ಬೆಂಗಳೂರು; ಗಂಡು ವೇಶ್ಯೆಯಾದ ಗಂಡ, ಡಿವೋರ್ಸ್ ಕೇಳಿದ ಪತ್ನಿ!

By Suvarna News  |  First Published Apr 12, 2021, 6:19 PM IST

ಕೊರೋನಾಕ್ಕೆ ಕೆಲಸ ಹೋಯ್ತು.. ಗಂಡ ಗಂಡು ವೇಶ್ಯೆಯಾದ!/ ಕೊರೋನಾ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದ/  ಹಣಕಾಸಿನ ಮುಗ್ಗಟ್ಟು ಎದುರಿಸಿ ದಂಧೆಗೆ ಇಳಿದಿದ್ದ/ ಕೌನಸ್ಎಲಿಂಗ್ ನಡೆಸಿದರೂ ಪ್ರಯೋಜನವಾಗಿಲ್ಲ


ಬೆಂಗಳೂರು (ಏ.12) ಕೊರೋನಾ ಜನಜೀವನದ ಮೇಲೆ ಎಂತೆಂಥ ಪರಿಣಾಮಗಳನ್ನು ಉಂಟುಮಾಡಿದೆ ಎನ್ನುವುದಕ್ಕೆ ಈ ಘಟನೆಯೇ ನಿದರ್ಶನ. 24 ವರ್ಷದ ಮಹಿಳೆ ತನ್ನ ಗಂಡನಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಳೆ.

ಬಿಪಿಒದಲ್ಲಿ  ಕೆಲಸ ಮಾಡುತ್ತಿದ್ದ ಗಂಡ ಕೆಲಸ ಕಳೆದುಕೊಂಡಿದ್ದ. ಬದಲಾದ ಸ್ಥಿತಿಯಲ್ಲಿ ಸೆಕ್ಸ್ ವರ್ಕರ್ ಆಗಿ ಬದಲಾಗಿದ್ದ.  ಇದರಿಂದ ಕಂಗಾಲಾದ ಪತ್ನಿ ಡೀವೋರ್ಸ್ ಕಡೆ ಹೋಗಿದ್ದಾಳೆ. ವನಿತಾ ಸಹಾಯವಾಣಿ ಮೂಲಕ ದಂಪತಿಗೆ ಕೌನ್ಸೆಲಿಂಗ್ ನಡೆಸಲಾಗಿದ್ದರೂ ಪ್ರಯೋಜನವಾಗಿಲ್ಲ.

Tap to resize

Latest Videos

undefined

ಭವೇಶ್ ಮತ್ತು ಸ್ಮೃತಿ(ಹೆಸರು ಬದಲಾಯಿಸಲಾಗಿದೆ? ಗೆ ಲವ್ ಆಟ್ ಫಸ್ಟ್ ಸೈಟ್ ಆಗಿತ್ತು. 2017 ರಲ್ಲಿ ಆಫೀಸ್ ಕ್ಯಾಂಟೀನ್ ನಲ್ಲಿ ಪರಿಚಯವಾಗಿದ್ದ ಇಬ್ಬರ ನಡುವೆ ಪ್ರೀತಿ ಅರಳಿತ್ತು. ಎರಡು ವರ್ಷದ ನಂತರ ಇಬ್ಬರು ಮದುವೆಯಾಗಿದ್ದರು. ಕೊರೋನಾ ಕಾರಣಕ್ಕೆ ಭವೇಶ್ ಕೆಲಸ ಕಳೆದುಕೊಂಡಿದ್ದರು. 

ಸೆಕ್ಸ್ ದಂಧೆಗೆ ಇಳಿದ ನಟಿಯರ ದೊಡ್ಡ ಪಟ್ಟಿಯೇ ಇದೆ

ಕೆಲಸ ಕಳೆದುಕೊಂಡ ನಂತರದಲ್ಲಿ ಗಂಡನ ವರ್ತನೆಯಲ್ಲಿ ದೊಡ್ಡ ಬದಲಾವಣೆಯಾಗಿದ್ದನ್ನು ಹೆಂಡತಿ ಗಮನಿಸಿದ್ದಾಳೆ. ಯಾವಾಗಲೂ ತನ್ನ ಲ್ಯಾಪ್ ಟಾಫ್ ಮತ್ತು ಮೊಬೈಲ್ ನಲ್ಲಿಯೇ  ಬ್ಯೂಸಿಯಾಗಿರುತ್ತಿರುವುದನ್ನು ನೋಡಿದ್ದಾಳೆ.  ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ಬರುತ್ತಿರುವುದನ್ನು ಗಮನಿಸಿದ್ದಾಳೆ. 

ಅನುಮಾನ ಜಾಸ್ತಿಯಾದಾಗ ತನ್ನ ಟೆಕ್ಕಿ ಸಹೋದರನ ಸಹಾಯದೊಂದಿಗೆ ಗಂಡನ ಲ್ಯಾಪ್ ಟಾಪ್ ಪರಿಶೀಲನೆ ಮಾಡಿದ್ದಾಳೆ.  ಲ್ಯಾಪ್ ಟಾಫ್ ಸಿಕ್ರೇಟ್ ಪೋಲ್ಡರ್ ನಲ್ಲಿ ಗಂಡನ ಬೆತ್ತಲೆ ಚಿತ್ರಗಳು..ಮಹಿಳೆಯರೊಂದಿಗೆ ಅರೆನಗ್ನವಾಗಿ ಕಾಣಿಸಿಕೊಂಡಿರುವ ಚಿತ್ರ ಕಂಡು ದಂಗಾಗಿದ್ದಾಳೆ. 

ಮೇಲ್ ಎಸ್ಕಾರ್ಟ್ ಆಗಿ ಕೆಲಸ ಮಾಡಲು ಆರಂಭಿಸಿದ್ದು ಗಂಟೆಗೆ 3 ರಿಂದ 5 ಸಾವಿರ ತೆಗೆದುಕೊಳ್ಳುತ್ತಿರುವುದು ಗೊತ್ತಾಗಿದೆ.  ತನ್ನ ಗೆಳೆಯನೊಬ್ಬನಿಂದ ಈ ದಂಧೆ ಗೊತ್ತಾಗಿ ಅನಿವಾರ್ಯವಾಗಿ ಇಳಿದೆ ಎಂದು ಗಂಡ ಕೌನಸ್ಎಲಿಂಗ್ ನಲ್ಲಿ ಹೇಳಿದ್ದಾನೆ. ಒಟ್ಟಿನಲ್ಲಿ ಈ ಪ್ರಕರಣ ಈಗ ಡಿವೋರ್ಸ್ ಗೆ ಬಂದು ನಿಂತಿದೆ. 

click me!