ಹೆಂಡ್ತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌: ಅಸೂಯೆಯಿಂದ ಮಕ್ಕಳ ಎದುರೇ ಪತ್ನಿ ಕೊಂದ ಉದ್ಯಮಿ

By BK Ashwin  |  First Published Aug 14, 2023, 1:53 PM IST

ಪತ್ನಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಇದ್ದಾರೆಂಬ ಅಸೂಯೆ, ಕೀಳರಿಮೆ ಹೆಚ್ಚಾದ ಕಾರಣ ಉದ್ಯಮಿ ಮಕ್ಕಳ ಎದುರೇ ಹೆಂಡ್ತಿಯನ್ನು ಕೊಲೆ ಮಾಡಿದ್ದಾರೆ. 


ಲಖನೌ (ಆಗಸ್ಟ್‌ 14, 2023): ಉತ್ತರ ಪ್ರದೇಶದ ಲಖನೌನ 37 ವರ್ಷದ ಉದ್ಯಮಿಯೊಬ್ಬರು ತಮ್ಮ ಪತ್ನಿಯನ್ನು ಕೊಲೆ ಮಾಡಿರುವ ಆಘಾತಕಾರ ಘಟನೆ ವರದಿಯಾಗಿದೆ. ಸುಲ್ತಾನ್‌ಪುರದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ತಮ್ಮ ಇಬ್ಬರು ಮಕ್ಕಳ ಎದುರೇ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇವರಿಗೆ ಮದ್ವೆಯಾಗಿ 15 ವರ್ಷಗಳಾಗಿತ್ತು. ಆದರೆ, ಪತ್ನಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಇದ್ದಾರೆಂಬ ಅಸೂಯೆ, ಕೀಳರಿಮೆ ಹೆಚ್ಚಾದ ಕಾರಣ ಈ ರೀತಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
 
ಸದ್ಯ ಮೃತ ಪತ್ನಿಯ ಇನ್ಸ್ಟಾಗ್ರಾಮ್‌ ಅಕೌಂಟ್‌ ಲಾಕ್‌ ಆಗಿದೆ ಹಾಗೂ ಪ್ರೈವೇಟ್‌ ಆಗಿದ್ದು, ಈ ಹಿನ್ನೆಲೆ ಈ ಬಗ್ಗೆ ಅಧಿಕಾರಿಗಳು ಇನ್ನೂ ಪರಿಶೀಲನೆ ಮಾಡಬೇಕಿದೆ ಎಂದು ತಿಳಿದುಬಂದಿದೆ. ಇನ್ನು, ಪತ್ನಿ ತನ್ನ ಅಕೌಂಟ್‌ನಲ್ಲಿ ಪತಿಯನ್ನೇ ಬ್ಲಾಕ್‌ ಮಾಡಿದ್ದಳು. ಇದರಿಂದ ಪತಿಯ  ಅಭದ್ರತೆಯ ಭಾವನೆ ಹೆಚ್ಚಾಗಿದೆ. ಅಲ್ಲದೆ, ಆಕೆಯ ಕೆಲವು ಸಾಮಾಜಿಕ ಮಾಧ್ಯಮ ಅಭಿಮಾನಿಗಳು ನಾನು ಇಲ್ಲದ ವೇಳೆ ತನ್ನ ಪತ್ನಿಯನ್ನು ಭೇಟಿ ಮಾಡುತ್ತಾರೆ ಎಂದು ಆರೋಪಿ ಶಂಕಿಸಿದ್ದು, ಇದರಿಂದ ಕೆಲ ಕಾಲದಿಂದ ಅವರ ಸಂಬಂಧ ಹದಗೆಟ್ಟಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಬಿಜೆಪಿ ನಾಯಕಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌: ಕೊಲೆ ಮಾಡಿ ನದಿಗೆ ಡೆಡ್‌ಬಾಡಿ ಎಸೆದ ಪಾಪಿ ಪತಿ!

Tap to resize

Latest Videos

"ಆರೋಪಿಯು ಟೂರ್ ಮತ್ತು ಟ್ರಾವೆಲ್ ಏಜೆನ್ಸಿಯನ್ನು ಹೊಂದಿದ್ದು, ಅವನ ಹೆಂಡತಿ ಗೃಹಿಣಿಯಾಗಿದ್ದಳು. ದಂಪತಿಗೆ 12 ವರ್ಷದ ಮಗಳು ಮತ್ತು ಐದು ವರ್ಷದ ಮಗುವಿನೊಂದಿಗೆ ಲಖನೌನ ಪ್ಯಾರಾ ಪ್ರದೇಶದಲ್ಲಿ ವಾಸಿಸುತ್ತಿದ್ದರು’’ ಎಂದು ಈ ಘಟನೆ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಕುರೇಭಾರ್ ಎಸ್‌ಎಚ್‌ಒ ಪ್ರವೀಣ್ ಕುಮಾರ್ ಯಾದವ್ ಹೇಳಿದ್ದಾರೆ. 

