಧಿಕ ಚಂದಾದಾರರನ್ನು ಪಡೆದುಕೊಂಡಿದ್ದಾರೆ. 

ಇನ್ನು, ತನ್ನ ಇನ್ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಭವಿಷ್ಯದ ವಿದೇಶಿ ವಿನಿಮಯ ವ್ಯಾಪಾರಿಗಳಿಗಾಗಿ (Forex Traders) ಖಾಸಗಿ ಕೊರ್ಸ್‌ಗಳ ಬಗ್ಗೆ ಜಾಹೀರಾತುಗಳನ್ನು ನೀಡಿದ್ದಾಳೆ. ಅಲ್ಲದೆ, ಈ ವ್ಯಾಪಾರದಿಂದ ನನಗಾದ ಲಾಭಗಳು ಎಂದು ಹೇಳಿಕೊಂಡು ಆಕೆ ಅನೇಕ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಳು ಎಂದು ತಿಳಿದುಬಂದಿದೆ. ನಂತರ ಈ ಪೋಸ್ಟ್‌ಗಳನ್ನು ನಂಬಿದ 6,000 ಕ್ಕೂ ಹೆಚ್ಚು ಜನರು ಹೂಡಿಕೆ ಮಾಡಲು ನಟ್ಟಮನ್ ಖೊಂಗ್‌ಚಾಕ್‌ಗೆ ಹಣವನ್ನು ನೀಡಿದರು ಎಂದು ಡಜನ್‌ಗಟ್ಟಲೆ ಸಂತ್ರಸ್ತರಿಗೆ ಥಾಯ್ ಪೋಲಿಸ್‌ನಲ್ಲಿ ದೂರುಗಳನ್ನು ಸಲ್ಲಿಸಲು ಸಹಾಯ ಮಾಡಿದ ವಕೀಲರನ್ನು ಉಲ್ಲೇಖಿಸಿ ನೇಷನ್ ಪತ್ರಿಕೆ ವರದಿ ಮಾಡಿದೆ. ತಮ್ಮ ಹೂಡಿಕೆಯ ಮೇಲೆ 35% ನಷ್ಟು ಆದಾಯದ ಭರವಸೆಯೊಂದಿಗೆ ಆಕೆಯ ಫಾಲೋವರ್‌ಗಳು ಆಮಿಷಕ್ಕೆ ಒಳಗಾಗಿದ್ದರು ಎಂದು ವರದಿ ಹೇಳಿದೆ.

ವಿಡಿಯೋಗಾಗಿ ಮನೆಯಲ್ಲಿ ಹಾವು ಸಾಕಿದ youtuber ಬಂಧನ

ತನ್ನ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮೇ ತಿಂಗಳಲ್ಲಿ, ನಟ್ಟಮನ್ ಅವರು ಹೂಡಿಕೆದಾರರಿಗೆ 1 ಬಿಲಿಯನ್ ಬಹ್ಟ್ (27.5 ಮಿಲಿಯನ್ ಡಾಲರ್‌) ಹಣ ನೀಡಬೇಕೆಂದು ಹೇಳಿದ್ದರು. ಅಲ್ಲದೆ, ವೀಡಿಯೊದಲ್ಲಿ, ತನ್ನ ಬ್ರೋಕರ್ ತನ್ನ ಟ್ರೇಡಿಂಗ್ ಅಕೌಂಟ್‌ ಹಾಗೂ ಹಣವನ್ನು ಮಾರ್ಚ್‌ನಿಂದ ನಿರ್ಬಂಧಿಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ, ಆದರೂ ಅನುಯಾಯಿಗಳ ಹಣ ಮರುಪಾವತಿಸಲು ಪ್ರಯತ್ನಿಸುವುದಾಗಿಯೂ ಹೇಳಿದ್ದಾಳೆ. ಇನ್ನು, ಮಂಗಳವಾರ ತನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಕಳುಹಿಸಿದ ನೇರ ಸಂದೇಶಕ್ಕೆ ನಥಾಮನ್ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಮದಿದೆ.

