ಶೆಡ್‌ಗೆ ಸಾರ್ವಜನಿಕರು ಶನಿವಾರ ಮಧ್ಯಾಹ್ನ ಹೋಗಿದ್ದಾಗ ಅರೆಬೆಂದ ಅಪರಿಚಿತನ ಮೃತದೇಹ ಕಂಡು ಪೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಪರಿಶೀಲಿಸಿದಾಗ ಮೃತದೇಹದ ಗುರುತು ಪತ್ತೆಯಾಗಿದೆ.
ಬೆಂಗಳೂರು(ಆ.25): ಕುಡಿದ ಮತ್ತಿನಲ್ಲಿ ಟೈಲ್ಸ್ ಕೆಲಸಗಾರನೊಬ್ಬನ ತಲೆ ಮೇಲೆ ಕಲ್ಲುಎತ್ತಿ ಹಾಕಿಕೊಂದು ಬಳಿಕ ಮೃತದೇಹಕ್ಕೆ ಬೆಂಕಿ ಇಟ್ಟು ಮೃತನ ಸ್ನೇಹಿತರು ಪರಾರಿಯಾಗಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿವಾಸಿ ಪುಷ್ಪರಾಜ್ (27) ಕೊಲೆಯಾದ ದುರ್ದೈವಿ.
ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತನ ಸ್ನೇಹಿತರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹೆಗಡೆ ನಗರದ ಜಕ್ಕೂರು ಮುಖ್ಯರಸ್ತೆಯ ಖಾಲಿ ನಿವೇಶನದಲ್ಲಿದ್ದ ಶೆಡ್ ಗೆ ಶುಕ್ರವಾರ ರಾತ್ರಿ ಸ್ನೇಹಿತರ ಜತೆ ಮದ್ಯ ಸೇವನೆಗೆ ರಾಜ್ ತೆರಳಿದ್ದಾಗ ಈ ಕೃತ್ಯ ನಡೆದಿದೆ. ಹೆಗಡೆ ನಗರದ 4ನೇ ಹಂತ ಮೃತ ಪುಷ್ಪ ವಿಪರೀತ ಮದ್ಯವ್ಯಸನಿಯಾಗಿದ್ದು, ಇತ್ತೀಚಿಗೆ ಮನೆಗೆ ಸಹ ಸೇರದೆ ಎಲ್ಲೆಂದರಲ್ಲಿ ಉಳಿಯುತ್ತಿದ್ದ.
ಚಿಕ್ಕಬಳ್ಳಾಪುರ: ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧೆಯ ಮೇಲೆ ಕಾಮುಕನ ಅಟ್ಟಹಾಸ..!
ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಆತ, ಪ್ರತಿ ದಿನ ಸ್ನೇಹಿತರ ಜತೆ ಮದ್ಯ ಸೇವನೆಗೆ ಹೋಗುತ್ತಿದ್ದ. `ಹೆಗಡೆ ನಗರದ 4ನೇ ಮುಖ್ಯ ರಸ್ತೆಯಲ್ಲಿ ಮೃತನ ಕುಟುಂಬದವರು ನೆಲೆಸಿದ್ದಾರೆ. ಎಂದಿನಂತೆ ಜಕ್ಕೂರು ರಸ್ತೆಯ ಖಾಲಿ ನಿವೇಶದಲ್ಲಿದ್ದ ಶೆಡ್ ಗೆ ಗೆಳೆಯರ ಜತೆ ಪುಷ್ಪರಾಜ್ ಹೋಗಿದ್ದು, ಆ ವೇಳೆ ಮದ್ಯ ಸೇವಿಸಿ ಮೃತನ ಗೆಳೆಯರ ಮಧ್ಯೆ ಜಗಳವಾಗಿರಬಹುದು. ಆಗ ಆತನ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಬಳಿಕ ಮೃತದೇಹಕ್ಕೆ ಬೆಂಕಿ ಇಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಈ ಶೆಡ್‌ಗೆ ಸಾರ್ವಜನಿಕರು ಶನಿವಾರ ಮಧ್ಯಾಹ್ನ ಹೋಗಿದ್ದಾಗ ಅರೆಬೆಂದ ಅಪರಿಚಿತನ ಮೃತದೇಹ ಕಂಡು ಪೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಪರಿಶೀಲಿಸಿದಾಗ ಮೃತದೇಹದ ಗುರುತು ಪತ್ತೆಯಾಗಿದೆ.