* ಆರೋಪಿಯಿಂದ 5.8 ಲಕ್ಷ ಮೌಲ್ಯದ ಚರಸ್ ಜಪ್ತಿ
* ಡ್ರಗ್ಸ್ ಮಾರಾಟದ ವೇಳೆ ಸಿಕ್ಕಿಬಿದ್ದ ಆರೋಪಿ
* ಖಚಿತ ಮಾಹಿತಿ ಪೊಲೀಸರ ದಾಳಿ
ಬೆಂಗಳೂರು(ಡಿ.29): ಹೊಸ ವರ್ಷದ ಪಾರ್ಟಿಗಳಿಗೆ ಡ್ರಗ್ಸ್(Drugs) ಪೂರೈಸಲು ಸಜ್ಜಾಗಿದ್ದ ಪೆಡ್ಲರ್‌ವೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಕೇರಳ(Keraka) ಮೂಲದ ಬೆಸಿಲ್ ಜಾರ್ಜ್ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) 5.8 ಲಕ್ಷ ಮೌಲ್ಯದ ಚರಸ್ ಜಪ್ತಿ ಮಾಡಲಾಗಿದೆ.
ಎಚ್‌ಬಿಆರ್ ಲೇಔಟ್ 1ನೇ ಹಂತದ 4ನೇ ಬ್ಲಾಕ್‌ನ ಅರಣ್ಯ ಇಲಾಖೆ ಕಚೇರಿ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹಿಮಾಚಲ ಪ್ರದೇಶದಿಂದ(Himachal Pradesh) ಚರಸ್ ತಂದು ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಹೊಸ ವರ್ಷಾಚರಣೆಗೆ ಆಯೋಜಿಸಿರುವ ಪಾರ್ಟಿಗಳಿಗೆ ಪೂರೈಸಲು ಯೋಜಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಗಳನ್ನು ಡ್ರಗ್‌ನಿಂದ ರಕ್ಷಿಸಿ: VHPಗೆ ಕ್ರಿಶ್ಚಿಯನ್ ಮಹಿಳೆ ಪತ್ರ!
ಬೆಂಗ್ಳೂರಲ್ಲಿ ಡ್ರಗ್ಸ್ ಹಾವಳಿ, ಕೋಟಿ ಮೊತ್ತದ ಆಶಿಸ್ ಆಯಿಲ್ ವಶ!
ಹೊಸ ವರ್ಷಕ್ಕೂ(New Year) ಮುನ್ನ ನಗರದಲ್ಲಿ ಗಾಂಜಾ ಘಾಟು ಜೋರಾಗಿದ್ದು ಪೊಲೀಸರು ಹಲವು ಕಡೆ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಎಚ್ಎಎಲ್ ಪೊಲೀಸರು (Bengaluru Police) ಕಾರ್ಯಾಚರಣೆ ನಡೆಸಿ ಮೂವರು ಗಾಂಜಾ ಮಾರಾಟಗಾರರನ್ನು ಡಿ. 21 ರಂದು ಬಂಧಿಸಿದ್ದರರು. ಮುಬಾರಕ್, ಅಪ್ರೋಜ್, ಹಾಗೂ ಇಮ್ರಾನ್ ಬಂಧಿತ ಆರೋಪಿಗಳು.
ವಿಭೂತಿ ಪುರದ ತೋಪಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಸೆರೆಸಿಕ್ಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಚ್ ಎ ಎಲ್ ಪೊಲೀಸರ ದಾಳಿ ನಡೆಸಿದ್ದರು. ದಾಳಿ ವೇಳೆ 9 ಕೆಜಿ ಗಾಂಜಾ , ಒಂದು ಬೈಕ್ ಹಾಗೂ ತೂಕದ ಮಷಿನ್ ವಶಕ್ಕೆ ಪಡೆಯಲಾಗಿದೆ.
ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ವಿವರ ನೀಡಿದ್ದಾರೆ. ಹೊಸ ವರ್ಷಕ್ಕೆ ಮಾದಕ ವಸ್ತು (Drugs) ಸರಬರಾಜು ಅಗುತ್ತಿದೆ ಅನ್ನೋ ಮಾಹಿತಿ ಇತ್ತು. ಈ ನಿಟ್ಟಿನಲ್ಲಿ ನಮ್ಮ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಮೈಕೋ ಲೇಔಟ್ ಪೊಲೀಸರು 1 ಕೋಟಿ ಮೌಲ್ಯದ ಆಶಿಸ್ ಆಯಿಲ್ ವಶಪಡಿಸಿಕೊಂಡಿದ್ದಾರೆ.. ಪ್ರಕಾಶ್ ಹಾಗೂ ಧಾಮರಾಜ್ ಬಂಧಿತ ಆರೋಪಿಗಳು. ನ್ಯೂ ಇಯರ್ ಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಮಾದಕ ವಸ್ತುಗಳನ್ನು ತರುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದು ವೈಜಾಗ್ ನಿಂದ ಮಾದಕ ವಸ್ತು ತೆಗೆದುಕೊಂಡು ಬಂದಿದ್ದರು ಎನ್ನುವ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ನಿರಂತರ ಕಾರ್ಯಾಚರಣೆ:
ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರ್ ರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಮಾಡಲಾಗಿತ್ತು. ನ್ಯೂ ಇಯರ್ ಗೆ ನಶೆಯ ಮತ್ತೆರಿಸಲು ಸಜ್ಜಾಗಿದ್ದ ಗ್ಯಾಂಗ್ ಅಂದರ್ ನ್ನು ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಬಂಧಿಸಿತ್ತು.
Bollywood Drugs: ಹೀಗೂ ಆಗುತ್ತದೆ...ನಕಲಿ NCB ಅಧಿಕಾರಿಗಳ ಕಾಟಕ್ಕೆ ಪ್ರಾಣ ತೆತ್ತ ನಟಿ!
ಕೋಣನಕುಂಟೆ ಕೆ.ಎಸ್.ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನೊಳಂಡ ಸ್ಪೆಷಲ್ ಟೀಂ ಮಾದಕ ವಸ್ತು ದಂಧೆಕೋರರ ಮೇಲೆ ದಾಳಿ ಮಾಡಿದೆ. ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸಿದ್ದ ಮೂವರು ಅಂತರಾಜ್ಯ ಪೆಡ್ಲರ್ ಹಾಗೂ ಮೂವರು ವಿದೇಶಿ ಪ್ರಜೆಗಳ ಬಂಧನ ಮಾಡಲಾಗಿದೆ. ನ್ಯೂ ಇಯರ್ ಹಿನ್ನಲೆ ಬೆಂಗಳೂರಲ್ಲಿ ಮಾದಕವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.
ಕೋಣನಕುಂಟೆ ಪೊಲೀಸರಿಂದ ನಗರದಲ್ಲಿ ಡ್ರಗ್ ಸರಬರಾಜು ಮಾಡುತ್ತಿದ್ದ ಮಣಿಪುರಿ ಗ್ಯಾಂಗ್ ಬಂಧನವಾಗಿದೆ. ಹೆರಾಯಿನ್ ಮಾರಾಟ ಮಾಡಲು ಯತ್ನಿಸ್ತಿದ್ದ ಮೂವರು ಸೆರೆ ಸಿಕ್ಕಿದ್ದರು.. ಮೊಯಿನ್ ಅಲಾಂ, ಮೊಹದ್ ಸಯಿದುರ್, ವಾಕೀಮ್ ಯೂನಸ್ ಎಂಬುವರನ್ನು ಬಂಧಿಸಲಾಗಿತ್ತು. ಬಂಧಿತರಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ 111 ಗ್ರಾಂ ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಒಂದು ಗ್ರಾಂ ಹೆರಾಯಿನ್ ನನ್ನ ಇಪ್ಪತ್ತರಿಂದ ಇಪ್ಪತೈದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.