
ಬೆಂಗಳೂರು (ಆ.25) ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ಕಾರು ಚಾಲಕನೋರ್ವ ಪಾಸ್ ದುರುಪಯೋಗಪಡಿಸಿಕೊಂಡಿರುವ ಘಟನೆ ನಡೆದಿದ್ದು, ಘಟನೆ ಬಳಿಕ ಕಾರು ಚಾಲಕ ನಾಪತ್ತೆಯಾಗಿದ್ದಾನೆ.
ಈ ಹಿಂದೆ ವಿಧಾನಪರಿಷತ್ ಶಾಸಕರಾಗಿದ್ದ ಅವಧಿಯಲ್ಲಿನ ಸ್ಟಿಕರ್ ಬಳಸಿರುವ ಚಾಲಕ. 'ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ' ಎಂಬ ಪಾಸ್ ಅಳವಡಿಕೊಂಡು ಹಲವು ದಿನಗಳಿಂದ ಸ್ಕೋಡಾ ಕಾರಿನ ಮುಂಭಾಗದಲ್ಲಿ ಸ್ಟಿಕರ್ ಅಂಟಿಸಿ ತಿರುಗಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದವರಿಂದ ದುರುಪಯೋಗ ಆಗಿರುವ ಶಂಕೆಯಿದೆ. ಈ ಹಿನ್ನೆಲೆ ವಿಧಾನಸೌಧ ಪೊಲೀಸರಿಗೆ ಫೋನ್ ಮೂಲಕ ದೂರು ಸಲ್ಲಿಸಿರುವ ಸಂಸದರ ಆಪ್ತ ಕಾರ್ಯದರ್ಶಿ. ಸದ್ಯ ಕಾರು ಪತ್ತೆಯಾಗಿದ್ದು, ದೂರು ದಾಖಲಾಗ್ತಿದ್ದಂತೆ ಕಾರು ಚಾಲಕ ನಾಪತ್ತೆಯಾಗಿದ್ದಾನೆ. ಚಾಲಕನಿಗಾಗಿ ತೀವ್ರ ಶೋಧ ನಡೆಸಿರುವ ವಿಧಾನಸೌಧ ಪೊಲೀಸರು.
ರಾಜೀನಾಮೆ ಕೇಳಿದ ಸಿಎಂಗೆ ನಾಗೇಂದ್ರರಿಂದ ಬೆದರಿಕೆ: ಕೋಟ ಶ್ರೀನಿವಾಸ ಪೂಜಾರಿ
ಯಾಕಾಗಿ ಪಾಸ್ ದುರುಪಯೋಗ ಪಡಿಸಿಕೊಂಡಿದ್ರು? ಇದುವರೆಗೆ ಎಲ್ಲೆಲ್ಲಿ ಓಡಾಡಿದ್ದಾರೆ? ಪಾಸ್ ದುರುಪಯೋಗ ಪಡಿಸಿಕೊಂಡು ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರೆ? ಎಲ್ಲ ವಿಚಾರಗಳಲ್ಲೂ ಅನುಮಾನ ಮೂಡಿಸಿದೆ. ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಬಂಧನ ಬಳಿಕ ಇನ್ನಷ್ಟು ವಿಚಾರ ಬಯಲಿಗೆ ಬರಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