ಕೊರೋನಾ ವಿರುದ್ಧದ ಹೊರಾಟ/ ಪಾದರಾಯನಪುರ ಹಲ್ಲೆ ಪ್ರಕರಣ/ ಪೊಲೀಸರಿಗೆ ದೊಡ್ಡ ತಲೆನೋವಾದ ಫರ್ಜವಾ/ ವಿಚಾರಣೆ ವೇಳೆ ತಾನು ಮಂಗಳಮುಖಿ ಎಂದ ಆರೋಪಿ
ಬೆಂಗಳೂರು(ಏ. 20) ಪಾದರಾಯನಪುರ ಪ್ರಕರಣದಲ್ಲಿ ಹಲ್ಲೆ ಆರೋಪಿಯಾಗಿ ಬಂಧನಕ್ಕೆ ಒಳಗಾಗಿರುವ ಫರ್ಜವಾ ಪೊಲೀಸರಿಗೆ ಹೊಸ ತಲೆನೋವಾಗಿದ್ದಾರೆ. ಈಕೆಯನ್ನು ಮಹಿಳೆ ಎಂದು ಹೇಳಲಾಗಿತ್ತು ಆದರೆ ವಿಚಾರಣೆ ವೇಳೆ ತಾನು ಮಂಗಳಮುಖಿ ಅಂಥ ಹೇಳಿದ್ದಾಳೆ.
ಅನಿವಾರ್ಯವಾಗಿ ಪೊಲೀಸರು ಫರ್ಜುವಾರನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಈಕೆಯನ್ನು ಸೇರಿ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸುತ್ತ ಇದ್ದಾರೆ. ಕಬೀರ್, ಇರ್ಷಾದ್ ಅಹ್ಮದ್, ಹರ್ಷದ್ ಹಾಗೂ ಫರ್ಜುವಾ ಪೊಲೀಸ್ ವಿಚಾರಣೆ ನಡೆಯುತ್ತಿದೆ.
ಸುವರ್ಣ ನ್ಯೂಸ್ ಪ್ರಶ್ನೆಗೆ ಉತ್ತರಿಲಾದೆ ಜಮೀರ್ ವಿಲ-ವಿಲ
ಭಾನುವಾರ ರಾತ್ರಿ ಬೆಂಗಳೂರು ಚಾಮರಾಜಪೇಟೆ ಪಾದರಾಯನಪುರದಲ್ಲಿ ದೊಡ್ಡ ಗಲಾಟೆಯೇ ಸಂಭವಿಸಿತ್ತು. ಕ್ವಾರಂಟೈನ್ ಗೆ ಕೊರೋನಾ ಶಂಕಿತರನ್ನು ಕರೆದುಕೊಂಡು ಹೋಗಲು ಬಂದಿದ್ದ ವೈದ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆಯೇ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಇದಾದ ಮೇಲೆ ಆರೋಪಿಗಳ ಹೆಡೆಮುರಿ ಕಟ್ಟಲಾಗಿತ್ತು.