ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದ ಘಟನೆ
ವಿಜಯನಗರ (ಸೆ.13): ನೇಣು ಹಾಕುವುದನ್ನು ತಪ್ಪಿಸೋದನ್ನು ಬಿಟ್ಟು ಜನರು ವಿಡಿಯೋ ಮಾಡಿದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ವಿದ್ಯುತ್ ಕಂಬಕ್ಕೆ ಮಂಜುನಾಥ್(25) ಎಂಬಾತ ಮೊನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.
ಹನುಮನಹಳ್ಳಿಯ ಫ್ಲೈಓವರ್ ಮೇಲಿನ ವಿದ್ಯುತ್ ಕಂಬಕ್ಕೆ ಮಂಜುನಾಥ್ ನೇಣು ಹಾಕಿಕೊಂಡಿದ್ದನು. ಕುಡಿದು ಹೀಗೆ ಮಾಡಿಕೊಳ್ತಿದ್ದಾನೆ ಎಂದು ಮಾತಾಡಿಕೊಂಡು ಭೂಪರು ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡೋ ಬದಲು ಆತ್ಮಹತ್ಯೆಯನ್ನ ತಪ್ಪಿಸಿದ್ದರೆ ಮಂಜುನಾಥ್ ಬದುಕುಳಿಯುತ್ತಿದ್ದ.
ಜೊತೆಯಾಗಿ ಸಾಯೋಣ ಅಂತಾ ದಂಪತಿ ತೀರ್ಮಾನಿಸಿದ್ರು.. ಅತಿಯಾದ ತೂಕದಿಂದಾಗಿ ಹೆಂಡ್ತಿ ಬಚಾವ್ ಆದಳು!
ಈ ವಿಡಿಯೋ ಮರೆಯಾದ ಮಾನವೀಯತೆಗೆ ಕನ್ನಡಿ ಹಿಡಿದಂತಿದೆ. ಆತ್ಮಹತ್ಯೆ ಮಾಡಿಕೊಳ್ಳೋದನ್ನು ತಪ್ಪಿಸಬಹುದಾಗಿತ್ತು, ಆದರೆ, ಇಲ್ಲಿನ ಮಾತ್ರ ವಿಡಿಯೋ ಮಾಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ನೇಣಿಗೆ ಶರಣಾಗಿದ್ದಾನೆ ಅಂತ ತಿಳಿದು ಬಂದಿದೆ. ತಾನೇ ಉಟ್ಟಿದ್ದ ಲುಂಗಿಯಿಂದ ನೇಣಿಗೆ ಶರಣಾಗಿದ್ದಾನೆ ಮಂಜುನಾಥ್.