ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಭೇಟಿಗೆ ಜೈಲು ಅಧಿಕಾರಿಗಳಿಂದ ಬೇಕಾಬಿಟ್ಟಿ ಅವಕಾಶ ಎಂಬ ಆರೋಪವಿದೆ. ಆರ್ ಟಿ ಐ ಅರ್ಜಿಯಲ್ಲಿ ದರ್ಶನ್ ಭೇಟಿ ಮಾಡಿದವರ ಲಿಸ್ಟ್ ಬಹಿರಂಗವಾಗಿದೆ.
ಬೆಂಗಳೂರು (ಆ.5): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದೆ. ದರ್ಶನ್ ಜೈಲಿಗೆ ಹೋಗಿ 45 ದಿನ ಕಳೆದಿದೆ. ಇದೀಗ ದರ್ಶನ್ ಭೇಟಿಗೆ ಜೈಲು ಅಧಿಕಾರಿಗಳಿಂದ ಬೇಕಾಬಿಟ್ಟಿ ಅವಕಾಶ ಎಂಬ ಆರೋಪವಿದೆ. ಆರ್ ಟಿ ಐ ಅರ್ಜಿಯಲ್ಲಿ ದರ್ಶನ್ ಭೇಟಿ ಮಾಡಿದವರ ಲಿಸ್ಟ್ ಬಹಿರಂಗವಾಗಿದೆ.
ಆರೋಪಿಗಳನ್ನು ನೋಡಲು ಹತ್ತಿರದ ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದು ಕೋರ್ಟ್ ಆದೇಶವಿದೆ. ಆದ್ರೆ, ಜೈಲು ಅಧಿಕಾರಿಗಳು ದರ್ಶನ್ ಭೇಟಿಗೆ ತೆರಳುವ ಸ್ನೇಹಿತರಿಗೂ ಅವಕಾಶ ನೀಡಿದ್ದಾರೆ. ಕೋರ್ಟ್ ಆದೇಶದಲ್ಲಿ ಐವರಿಗೆ ಅವಕಾಶ ನೀಡಿ ಅರ್ಧ ಗಂಟೆ ಸಮಯ ನಿಗಧಿ ಮಾಡಿದೆ.
ಬೆಂಗಳೂರು ಮಹಿಳೆಯರಿಗೆ ಎಷ್ಟು ಸೇಫ್, 5 ಗಂಟೆಗೆ ವಾಕಿಂಗ್ ಹೊರಟಾಕೆಗೆ ಮುತ್ತಿಟ್ಟು ಕಿರುಕುಳ!
ಆದ್ರೆ ಜೈಲು ಅಧಿಕಾರಿಗಳು ಜೈಲು ನಿಯಮಗಳನ್ನ ಗಾಳಿಗೆ ತೂರಿ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರ ಜೊತೆಗೆ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಜೈಲು ವಿಸಿಟರ್ಸ್ ಡೈರಿ ಕೇಳಿದ್ವಿ. ಆಗ ವಿಸಿಟರ್ ಡೈರಿ ಕಂಪ್ಯೂಟರೈಸ್ಡ್ ಆಗಿದೆ ಅನ್ನೋ ಉತ್ತರ ನೀಡಿದ್ರು. ಆದ್ರೆ ದರ್ಶನ್ ಪ್ರಕರಣದಲ್ಲಿ ಭೇಟಿಗೆ ತೆರಳುವ ವಿಸಿಟರ್ಸ್ ಡೈರಿ ನೀಡಿದ್ದಾರೆ.
ಇನ್ನು ಡೈರಿಯಲ್ಲಿ ದರ್ಶನ್ ಭೇಟಿಗೆ ತೆರಳುವವರು ತಮ್ಮದೇ ಕೈ ಬರವಣಿಗೆಯಲ್ಲಿ ಡೈರಿಯಲ್ಲಿ ಬರೆಯಬೇಕು. ಆದ್ರೆ, ಸದ್ಯ ಜೈಲು ಅಧಿಕಾರಿಗಳು ನೀಡಿರೋ ದಾಖಲೆಗಳನ್ನು ಯಾರೋ ಒಬ್ಬರೇ ಎಲ್ಲೋ ಕುಳಿತು ಬರೆದಿದ್ದಾರೆ. ಹೀಗಾಗಿ ಜೈಲಿನಲ್ಲಿ ದರ್ಶನ್ ಭೇಟಿ ವಿಚಾರದಲ್ಲೂ ಭಾರಿ ಅಕ್ರಮ ನಡೆಯುತ್ತಿದೆ ಎಂದು ಆರ್ ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆರೋಪ ಮಾಡಿದ್ದಾರೆ.
