ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಯುವತಿ ಪರ ವಕೀಲರಿಂದ ಸ್ಫೋಟಕ ಮಾಹಿತಿ

Published : Apr 12, 2021, 03:41 PM ISTUpdated : Apr 12, 2021, 04:15 PM IST
ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಯುವತಿ ಪರ ವಕೀಲರಿಂದ ಸ್ಫೋಟಕ ಮಾಹಿತಿ

ಸಾರಾಂಶ

ಕೊರೋನಾ ಎರಡನೇ ಅಲೆ ಹಾಗು ಉಪಚುನಾವಣೆ ಗದ್ದಲದ ನಡುವೆ ಮಯಾವಾಗಿದ್ದ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣ ಮತ್ತೆ  ಮುನ್ನೆಲೆಗೆ ಬಂದಿದೆ.

ಬೆಂಗಳೂರು, (ಏ.12): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಪ್ರಕರಣ ಹೊಸ ತಿರುವು ಪಡೆದಿದ್ದು, ಸಂತ್ರಸ್ತ ಯುವತಿ ಉಲ್ಟಾ ಹೊಡೆದಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ರೆ, ಇದನ್ನು ಸಿಡಿ ಲೇಡಿ ಪರ ವಕೀಲರು ಅಲ್ಲಗೆಳೆದಿದ್ದಾರೆ

"

 ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಿಂಗ್ ಪಿನ್​ಗಳಾದ ನರೇಶ್ ಗೌಡ ಮತ್ತು ಶ್ರವಣ್ ಅವರು ತನ್ನನ್ನು ಹನಿಟ್ರ್ಯಾಪ್​ ಆಗಿ ಬಳಸಿಕೊಂಡಿದ್ದಾರೆ ಎಂದು ಸಿಡಿ ಸಂತ್ರಸ್ಥೆಯು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ಎದುರು ಇಂದು ಹಾಜರಾಗಿ ಸ್ಫೋಟಕ ಹೇಳಿದ್ದಳು ಎಂದು ವರದಿಯಾಗಿತ್ತು. 

ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸ್ಫೋಟಕ ತಿರುವು: ಉಲ್ಟಾ ಹೊಡೆದ ಲೇಡಿ

ಇನ್ನು ಈ ಬಗ್ಗೆ ಸಿಡಿ ಯುವತಿ ವಕೀಲರಾದ ಸೂರ್ಯ ಮುಕುಂದರಾಜ್, ಜಗದೀಶ್​ ಮತ್ತು ಮಂಜುನಾಥ್​ ಅವರು ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ಥ ಯುವತಿ ಅಂತಹ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಪ್ರಕರಣದಲ್ಲಿ ಆಕೆ ಮ್ಯಾಜಿಸ್ಟ್ರೇಟ್​ ಎದುರು ಈ ಹಿಂದೆ ತಾನು ನೀಡಿದ್ದ ಹೇಳಿಕೆಗೆ ಬದ್ಧಳಾಗಿದ್ದಾಳೆ ಎಂದು ಸ್ಪಷ್ಟಪಡಿಸಿದರು.

ಸಂತ್ರಸ್ಥ ಯುವತಿ ಇಂದು (ಸೋಮವಾರ) ಎಸ್​ಐಟಿ ಎದುರು ಹಾಜರಾಗಿ ವಾಟ್ಸಪ್ ಚಾಟಿಂಗ್ ಮಾಹಿತಿ ನೀಡಬೇಕಿತ್ತು. ಹೀಗಾಗಿ ಆಡುಗೋಡಿ ಎಸ್​ಐಟಿ ಕಚೇರಿಗೆ ತೆರಳಿದ್ದಳು. ಆ ಸಂದರ್ಭದಲ್ಲಿ ಯಾವುದೇ ರೀತಿಯ ವ್ಯತಿರಿಕ್ತ ಹೇಳಿಕೆಯನ್ನು ನೀಡಿಲ್ಲ. ಉಲ್ಟಾ ಹೊಡೆದಿಲ್ಲಾ. ಖುದ್ದಾಗಿ ಆಕೆಯನ್ನು ಮಾತನಾಡಿಸಿಕೊಂಡು ಬಂದಿರುವುದಾಗಿ ಸಿಡಿ ಲೇಡಿ ಪರ ವಕೀಲರು ಮಾಹಿತಿ ನೀಡಿರು.

ಇದೆಲ್ಲ ಹೈಡ್ರಾಮ. ಸಂತ್ರಸ್ಥ ಯುವತಿ ಉಲ್ಟಾ ಹೇಳಿಕೆ ನೀಡಿಲ್ಲ.ಅದೆಲ್ಲಾ ಊಹಾಪೋಹ. ಎಸ್​ಐಟಿ ಅಧಿಕಾರಿಗಳೇ ಇಂತಹ ಮಾಹಿತಿಯನ್ನು ಸೋರಿಕೆ ಮಾಡಿರಬಹುದು ಎಂದು ಯುವತಿ ಪರ ವಕೀಲರು ಆರೋಪಿಸಿದ್ದು, ಕೆಲವೇ ಹೊತ್ತಿನಲ್ಲಿ ಯುವತಿಯ ಕಡೆಯಿಂದ ಈ ಬಗ್ಗೆ ಖಚಿತ ಮಾಹಿತಿ ಒದಗಿಸಲಾಗುವುದು. ಜನಕ್ಕೆ ಸ್ಪಷ್ಟ ಚಿತ್ರಣ ನೀಡಲಾಗುವುದು. ಇಂತಹ ಸುದ್ದಿಗಳಿಗೆ ಮಹತ್ವ ಕೊಡಬೇಕಾದ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿಯೂ ಆದ ವಕೀಲ ಸೂರ್ಯ ಮುಕುಂದರಾಜ್ ಹೇಳಿದರು.

ವಕೀಲರು ಹೇಳಿದಂತೆ ಸಿ.ಡಿ. ಲೇಡಿ ಕಡೆಯಿಂದ ಈ ಬಗ್ಗೆ ಸ್ಪಷ್ಟನೆ ವಿಡಿಯೋ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?