ಮಲತಾಯಿ ಅಂದ್ರೆ ಹಿಂಗೇನಾ? ಬಾಲಕನಿಗೆ ಶಾಲೆಗೆ ಹೋಗದಂತೆ ತಡೆದು ತಂದೆಯಿಂದ ದೇಹದ ಹಲವೆಡೆ ಬರೆ ಹಾಕಿಸಿದ ಪಾಪಿ!

Published : Aug 14, 2023, 06:14 PM IST
ಮಲತಾಯಿ ಅಂದ್ರೆ ಹಿಂಗೇನಾ? ಬಾಲಕನಿಗೆ ಶಾಲೆಗೆ ಹೋಗದಂತೆ ತಡೆದು ತಂದೆಯಿಂದ ದೇಹದ ಹಲವೆಡೆ ಬರೆ ಹಾಕಿಸಿದ ಪಾಪಿ!

ಸಾರಾಂಶ

ಶಾಲೆಗೆ ಹೋಗ್ಬೇಡ ಅಂತ ಮಲತಾಯಿಯೇ ಹೇಳಿದ್ದು, ಈ ಹಿನ್ನೆಲೆ  ಕಳೆದ ನಾಲ್ಕು ದಿನಗಳಿಂದ ಮನೆಯಲ್ಲೇ ಇದ್ದ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಭುವನೇಶ್ವರ (ಆಗಸ್ಟ್‌ 14, 2023): ಮಲ ತಾಯಿ ಅಂದ್ರೆ ಮೊದಲನೇ ಹೆಂಡ್ತಿ ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳೋದು ತುಂಬಾ ಅಪರೂಪ ಎಂದೇ ಹೆಳಲಾಗುತ್ತೆ. ಸಿನಿಮಾ, ಧಾರಾವಹಿಗಳಲ್ಲೂ ಹೆಚ್ಚಾಗಿ ಇದನ್ನೇ ನೋಡುತ್ತಾ ಇರುತ್ತೇವೆ. ಮೊದಲನೆಯ ಹೆಂಡತಿಯ ಮಕ್ಕಳಿಗೆ ಮಲತಾಯಿ ಧೋರಣೆ ತೋರಿಸುವ ಉದಾಹರಣೆಗಳೇ ಹೆಚ್ಚು. ಆದರೂ, ಕೆಲವು ಅಪವಾದಗಳೂ ಇರುತ್ತವೆ ಬಿಡಿ. ಒಡಿಶಾದಲ್ಲಿ ಪಾಪಿ ಮಲತಾಯಿ ಮಾಡಿರೋ ಕೃತ್ಯಕ್ಕೆ ಪುಟ್ಟ ಬಾಲಕನ ದೇಹದ ಹಲವೆಡೆ ಬರೆಗಳು ಬಿದ್ದಿವೆ. ಏನಿದು ವಿಷಯ ಅಂತೀರಾ..? ಮುಂದೆ ಓದಿ..

ಶಾಲೆಗೆ ಹೋಗ್ಲಿಲ್ಲ ಅಂತ ಮಗನಿಗೆ ಹೀಗಾ ಮೋಡೋದು? ಅಬ್ಬಬ್ಬಾ.. ಕಬ್ಬಿಣದ ರಾಡ್‌ನಿಂದ ಮಗನಿಗೆ ಹಲವು ಕಡೆ ತಂದೆಯೇ ಬರೆ ಹಾಕಿರುವ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ. 12 ವರ್ಷದ ಮಗನಿಗೆ ಈ ರೀತಿ ಮಾಡಿದ್ದು, ಕಬ್ಬಿಣದ ರಾಡ್‌ನಿಂದ ಬರೆ ಹಾಕಿದ ಆರೋಪದ ಮೇಲೆ ಸುಭಾಷ್ ಚಂದ್ರ ಮತ್ತು ಮಂಜುಲತಾ ಪ್ರಧಾನ್ ಎಂಬ ದಂಪತಿಯನ್ನು ಚೆಂಡಿಪದ ಪೊಲೀಸರು ಬಂಧಿಸಿದ್ದಾರೆ. 