ಮಾತ್ರೆ ಸೇವಿಸಿ ಬ್ರಿಟನ್ ವ್ಯಕ್ತಿ ಬೆಂಗಳೂರಿನಲ್ಲಿ ಸಾವಿಗೆ ಶರಣು!
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ರನ್ನು ಭೇಟಿಯಾಗಲು ಈವರೆಗೆ ಎಷ್ಟು ಜನ ಭೇಟಿಯಾಗಿದ್ದಾರೆ ಎಂಬ ವಿಚಾರವು ಹೊರಬಂದಿದೆ. ಜೂನ್ 25 ರಿಂದ ಜುಲೈ 26ರ ಅವಧಿಯಲ್ಲಿ ಒಟ್ಟು 30 ಜನ ಭೇಟಿ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮೀ, ತಮ್ಮ ದಿನಕರ್ ಸೇರಿ 30 ಮಂದಿ ಭೇಟಿ ಮಾಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ ಭೇಟಿ ಮಾಡಿದ್ದಾರೆ. ದರ್ಶನದ ತಾಯಿ ಮೀನಾ ಜುಲೈ 1 ರಂದು ಭೇಟಿ ಮಾಡಿದ್ದು, ದರ್ಶನ್ ತಮ್ಮ ದಿನಕರ್ 3 ಸಲ ಭೇಟಿ ಮಾಡಿದ್ದಾರೆ. ಆರ್ ಟಿ ಐ ಅರ್ಜಿಯಲ್ಲಿ ದರ್ಶನ್ ಭೇಟಿ ಮಾಡಿದವರ ಲಿಸ್ಟ್ ಬೆಳಕಿಗೆ ಬಂದಿದ್ದು,
ಜೂನ್ 24 ರಂದು ಪತ್ನಿ ವಿಜಯಲಕ್ಷ್ಮಿ ಭೇಟಿ.
ಜೂನ್ 29 ನಟಿ ರಕ್ಷಿತಾ ಭೇಟಿ, ಸ್ನೇಹಿತೆ ಎಂದು ನಮೂದಿಸಿ ಭೇಟಿ.
ಜುಲೈ 1ರಂದು ದರ್ಶನ್ ತಾಯಿ ಹಾಗೂ ತಮ್ಮ ದಿನಕರ್ ಭೇಟಿ.
ಜುಲೈ 2 ರಂದು ಸಮತಾ ಭೇಟಿ, ಪುಸ್ತಕದಲ್ಲಿ ತಂಗಿ ಎಂದು ನಮೂದಿಸಿ ಭೇಟಿಯಾದ ಸಮತಾ.
ಜುಲೈ 10 ರಂದು ಪತ್ನಿ ವಿಜಯಲಕ್ಷ್ಮಿ, ಮಗ, ಸುಶಾಂತ( co-brother), ಚಂದ್ರಶೇಖರ್ ಅಳಿಯ ಭೇಟಿ.
ಜುಲೈ 11 ರಂದು ನಟ ಧನ್ವಿರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ ಭೇಟಿ.
ಜುಲೈ15 ರಂದು ಪತ್ನಿ ವಿಜಯಲಕ್ಷ್ಮಿ, ನಿತೀನ್, ದಿನಕರ್, ಅನುಶ್ ಶೆಟ್ಟಿ.
ಜುಲೈ19 ರಂದು ದರ್ಶನ್ ಪುಟ್ಣಣ್ಣಯ್ಯ, ರಾಘವ, ತರುಣ್ ಕಿಶೋರ್, ಹೇಮಂತ, ನವೀನ, ಕಿರ್ತನ್, ಕುಮಾರ್ ಭೇಟಿ.
ಜುಲೈ 22 ರಂದು ವಿನೋದ್ ಪ್ರಭಾಕರ್ , ದಿನಕರ್, ಸುಶಾಂತ ನಾಯ್ಡು, ಶ್ರೀನಿವಾಸ್, ವಿಜಯಲಕ್ಷ್ಮಿ ಭೇಟಿ.
ಜುಲೈ 25 ರಂದು ಸಾಧುಕೋಕಿಲ, ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ ಭೇಟಿ.
ಒಟ್ಟು 30 ಮಂದಿಯಿಂದ ಜೂನ್ -24 ರಿಂದ ಜುಲೈ 25ರ ಒಂದು ತಿಂಗಳ ಅವಧಿಯಲ್ಲಿ ದರ್ಶನ್ ಭೇಟಿಯಾಗಿದೆ. ಹೀಗಾಗಿ ಕಾನೂನು ಉಲ್ಲಂಘನೆಯಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.