ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗನಿಂದ ಪಂಚಾಯಿತಿ ಸದಸ್ಯನಿಗೆ ಪ್ರಾಣ ಬೆದರಿಕೆ, ದೂರು ದಾಖಲು

Published : Apr 28, 2023, 02:09 PM IST
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗನಿಂದ  ಪಂಚಾಯಿತಿ ಸದಸ್ಯನಿಗೆ ಪ್ರಾಣ ಬೆದರಿಕೆ, ದೂರು ದಾಖಲು

ಸಾರಾಂಶ

ಮಾಜಿ ಸ್ಪೀಕರ್ ರಮೇಶ್ ಕುಮಾರ್  ಬೆಂಬಲಿಗನಿಂದ ಗ್ರಾಮ ಪಂಚಾಯಿತಿ ಸದಸ್ಯನಿಗೆ ಪ್ರಾಣ ಬೆದರಿಕೆ ಒಡ್ಡಿದ ಆರೋಪ ಕೇಳಿಬಂದಿದೆ. ರಮೇಶ್ ಕುಮಾರ್ ಬೆಂಬಲಿಗ ಪ್ರಮೋದ್ ರೆಡ್ಡಿ ಎಂಬಾತ ಪ್ರಾಣ ಬೆದರಿಕೆ ಒಡ್ಡಿದ ವ್ಯಕ್ತಿಯಾಗಿದ್ದಾನೆ.

ಕೋಲಾರ (ಏ.28): ಮಾಜಿ ಸ್ಪೀಕರ್ ರಮೇಶ್ ಕುಮಾರ್  ಬೆಂಬಲಿಗನಿಂದ ಗ್ರಾಮ ಪಂಚಾಯಿತಿ ಸದಸ್ಯನಿಗೆ ಪ್ರಾಣ ಬೆದರಿಕೆ ಒಡ್ಡಿದ ಆರೋಪ ಕೇಳಿಬಂದಿದೆ. ರಮೇಶ್ ಕುಮಾರ್ ಬೆಂಬಲಿಗ ಪ್ರಮೋದ್ ರೆಡ್ಡಿ ಎಂಬಾತ ಪ್ರಾಣ ಬೆದರಿಕೆ ಒಡ್ಡಿದ ವ್ಯಕ್ತಿಯಾಗಿದ್ದಾನೆ. ರಮೇಶ್ ಕುಮಾರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿದ್ದಕ್ಕೆ ಕೊಲೆ ಮಾಡುವುದಾಗಿ ಕಾಂಗ್ರೆಸ್ ಬೆಂಬಲಿಗ ಪ್ರಮೋದ್ ರೆಡ್ಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ರಮೇಶ್ ಕುಮಾರ್ ಹೆಸರು ಹೇಳಿದರೆ ಕತ್ತರಿಸುತ್ತೇವೆ, ನಿನ್ನನ್ನು ಕೊಲೆ ಮಾಡುವವರೆಗೂ ಬಿಡುವುದಿಲ್ಲ ಎಂದು ಬೆದರಿಕೆ ಹಾಕುವುದರ ಜೊತೆಗೆ ತೀವ್ರ ಅವಾಚ್ಯ ಶಬ್ದಗಳೊಂದಿಗೆ ನಿಂದಿಸಿರುವ ಬಗ್ಗೆ ದೂರು ದಾಖಲಾಗಿದೆ.

Bengaluru:ಎಐಎಡಿಎಂಕೆ ಅಭ್ಯರ್ಥಿಯೆಂದು ಚುನಾವಣಾ ಆಯೋಗಕ್ಕೆ ವಂಚಿಸಲು ಯತ್ನ

ಡಿಸಿಸಿ ಬ್ಯಾಂಕ್ ನಿಂದ ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವ ಸಾಲದ ಹಣ ಕೇಂದ್ರ ಸರ್ಕಾರದ ಹಣ ರಮೇಶ್ ಕುಮಾರ್ ತನ್ನದೇ ಹಣ ಎಂಬಂತೆ ಮತ ಕೇಳುತ್ತಿದ್ದಾರೆ ಎಂದು ಗ್ರಾ.ಪಂ ಸದಸ್ಯ ನವೀನ್ ವಿಡಿಯೋ ಮಾಡಿದ್ದರು. ಇದರ ಬೆನ್ನಲ್ಲೇ ವಿಡಿಯೋ ಡಿಲೀಟ್ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತ  ಪ್ರಮೋದ್ ರೆಡ್ಡಿ  ಬೆದರಿಕೆ ಹಾಕಿದ್ದು, ವಿಡಿಯೋ ಡಿಲೀಟ್ ಮಾಡದಿದ್ದರೆ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಪ್ರಮೋದ್ ವಿರುದ್ಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Voter ID Scam: ಚಿಲುಮೆ ಸಂಸ್ಥೆ ಮಾದರಿಯಲ್ಲಿ ಮತ್ತೊಂದು ಸಂಸ್ಥೆಯಿಂದ ಮತದಾರರ

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ : ಬೈಕ್ ಸವಾರನನ್ನು ಬಲಿ ಪಡೆದ ಲಾರಿ!
ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಡಿವಾಳ ಸಮೀಪದ ಮೈಕೋಬಂಡೆ ಬಳಿ ಘಟನೆ ನಡೆದಿದ್ದು,  ರಾತ್ರಿ  12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವೇಗವಾಗಿ ಬಂದ ಕಂಟೇನರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಾಯಗೊಂಡ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ. ಘಟನೆ ಸಂಬಂಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಲಾರಿಯ ಪತ್ತೆಗಾಗಿ ಆಡುಗೋಡಿ ಸಂಚಾರಿ ಪೊಲೀಸರು ಸಿಸಿಟವಿ ಪರಿಶೀಲನೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