ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಸ್ಥಳ ಮಹಜರು ಮಾಡಿ, ಬಾಂಬ್ ಬ್ಲಾಸ್ಟ್ ಪ್ರಕರಣ ಮರುಸೃಷ್ಟಿ ಮಾಡಿದ್ದಾರೆ.
ಬೆಂಗಳೂರು (ಆ.05): ಬೆಂಗಳೂರಿನಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ (Bengaluru Rameshwaram Cafe bomb blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಐದು ತಿಂಗಳ ಬಳಿಕ ಸ್ಥಳ ಮಹಜರು ಮಾಡಿ, ಬಾಂಬ್ ಬ್ಲಾಸ್ಟ್ ಪ್ರಕರಣ ಮರುಸೃಷ್ಟಿ ಮಾಡಿದ್ದಾರೆ. ಈ ವೇಳೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಆರೋಪಿ ಮುಸಾವೀರ್ ನಂತರ ಹೂಡಿ ಬಸ್ ನಿಲ್ದಾಣದ ಬಳಿಯ ಮಸೀದಿಗ ಹೋಗಿ ಬಟ್ಟೆ ಬದಲಾಯಿಸಿ, ಅಲ್ಲಿಯೇ ಕ್ಯಾಪ್ ಬಿಟ್ಟು ಹೋಗಿದ್ದನು. ಈ ಸ್ಥಳವನ್ನೂ ಎನ್‌ಐಎ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಬೆಳಗ್ಗೆ 6.30 ರಿಂದ ನಡೆಯುತ್ತಿರುವ ಮರುಸೃಷ್ಟಿ ಕಾರ್ಯ ಆರಂಭಿಸಿದ್ದರು. ಆರೋಪಿ ಮುಸ್ಸಾವಿರ್ ಹೆಜ್ಜೆಯನ್ನು ವಿಡಿಯೊ ರೆಕಾರ್ಡ್ ಮಾಡಲಾಗುತ್ತಿದೆ. ಆತ ಬಸ್ ಸ್ಟಾಪ್ ನಿಂದ ನಡೆದು ಬಂದ ದಾರಿಯ ನಕ್ಷೆ ಮಾಡಿದ್ದಾರೆ. ಚಾಕ್ ಪೀಸ್ ಮುಖಾಂತರ ನಡೆದು ಬಂದ ದಾರಿಯನ್ನ ಮಾರ್ಕ್ ಮಾಡಿರುವ ಎನ್ ಐ ಎ ಅಧಿಕಾರಿಗಳು, ಚಾಕ್ ಪೀಸ್ ನಿಂದ ಮಾರ್ಕ್ ಮಾಡಿರುವ ನಕ್ಷೆಯನ್ನ ಟೇಪ್ ಮುಖಾಂತರ ಅಳತೆ ಮಾಡಿದ್ದಾರೆ. ಅಳತೆ ಮಾಡಿ ಆತ ಎಷ್ಟು ಓಡಾಟ ಮಾಡಿದ್ದ ಅನ್ನೋದನ್ನ ಅಧಿಕಾರಿಗಳು ನೋಟ್ ಮಾಡುತ್ತಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ರೂವಾರಿ ಬೆಂಗಳೂರಿನ ಎಂಜಿನಿಯರ್..!
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ನಿರಂತರ 5 ಗಂಟೆಗಳಿಂದ ಮರುಸೃಷ್ಟಿ ಕಾರ್ಯ ಮಾಡಲಾಗಿದೆ. ಕ್ರೈಂ ಸೀನ್ ನಲ್ಲಿ ಆರೋಪಿ ಎಷ್ಟು ದೂರ ಕ್ರಮಿಸಿದ್ದ ಅನ್ನೋದ್ರ ಅಳತೆ ಮಾಡಲಾಗಿದೆ. ಇಡೀ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗುವ ಜಾಗದ ವರೆಗೂ ನಕ್ಷೆ ರಚನೆ ಮಾಡಲಾಗಿದೆ. ನಕ್ಷೆ ರಚನೆ ಮಾಡಿ ಅದನ್ನ ಟೇಪ್ ಮುಖಾಂತರ ಅಳತೆ ಮಾಡಲಾಗಿದೆ. ಇನ್ನು ಎನ್ ಐ ಎ ಅಧಿಕಾರಿಗಳ ಸ್ಥಳ ಮಹಜರು ಪ್ರಕ್ರಿಯೆ ಸುಮಾರು 5 ಗಂಟೆಗಳ ಕಾಲ ಮುಕ್ತಾಯಗೊಳಿಸಲಾಗಿದೆ. ಆರೋಪಿ ಮುಸ್ಸಾವಿರ್ ಕೇವಲ 11 ಹೆಜ್ಜೆಗಳಲ್ಲಿಯೇ ರಾಮೇಶ್ವರಂ ಕೆಫೆ ತಲುಪಿದ್ದನು. ಎಂಬುದು ತನಿಖೆಯ ಮಹಜರು ಪ್ರಕ್ರಿಯೆಯಲ್ಲಿ ಪತ್ತೆಯಾಗಿದೆ.
