Live In Relationship : ಎಣ್ಣೆ ಹಾಕಲು ಹಣ ಕೊಡದ ಸಂಗಾತಿ ಮೂಗು ಕತ್ತರಿಸಿದ ಪಟೇಲ!

Published : Dec 28, 2021, 09:09 PM IST
Live In Relationship : ಎಣ್ಣೆ ಹಾಕಲು ಹಣ ಕೊಡದ ಸಂಗಾತಿ ಮೂಗು ಕತ್ತರಿಸಿದ ಪಟೇಲ!

ಸಾರಾಂಶ

* ಮದ್ಯ ಖರೀದಿಗೆ ಹಣ ಕೊಡದ ಪಾರ್ಟನರ್ ಮೂಗು ಕತ್ತರಿಸಿದ *ಮೂಗು ಕತ್ತರಿಸಿ ಓಡಿಹೋದವನ ಕರೆದಂತದರು * ಕ್ಷುಲ್ಲಕ ಕಾರಣಕ್ಕೆ ಸಂಗಾತಿ ಮೇಲೆ ಹಲ್ಲೆ ಮಾಡಿ ಓಡಿದ್ದ

ಭೋಪಾಲ್ (ಡಿ. 28)   ಇದು ಒಂದು ವಿಚಿತ್ರ ಪ್ರಕರಣ. ಮಧ್ಯಪ್ರದೇಶದ (Madhya Pradesh) ಖಾಂಡ್ವಾ ಜಿಲ್ಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಮದ್ಯ (Liquor) ಖರೀದಿಸಲು ಹಣ ನೀಡಲು ನಿರಾಕರಿಸಿದ್ದಕ್ಕೆ  ತನ್ನ 35 ವರ್ಷದ ಲಿವ್-ಇನ್ ಪಾರ್ಟನರ್  (Live In Relationship) ಮೂಗನ್ನೇ ಕತ್ತರಿಸಿ ಹಾಕಿದ್ದಾನೆ. ಮೂಗು ಕತ್ತರಿಸಿದ ಆರೋಪದ ಮೇಲೆ  ಲವ್ ಕುಶ್ ಪಟೇಲ್  ಎಂಬಾತನ ಬಂಧನವಾಗಿದೆ.

ಪಟೇಲ್ ಕಳೆದ ಎರಡು ವರ್ಷಗಳಿಂದ ಸೋನು ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ.  ಶನಿವಾರ ಬೆಳಗ್ಗೆ ಮದ್ಯ ಖರೀದಿಸಲು 400 ರೂಪಾಯಿ ನೀಡುವಂತೆ ಕೇಳಿದ್ದಾನೆ. ಆದರೆ ಆಕೆ ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆತ ಅಲ್ಲೇ ಬಿದ್ದಿದ್ದ ಕೊಡಲಿಯನ್ನು ಎತ್ತಿಕೊಂಡು ಸೋನುವಿನ ಮೂಗನ್ನು ಕತ್ತರಿಸಿದ್ದಾನೆ. ಆಕೆಯ ಕೂಗು ಕೇಳಿದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 ಅಷ್ಟರಲ್ಲಿ  ಆರೋಪಿ ಪಟೇಲ ಓಡಿಹೋಗಿದ್ದಾನೆ. ನಂತರ ಸೋನುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಕೆಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.  ಸಂಜೆ ವೇಳೆಗೆ ಆರೋಪಿಯನ್ನು  ಹೆಡೆಮುರಿ ಕಟ್ಟಿ ತರಲಾಗಿದೆ. ಪಟೇಲ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ತನಿಖೆ ನಡೆಯುತ್ತಿದೆ.'

21 ವರ್ಷಕ್ಕಿಂತ ಕಿರಿಯ ಯುವಕ ಮದುವೆಯಾಗುವಂತಿಲ್ಲ, ಆದ್ರೆ ಲಿವ್ ಇನ್‌ನಲ್ಲಿರಬಹುದು: ಹೈಕೋರ್ಟ್‌!

ಸಂಗಾತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ:  ತನ್ನ ಲಿವ್ ಇನ್ ಪಾರ್ಟನರ್  ಕೊಲೆ ಮಾಡಿದ್ದ ಪ್ರಕರಣ ಒಂದು ವಾರದ  ನಂತರ ಪತ್ತೆಯಾಗಿತ್ತು.  35 ವರ್ಷದ ವಿಧವೆಯ ಶವ ಪತ್ತೆಯಾಗಿತ್ತು.  ಮಹಿಳೆಯ ತಲೆಗೆ  ಗಂಭೀರ ಗಾಯಗಳಾಗಿದ್ದವು. ಆಕೆಯ ಬಾಯಿಗೆ ಬಟ್ಟೆ ತುರುಕಲಾಗಿತ್ತು. 