ಸೈಬರ್ ಕ್ರೈಮ್ (Cyber Crime) ಇನ್ವೆಸ್ಟಿಗೇಶನ್ ಬ್ಯೂರೋದ (Investigation Bureau) ಪೊಲೀಸ್ ಅಧಿಕಾರಿ ವಟ್ಟಾನಾ ಕೇತುಂಪೈ ಪ್ರಕಾರ, ಕಳೆದ ವಾರ ಇಂಟರ್ನೆಟ್ ಅಪರಾಧಗಳಲ್ಲಿ ಭಾಗಿಯಾಗಿರುವ ಥೈಲ್ಯಾಂಡ್ ಪೊಲೀಸ್ ಘಟಕವು ನಟ್ಟಮನ್ ವಿರುದ್ಧ ವಂಚನೆಗಾಗಿ ಬಂಧನ ವಾರಂಟ್ (Arrest Warrant) ಹೊರಡಿಸಿದೆ. ಇಲ್ಲಿಯವರೆಗೆ, ಬ್ಯೂರೋ 102 ಜನರಿಂದ ದೂರುಗಳನ್ನು ಸ್ವೀಕರಿಸಿದ್ದು, ಅವರು ಒಟ್ಟು 30 ಮಿಲಿಯನ್ ಬಹ್ತ್ ಕಳೆದುಕೊಂಡಿದ್ದಾರೆ ಎಂದೂ ಅವರು ಹೇಳಿದರು. ಹಾಗೆ, ಹಣ ಕಳೆದುಕೊಂಡಿರುವ ಹೆಚ್ಚು ಜನ ಪ್ರತಿದಿನವೂ ಮುಂದೆ ಬರುತ್ತಾರೆ, ಹೆಚ್ಚಿನವರು ಹತ್ತಾರು ಸಾವಿರ ಬಹ್ತ್‌ಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ ಎಂದೂ ವಟ್ಟಾನಾ ಹೇಳಿದರು. ಹಾಗೂ, ಇತರೆ ಪೊಲೀಸ್ ಕಚೇರಿಗಳಲ್ಲಿ ದೂರುಗಳು ದಾಖಲಾಗಿರುವುದರಿಂದ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದೂ ಅವರು ಹೇಳಿದರು. 

ಹಣದುಬ್ಬರ, ಆರ್ಥಿಕ ಹಿಂಜರಿತ ಭೀತಿಗೆ ನಲುಗಿದ ಮೆಟಾ: ಆದಾಯ ಕುಸಿತ, ಷೇರುಗಳು ಅಲ್ಲೋಲ ಕಲ್ಲೋಲ

ಜೂನ್‌ನಿಂದ ನಟ್ಟಮನ್‌ ಸಾಮಾಜಿಕ ಮಾಧ್ಯಮದಲ್ಲಿ (Social Media) ಕಾಣಿಸಿಕೊಂಡಿಲ್ಲವಾದ್ದರಿಂದ, ಆಕೆ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ ಎಂದು ಫಾಲೋವರ್‌ಗಳು ಊಹಿಸುತ್ತಿದ್ದಾರೆ ಎಂದು ಸಹ ನೇಷನ್ ವರದಿ ಮಾಡಿದೆ. ಆದರೂ, ಆಕೆ ಥೈಲ್ಯಾಂಡ್ ತೊರೆದಿಲ್ಲ ಎಂದು ವಲಸೆ ದಾಖಲೆಗಳು (Immigration Records) ತೋರಿಸುತ್ತವೆ ಎಂದೂ ಸೈಬರ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋದ ಪೊಲೀಸ್ ಅಧಿಕಾರಿ ವಟ್ಟಾನಾ ಕೇತುಂಪೈ ಹೇಳಿದ್ದಾರೆ.  

click me!