ತನಿಖಾಧಿಕಾರಿಗಳು 92 ಅತ್ಯಾಚಾರ ಪ್ರಕರಣಗಳನ್ನು ಗುರುತಿಸಿದ್ದು, 26 ಮತ್ತು 73 ವರ್ಷದೊಳಗಿನ 51 ಪುರುಷರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ಯಾರಿಸ್ (ಫ್ರಾನ್ಸ್) (ಜೂನ್ 22, 2023): ಫ್ರಾನ್ಸ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿ ಮೇಲೆ ಅತ್ಯಾಚಾರ ಮಾಡಲು ಪ್ರತಿ ದಿನ ಒಬ್ಬೊಬ್ಬ ಪುರುಷರನ್ನು ಕರೆಸುತ್ತಾನಂತೆ. ಪತ್ನಿಯನ್ನೇ ವ್ಯಭಿಚಾರಿಯನ್ನಾಗಿ ಮಾಡಿರುವ ಇಂತಹ ಪತಿಯ ಕತೆ ಯೂರೋಪ್‌ನ ಫ್ರಾನ್ಸ್ ದೇಶದಲ್ಲಿ ನಡೆದಿದೆ ನೋಡಿ. ತನ್ನ ಹೆಂಡತಿಗೆ ಪ್ರತಿ ರಾತ್ರಿ ಮಾದಕ ದ್ರವ್ಯವನ್ನು ನೀಡಿ ನಂತರ ಅವಳನ್ನು ಅತ್ಯಾಚಾರ ಮಾಡಲು ಪುರುಷರನ್ನು ಆಹ್ವಾನಿಸುತ್ತಾನೆ ಎಂದು ಆರೋಪಿಸಲಾಗಿದೆ.
ತನ್ನ ಪತ್ನಿಯೊಂದಿಗೆ ಈ ಆಘಾತಕಾರಿ ಅಭ್ಯಾಸವು 10 ವರ್ಷಗಳ ಕಾಲ ಮುಂದುವರಿದಿತ್ತು ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಈ ಸಮಯದಲ್ಲಿ ತನಿಖಾಧಿಕಾರಿಗಳು 92 ಅತ್ಯಾಚಾರ ಪ್ರಕರಣಗಳನ್ನು ಗುರುತಿಸಿದ್ದು, 26 ಮತ್ತು 73 ವರ್ಷದೊಳಗಿನ 51 ಪುರುಷರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಆರೋಪಿಗಳ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗಿದೆ ಮತ್ತು ಪೊಲೀಸರು ಇತರ ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದೂ ಟೆಲಿಗ್ರಾಫ್ ಮಾಧ್ಯಮ ವರದಿ ಮಾಡಿದೆ. ಈ ಆರೋಪಿಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ, ಲಾರಿ ಚಾಲಕ, ಮುನ್ಸಿಪಲ್ ಕೌನ್ಸಿಲರ್, ಬ್ಯಾಂಕ್‌ನಲ್ಲಿ ಐಟಿ ಉದ್ಯೋಗಿ, ಜೈಲು ಸಿಬ್ಬಂದಿ, ನರ್ಸ್ ಮತ್ತು ಪತ್ರಕರ್ತ ಸಹ ಸೇರಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಪತಿ, ಮಕ್ಕಳನ್ನು ಬಿಟ್ಟು ಲಿವ್ ಇನ್ ಸಂಗಾತಿ ಜತೆ ವಾಸಿಸಲು ವಿವಾಹಿತ ಮಹಿಳೆಗೆ ಅನುಮತಿ ನೀಡಿದ ಹೈಕೋರ್ಟ್
ಇನ್ನು, ಆರೋಪಿ ಪತಿಯನ್ನು ಫ್ರಾನ್ಸ್‌ನ ಡೊಮಿನಿಕ್ ಪಿ ಎಂದು ಗುರುತಿಸಲಾಗಿದ್ದು, ತನ್ನ ಹೆಂಡತಿಗೆ ಈತ ಊಟದಲ್ಲಿ ಆಂಟಿ-ಆಂಗ್ಲೇಶನ್ ಡ್ರಗ್ ಲೊರಾಜೆಪಮ್ ಅನ್ನು ಬೆರೆಸಿದ ನಂತರ ಇತರೆ ಪುರುಷರಿಂದ ಅತ್ಯಾಚಾರ ಮಾಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಫ್ರಾನ್ಸ್‌ನ ಮಜಾನ್‌ನಲ್ಲಿರುವ ತನ್ನ ಮನೆಗೆ 'ಅತಿಥಿಗಳು' ಎಂದು ಕರೆಯಲ್ಪಡುವವರನ್ನು ಆಹ್ವಾನಿಸುತ್ತಿದ್ದ. ನಿದ್ದೆಯಲ್ಲಿದ್ದ ಮಹಿಳೆಯ ಮೇಲೆ ಅವರು ಲೈಂಗಿಕ ಕ್ರಿಯೆ ನಡೆಸುತ್ತಿದ್ದರು ಎಂದೂ ವರದಿಯಾಗಿದೆ.