ಮಹಿಳೆ  ತಲೆಯಿಂದ ರಕ್ತ ಸುರಿಯುತ್ತಿದ್ದು ಕೊಲೆಯಾಗಿದೆ ಎಂದು ವಾರದ ಹಿಂದೆ ವ್ಯಕ್ತಿಯೊಬ್ಬ ಕರೆ  ಮಾಡಿದ್ದ. ರಕ್ತಸಿಕ್ತವಾದ ಮಹಿಳೆ ದೇಹ ಬಿದ್ದಿದೆ ಎಂದು ತಿಳಿಸಿದ್ದ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮಹಿಳೆಯ ಶವ ಸಿಕ್ಕಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಮಕ್ಕಳನ್ನು ವಿಚಾರಣೆ ನಡೆಸಲಾಗಿದೆ. ಆರು ವರ್ಷಗಳ ಹಿಂದೆ ಮಹಿಳೆ  ಗಂಡ ಸಾವನ್ನಪ್ಪಿದ್ದು ಕಳೆದ ಆರು ತಿಂಗಳಿನಿಂದ ಈಕೆ ಬೇರೊಬ್ಬನೊಂದಿಗೆ ಲಿವ್ ಇನ್ ನಲ್ಲಿ ಇದ್ದಳು. ಮದುವೆಯಾಗು ಎಂದು ಸಂಗಾತಿಗೆ ಮಹಿಳೆ ಮೇಲಿಂದ ಮೇಲೆ ಒತ್ತಾಯ ಮಾಡುತ್ತಿದ್ದಳು. ಇದು ವಿಕೋಪಕ್ಕೆ ಹೋದ ಕಾರಣ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದ. 

ಲಿವ್ ಇನ್ ಸವಿ ಕಂಡ ವೃದ್ಧ:  70  ವರ್ಷದ ವೃದ್ಧ ಲಿವ್ ಇನ್ ಸವಿ ಕಂಡಿದ್ದಾನೆ. ಅದೇ ಕಾರಣಕ್ಕೆ ಸಂಬಂಧವೊಂದನ್ನು ಬೆಳೆಸಿದ್ದಾನೆ. ಕೊನೆಗೆ ಆಸ್ತಿ ಮಾರಿ ಹಣ ನೀಡಲು ಮುಂದಾಗಿದ್ದು ತನ್ನ ಮಕ್ಕಳಿಂದಲೇ ಕೊಲೆಯಾಗಿ ಹೋಗಿದ್ದ. ಉತ್ತರ ಪ್ರದೇಶದ ಲಕ್ನೋದಿಂದ ಪ್ರಕರಣ ವರದಿಯಾಗಿತ್ತು.  70  ವರ್ಷದ ವೃದ್ಧ ರಾಮ್ ದಯಾಳ್ ಗೆ ಮಕ್ಕಳು ಮೊಮ್ಮಕ್ಕಳು ಇದ್ದಾರೆ. ಆದರೆ ಶಾಂತಿ ದೇವಿ (ಹೆಸರು ಬದಲಿಸಲಾಗಿದೆ) ಎಂಬಾಕೆಯೊಂದಿಗೆ ಲಿವ್ ಇನ್ ನಲ್ಲಿ ಇದ್ದ. ತಂದೆಗೆ ವಯಸ್ಸಾಗಿದೆ ಏನಾದರೂ ಮಾಡಿಕೊಳ್ಳಲಿ ಎಂದು ಮಕ್ಕಳು ಸುಮ್ಮನಾಗಿದ್ದರು.

ಆದರೆ ರಾಮ್  ದಯಾಳ್  ತನ್ನ 57 ಲಕ್ಷ ರೂ. ಬೆಲೆಬಾಳುವ ಆಸ್ತಿ ಮಾರಲು ಮುಂದಾಗಿದ್ದಾನೆ. ವ್ಯಕ್ತಿಯೊಬ್ಬರಿಂದ 11 ಲಕ್ಷ ರೂ. ಮುಂಗಡವನ್ನು ಪಡೆದಿದ್ದಾನೆ. ಇದರಲ್ಲಿ ನಾಲ್ಕು ಲಕ್ಷ ರೂ. ಹಣವನ್ನು ಶಾಂತಿ ದೇವಿಗೆ ನೀಡಿದ್ದಾನೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮಕ್ಕಳೆ ವೃದ್ಧನ ಹತ್ಯೆ ಮಾಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