ಇದನ್ನು ಓದಿ: ಹೆಂಡ್ತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌: ಅಸೂಯೆಯಿಂದ ಮಕ್ಕಳ ಎದುರೇ ಪತ್ನಿ ಕೊಂದ ಉದ್ಯಮಿ

ಹೌದು, 12 ವರ್ಷದ ಮಗ ಶಾಲೆಗೆ ಹೋಗ್ಲಿಲ್ಲ ಅಂತ ಪುತ್ರನಿಗೆ ಕಬ್ಬಿಣದ ರಾಡ್‌ ಕಾಯಿಸಿ ದೇಹದ 4 - 5 ಕಡೆ ಬರೆ ಬರುವಂತೆ ಹೊಡೆದಿದ್ದಾರೆ. ಈ ಹಿನ್ನೆಲೆ, ಮಗುವಿನ ದೇಹದ ಮೇಲೆ ಗಾಯದ ಗುರುತುಗಳಿದ್ದು, ಆತನನ್ನು ಮಕ್ಕಳ ಶಾರ್ಟ್‌ಸ್ಟೇ ಹೋಮ್‌ಗೆ ಕಳುಹಿಸಲಾಗಿದೆ. ಇನ್ನು, ಬರೆ ಹಾಕಿದ ಆರೋಪದ ಮೇಲೆ ಸುಭಾಷ್ ಚಂದ್ರ ಮತ್ತು ಮಂಜುಲತಾ ಪ್ರಧಾನ್ ಎಂಬ ದಂಪತಿಯನ್ನು ಚೆಂಡಿಪದ ಪೊಲೀಸರು ಭಾನುವಾರ ಅರೆಸ್ಟ್‌ ಮಾಡಿದ್ದಾರೆ. ಬಲಿಪಾಟ ಪಂಚಾಯಿತಿ ವ್ಯಾಪ್ತಿಯ ಹಟಿಯಾನಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.

ಸುಭಾಷ್ ಚಂದ್ರ ತನ್ನ ಮೊದಲ ಹೆಂಡತಿ ತನ್ನನ್ನು ತೊರೆದ ನಂತರ ಮಂಜುಲತಾಳನ್ನು ಮದುವೆಯಾಗಿದ್ದಾನೆ ಎಂದು ಛೆಂಡಿಪದ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಸತ್ಪತಿ ತಿಳಿಸಿದ್ದಾರೆ. ಸುಭಾಷ್ ಚಂದ್ರನಿಗೆ ಮೊದಲ ಪತ್ನಿಯ ಜತೆ ಒಬ್ಬ ಮಗನಿದ್ದು, ಆತ ತಂದೆ ಹಾಗೂ ಮಲತಾಯಿಯ ಜತೆಗಿದ್ದ. ಇನ್ನು, ಶಾಲೆಗೆ ಹೋಗ್ಬೇಡ ಅಂತ ಮಲತಾಯಿಯೇ ಹೇಳಿದ್ದು, ಈ ಹಿನ್ನೆಲೆ  ಕಳೆದ ನಾಲ್ಕು ದಿನಗಳಿಂದ ಮನೆಯಲ್ಲೇ ಇದ್ದ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಇದನ್ನೂ ಓದಿ: ಬಿಜೆಪಿ ನಾಯಕಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌: ಕೊಲೆ ಮಾಡಿ ನದಿಗೆ ಡೆಡ್‌ಬಾಡಿ ಎಸೆದ ಪಾಪಿ ಪತಿ!

ಆದರೆ, ಸುಭಾಷ್ ಚಂದ್ರ ಮನೆಯಲ್ಲಿದ್ದ ಆತನನ್ನು ಕಂಡು ಶಾಲೆಗೆ ಏಕೆ ಹೋಗಿಲ್ಲ ಎಂದು ಕೇಳಿದ್ದಾನೆ. ಆಗ ಕಳೆದ ನಾಲ್ಕು ದಿನಗಳಿಂದ ಮಗು ಶಾಲೆಗೆ ಹೋಗುತ್ತಿಲ್ಲ ಎಂದು ಮಂಜುಲತಾ ಪತಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಸುಭಾಷ್ ಚಂದ್ರ ಮಗುವಿಗೆ ಥಳಿಸಿ ನಂತರ ನಾಲ್ಕೈದು ಕಡೆ ಕಾದ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಂತರ, ಮಗುವನ್ನು ರಕ್ಷಿಸಿದ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರ ಜಿಲ್ಲಾ ಚೈಲ್ಡ್‌ಲೈನ್ ಅಧಿಕಾರಿಗಳು ಮಗುವನ್ನು ಕರೆದುಕೊಂಡು ಹೋಗಿ ಮಕ್ಕಳ ಕಲ್ಯಾಣ ಆಯೋಗದ ಮುಂದೆ ಹಾಜರುಪಡಿಸಿ ಆಶ್ರಯ ಮನೆಗೆ ಕಳುಹಿಸಿದ್ದಾರೆ ಎಂದೂ ವರದಿಯಾಗಿದೆ. 

ಇದನ್ನೂ ಓದಿ: ಉಚಿತ ಮೊಬೈಲ್‌ ಫೋನ್‌ ಭರವಸೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಸರ್ಕಾರಿ ಉದ್ಯೋಗಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!