ಇಷ್ಟೇ ಅಲ್ಲದೆ, ತನ್ನ ಪತ್ನಿ ಮೇಲೆ ಲೈಂಗಿಕ ಕ್ರಿಯೆ ನಡೆಸುವ ಪುರುಷರ ಕೃತ್ಯಗಳನ್ನು ಈತ ರೆಕಾರ್ಡ್ ಮಾಡುತ್ತಿದ್ದ ಹಾಗೂ ಈ ವಿಡಿಯೋಗಳನ್ನು ‘’ABUSES’’ ಎಂಬ ಯುಎಸ್‌ಬಿ ಡ್ರೈವ್‌ನಲ್ಲಿ ಸೇವ್ ಮಾಡುತ್ತಿದ್ದರು ಎಂದು ವರದಿ ಹೇಳಿಕೊಂಡಿದ್ದು, ಆ ಪೆನ್‌ಡ್ರೈವ್ ಈಗ ಪೊಲೀಸರ ಬಳಿ ಇದೆ. 2011 ಮತ್ತು 2020 ರ ನಡುವೆ ಈ ಅತ್ಯಾಚಾರಗಳು ನಡೆದಿದ್ದು, ಮತ್ತು ಹೆಚ್ಚಿನ ಪುರುಷರು ಅನೇಕ ಬಾರಿ ರೇಪ್ ಮಾಡಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಇದಪ್ಪಾ ಶಿಕ್ಷೆ ಅಂದ್ರೆ! ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಪಾಪಿಗೆ 135 ವರ್ಷ ಸೆರೆವಾಸ
ಡೊಮಿನಿಕ್ 50 ವರ್ಷಗಳಿಗೂ ಹೆಚ್ಚು ಕಾಲ ಫ್ರಾಂಕೋಯಿಸ್ ಅವರನ್ನು ಮದುವೆಯಾಗಿದ್ದರು ಮತ್ತು ದಂಪತಿಗೆ ಮೂರು ಮಕ್ಕಳಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಡೊಮಿನಿಕ್ ತನ್ನ ಹೆಂಡತಿ ಎಚ್ಚರಗೊಳ್ಳಲು ಕಾರಣವಾಗುವ ಬಲವಾದ ವಾಸನೆ ತಪ್ಪಿಸಲು ತಂಬಾಕು ಮತ್ತು ಸುಗಂಧ ದ್ರವ್ಯವನ್ನು ಬಳಸಲು ಬಿಡ್ತಿರಲಿಲ್ಲ ಎಂದೂ ತಿಳಿದುಬಂದಿದೆ. ಇನ್ನು, ತನಿಖಾಧಿಕಾರಿಗಳೊಂದಿಗೆ ಮಾತನಾಡುವಾಗ, ಕೆಲವರು ಆ ಮಹಿಳೆಯ ಒಪ್ಪಿಗೆ ಇಲ್ಲದೆ ಈ ಕೃತ್ಯ ನಡೆಯಲು ಸಾಧ್ಯವಿಲ್ಲ. ಆಕೆಯ ಒಪ್ಪಿಗೆ ಇರಲಿಲ್ಲ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ ಎಂದೂ ವರದಿಯಾಗಿದೆ.
2020 ರಲ್ಲಿ ಡೊಮಿನಿಕ್‌ನ ಪ್ರಾಥಮಿಕ ತನಿಖೆಯ ಸಮಯದಲ್ಲಿ ಪೊಲೀಸರು ಆಪಾದಿತ ಅತ್ಯಾಚಾರದ ವಿಡಿಯೋಗಳ ಬಗ್ಗೆ ತಿಳಿದುಕೊಂಡರು. ಬಟ್ಟೆ ಬದಲಾಯಿಸುವ ಕೋಣೆಗಳಲ್ಲಿ ಮಹಿಳೆಯರನ್ನು ಚಿತ್ರಿಸಲು ಗುಪ್ತ ಕ್ಯಾಮೆರಾವನ್ನು ಬಳಸುತ್ತಿದ್ದಾರೆ ಎಂದು ಶಂಕೆ ವ್ಯಕ್ತವಾದ ಬಳಿಕ ಈ ವಿಡಿಯೋಗಳ ಬಗ್ಗೆ ಅವರ ಅರಿವಿಗೆ ಬಂದಿದೆ. ಇನ್ನು, ಮಹಿಳೆಗೆ ಟೇಪ್‌ಗಳ ಬಗ್ಗೆ ಹೇಳಿದಾಗ, ಆಕೆ ಖಿನ್ನತೆಗೆ ಒಳಗಾಗಿದ್ದರು. ಹಾಗೆ, ಪತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