ಬೆಂಗಳೂರು(ಏ. 16) ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು ಪ್ಯಾರಿಸ್ ನಿಂದ ಬೆಂಗಳೂರಿಗೆ ಕರೆತಂದಿದ್ದರು. ಎಡಿಜಿಪಿ ಅಮರ್ ಕುಮಾರ್ ಪಾಂಡೆ ನೇತೃತ್ವದ ತಂಡ ಕರೆದುಕೊಂಡು ಬಂದಿತ್ತು.
ಫೆಬ್ರವರಿ ಕೊನೆವಾರದಲ್ಲಿ ರವಿ ಪೂಜಾರಿಯನ್ನು ಕರೆತಂದ ಸಿಸಿಬಿ ಅನೇಕ ಪ್ರಕರಣಗಳ ಕುರಿತು ತನಿಖೆ ಆರಂಭ ಮಾಡಿತ್ತು. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸುಲಿಗೆ, ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ರವಿ ಪೂಜಾರಿ ಪೊಲೀಸರಿಗೆ ಬೇಕಾಗಿದ್ದ.
ಮುತ್ತಪ್ಪ ರೈ ಈಗ ಹೇಗಿದ್ದಾರೆ, ನೀವು ನೋಡಿರದ ರೈ ಲೋಕ
ಈಗ ಇದೇ ರವಿ ಪೂಜಾರಿ ಸಂಬಂಧ ಸಿಸಿಬಿ ಮುತ್ತಪ್ಪ ರೈ ಅವರನ್ನು ವಿಚಾರಣೆ ಮಾಡುತ್ತಿದೆ. ಸಿಸಿಬಿ ಎಸಿಪಿ ವೇಣುಗೋಪಾಲ್ ಹಾಗೂ ಇನ್ಸ್ ಪೆಕ್ಟರ್ ಬೋಳೆತ್ತಿನ ರೈ ಅವರಿಗೆ ಅನೇಕ ಪ್ರಶ್ನೆ ಕೇಳಿದ್ದಾರೆ. 2 ಗಂಟೆಗಳ ಕಾಲ ರವಿ ಪೂಜಾರಿ ಕುರಿತು ವಿಚಾರಣೆ ಮಾಡಲಾಗಿದೆ.
ಅನಾರೋಗ್ಯಕ್ಕೆ ತುತ್ತಾಗಿರುವ ಮುತ್ತಪ್ಪ ರೈ ಮಾಧ್ಯಮದವರನ್ನು ಕರೆಸಿ ಮಾತನಾಡಿದ್ದರು. ಮುತ್ತಪ್ಪ ರೈ ಆರೋಗ್ಯದ ಕುರಿತು ಎರಡು ದಿನಗಳ ಹಿಂದೆ ವದಂತಿಗಳು ಹಬ್ಬಿದ್ದವು. ಒಟ್ಟಿನಲ್ಲಿ ಸಿಸಿಬಿ ಪೊಲೀಸರು ಎರಡನೇ ಹಂತದ ಮಾಹಿತಿ ಕಲೆ ಹಾಕಿದ್ದಾರೆ.
15 ವರ್ಷಗಳಿಂದ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಸೆನೆಗಲ್ ನಂಟಿತ್ತು. ಭೂಗತ ಪಾತಕಿ ರವಿ ಪೂಜಾರಿ ಕಳೆದ ವರ್ಷ ಸೆನೆಗಲ್‌ನಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದ. ಪ್ರಾರಂಭದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಜತೆ ಸಂಬಂಧ ಹೊಂದಿದ್ದ ಪೂಜಾರಿ ಬಳಿಕ ದಾವೂದ್ ಇಬ್ರಾಹಿಂ ಜತೆಗೆ ಸಹ ಕೆಲಸ ಮಾಡಿದ್ದ.