ದಂಪತಿ ಭಾನುವಾರ ಬೆಳಗ್ಗೆ ರಾಯ್ ಬರೇಲಿಗೆ ಪ್ರಯಾಣ ಬೆಳೆಸಿದರು. ಆದರೆ, ಬದಲಿಗೆ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಗೆ ತಿರುಗಿಸಿದರು. ಮುಂಜಾನೆ 5 ಗಂಟೆ ಸುಮಾರಿಗೆ ಆರೋಪಿ ಸುಲ್ತಾನ್‌ಪುರದ ಮುಜೇಶ್ ಇಂಟರ್‌ಸೆಕ್ಷನ್‌ ಬಳಿ ತನ್ನ ಪತ್ನಿಯೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದ. ಕೋಪದ ಭರದಲ್ಲಿ, ಪತಿ ಮಾರಣಾಂತಿಕವಾಗಿ ಪತ್ನಿಯ ಕತ್ತು ಹಿಸುಕಿದ್ದಾನೆ. ಭಯಾನಕ ದೃಶ್ಯದಿಂದ ಆಘಾತಕ್ಕೊಳಗಾದ ಅವರ ಮಕ್ಕಳು ಅಳಲು ಆರಂಭಿಸಿದ್ದಾರೆ. ನಂತರ ಆರೋಪಿ ಎಸ್‌ಯುವಿಯಲ್ಲೇ ತನ್ನನ್ನು ತಾನು ಲಾಕ್‌ ಮಾಡಿಕೊಂಡಿದ್ದಾನೆ. 

ಇದನ್ನೂ ಓದಿ: ಉಚಿತ ಮೊಬೈಲ್‌ ಫೋನ್‌ ಭರವಸೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಸರ್ಕಾರಿ ಉದ್ಯೋಗಿ

ಗಸ್ತು ತಿರುಗುತ್ತಿದ್ದ ತಂಡವೊಂದು ವಾಹನ ಅನುಮಾನಾಸ್ಪದವಾಗಿ ನಿಂತಿದ್ದನ್ನು ಗಮನಿಸಿದಾಗ ಅನುಮಾನ ಮೂಡಿದೆ. ಅವರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಎಚ್ಚರಿಕೆ ನೀಡಿದರು. ಕಾನೂನು ಜಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಬಳಿಕ ದಂಪತಿಯ ಮಗಳು ತನ್ನ ತಂದೆ ತನ್ನ ತಾಯಿಯನ್ನು ಕೊಂದಿದ್ದಾರೆ ಎಂಬ ಭಯಾನಕ ಸತ್ಯವನ್ನು ಬಹಿರಂಗಪಡಿಸಿದಳು. ಆಕೆಯ ಸಾಕ್ಷ್ಯದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಯಿತು ಎಂದು ತಿಳಿದುಬಂದಿದೆ. 

ಇತ್ತೀಚೆಗೆ ಹೆಂಡತಿ - ಗಂಡನನ್ನು ಸಾಯಿಸುವುದು ಅಥವಾ ಪತಿಯೇ ಪತ್ನಿಯನ್ನು ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗ್ತಿದೆ. ಪತ್ನಿಯ ಮೊಬೈಲ್‌ ಗೀಳು ಆಕೆಯ ಪ್ರಾಣಕ್ಕೆ ಸಂಚಕಾರ ತಂದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡ್ತಿದ್ದ ಸುಂದರಿಗೆ ತನ್ನ ಮೊಬೈಲ್‌ ಗೀಳೇ ಜೀವಕ್ಕೆ ಆಪತ್ತು ತಂದಿಟ್ಟಿದೆ. ರೀಲ್ಸ್‌ ಮಾಡ್ತಿದ್ದ ಈಕೆ, ಇದೇ ವೇಳೆ ತನ್ನ ಸ್ನೇಹಿತರೊಂದಿಗೆ ಚಾಟಿಂಗ್‌ ಮಾಡುವ ಅಭ್ಯಾಸ ಕೂಡ ಇರಿಸಿಕೊಂಡಿದ್ದಳು. ಪತ್ನಿಯ ಅತಿಯಾದ ಮೊಬೈಲ್‌ ಗೀಳು ಹಾಗೂ ಆಕೆಯ ರೀಲ್ಸ್‌ನ ಅಭ್ಯಾಸವನ್ನು ನೋಡಿ ಗಂಡನಿಗೆ ಅನುಮಾನ ಶುರುವಾಗಿತ್ತು. ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿದ ಆತ, ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಕೊಂದಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲುವಿನಲ್ಲಿ ನಡೆದಿದೆ. 26 ವರ್ಷದ ಪೂಜಾ, ಗಂಡನಿಂದಲೇ ಕೊಲೆಯಾಗಿರುವ ಮಹಿಳೆ. 33 ವರ್ಷದ ಶ್ರೀನಾಥ್‌ ಪತ್ನಿಯ ವೇಲ್‌ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಬಿಜೆಪಿ ನಾಯಕನ ಜತೆಯ ರಾಸಲೀಲೆ ಫೋಟೋ ವೈರಲ್‌: ಕೇಸರಿ ಪಕ್ಷದ ನಾಯಕಿ ಸೂಸೈಡ್‌!

click me!