ಇನ್ನು ರಾಮೇಶ್ವರಂ ಕೆಫೆಯಲ್ಲಿ ಮಹಜರು ಮುಗಿಸಿ ಮತ್ತೊಂದು ಸ್ಥಳದಲ್ಲಿ ಮಹಜರು ಮಾಡಲಾಗುತ್ತಿದೆ. ಅದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ತಿಂಡಿ ತಿಂದು ಹೂಡಿ ಬಸ್ ನಿಲ್ದಾಣದ ಬಳಿಯ ಮಸೀದಿಗೆ ಹೋಗಿ ಬಟ್ಟೆ ಬದಲಾಯಿಸಿದ್ದನು. ಈ ವೇಳೆ ಬಟ್ಟೆ ಬದಲಿಸಿ ಹೋಗುವಾಗ ಆತನ ಕ್ಯಾಪ್ ಅನ್ನು ಮಸೀದಿಯಲ್ಲಿಯೇ ಬಿಟ್ಟು ಹೋಗಿದ್ದನು. ಸದ್ಯ ಈ ಸ್ಥಳವನ್ನೂ ತನಿಖೆ ಭಾಗವಾಗಿ NIA ಅಧಿಕಾರಿಗಳಿಂದ ಮತ್ತೊಮ್ಮೆ ಸ್ಥಳ ಮಹಜರು ಮಾಡಲಾಗಿದೆ.
ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಮಧ್ಯಾಹ್ನದ ವೇಳೆಗೆ ಎನ್‌ಐಎ ಅಧಿಕಾರಿಗಳಿಂದ ರಾಮೇಶ್ವರಂ ಕೆಫೆಯಲ್ಲಿ ಮರುಸೃಷ್ಟಿ ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಿರಂತರ ಐದೂವರೆ ಗಂಟೆಗಳ ಕಾಲ ನಡೆದ ಪ್ರಕ್ರಿಯೆ ಮುಕ್ತಾಯ ಆಗಿದ್ದು, ರಾಮೇಶ್ವರ ಕೆಫೆಯಲ್ಲಿ ಮಹಜರು ಮುಗಿಸಿ ಹೂಡಿ ಜಂಕ್ಷನ್ ತೆರಳಿದ್ದಾರೆ. ಹೂಡಿ ಜಂಕ್ಷನ್ ನಲ್ಲಿರುವ ಮಸೀದಿಯಲ್ಲಿ ಬಟ್ಟೆ ಬದಲಿಸಿದ್ದ ಮುಸ್ಸಾವೀರ್ ಬಟ್ಟೆ ಬದಲಿಸಿದ ಬಗ್ಗೆಯೂ ಸ್ಥಳ ಮಹಜರ್ ಹಾಗೂ ಮರುಸೃಷ್ಟಿ ಮಾಡಲಿದ್ದಾರೆ. ಕೆಫೆಯ ಕ್ರೈಂ ಸೀನ್ ನಲ್ಲಿ ಆರೋಪಿ ಎಷ್ಟು ದೂರ ಕ್ರಮಿಸಿದ್ದ ಅನ್ನೋದ್ರ ಅಳತೆ ಮಾಡಲಾಗಿದೆ. ಇಡಿ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗುವ ಜಾಗದ ವರೆಗೂ ನಕ್ಷೆ ರಚನೆ ಮಾಡಲಾಗಿದ್ದು, ಉಗ್ರ ಓಡಾಡಿರುವ ಹೆಜ್ಜೆ ಹೆಜ್ಜೆಯ ಮಾರ್ಕ್ ಮಾಡಲಾಗಿದೆ.