
ಹೌದು ಇ ಕಾಮರ್ಸ್ ಕಂಪನಿ ಅಮೆಜಾನ್‌ಗೆ ಲಕ್ಷಾಂತರ ರೂ., ವಂಚಿಸಿದ ಘಟನೆ ನಡೆದಿದ್ದು, ಕಳ್ಳರು ಹಿಡಿದ ದಾರಿಯನ್ನು ಕೇಳಿದರೆ ನೀವು ದಂಗಾಗುತ್ತಿರಾ. ಅಷ್ಟಕ್ಕೂ ಆಗಿದ್ದೇನು? ಖದೀಮರು ವಂಚಿಸಿದ್ದೇಗೆ? ಹಾಗೂ ಎಲ್ಲಿ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜಸ್ಥಾನದ ದೌಸಾ ಜಿಲ್ಲೆಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯು ಇ-ಕಾಮರ್ಸ್ ಕಂಪನಿ ಅಮೆಜಾನ್‌ಗೆ ಲಕ್ಷಾಂತರ ರೂಪಾಯಿ ವಂಚಿಸಿದ ಜಾಲ ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಪೊಲೀಸರ ಪ್ರಕಾರ, ಆರೋಪಿಗಳು ಆನ್‌ಲೈನ್‌ನಲ್ಲಿ ದುಬಾರಿ ಉತ್ಪನ್ನಗಳನ್ನು ಬುಕ್ ಮಾಡುವ ಮೂಲಕ ಕಂಪನಿಗೆ ಸುಮಾರು 19.38 ಲಕ್ಷ ರೂಪಾಯಿಗಳ ನಷ್ಟವನ್ನುಂಟುಮಾಡಿದ್ದಾರೆ. ಪೊಲೀಸರು ಸಾಹಿಲ್ ಬನ್ಸಾಲ್, ಮದನ್ ಜಂಗಿಡ್, ಪರಾಸ್ ಸಾಹು ಮತ್ತು ನರೇಂದ್ರ ಬೈರ್ವಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ವಂಚನೆಯ ಯೋಜನೆಯು ಅಮೆಜಾನ್‌ನಿಂದ ಆರಂಭವಾಗಿತ್ತು. ಆರೋಪಿಯು ಮೊದಲು ಆನ್‌ಲೈನ್‌ನಲ್ಲಿ ಅತ್ಯಂತ ದುಬಾರಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆರ್ಡರ್ ಮಾಡುತ್ತಿದ್ದನು. ಈ ಯೋಜನೆಯಲ್ಲಿ ಕೇವಲ ಆತ ಮಾತ್ರ ಇರಲಿಲ್ಲ, ಬದಲಿಗೆ ಸಾಮಗ್ರಿಗಳನ್ನು ತಲುಪಿಸುವ ಡೆಲಿವರಿ ಬಾಯ್ ಮತ್ತು ಗೋದಾಮಿನ ನಿರ್ವಾಹಕರು ಕೂಡಾ ಸಂಪೂರ್ಣವಾಗಿ ಕೈಜೋಡಿಸಿದ್ದರು. ಇವರೆಲ್ಲರೂ ಸೇರಿಯೇ ಪ್ಲಾನ್ ಮಾಡಿದ್ದರು ಎನ್ನುವುದು ಪೊಲೀಸ್‌ರಿಂದ ತಿಳಿದು ಬಂದಿದೆ.
ಸಾಮಗ್ರಿಗಳನ್ನು ವಿತರಣೆ ಮಾಡುವ ಸಮಯದಲ್ಲಿ, ಆರೋಪಿಗಳು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಅಪೂರ್ಣವಾದ ವಿಳಾಸವನ್ನು ನಮೂದಿಸುತ್ತಿದ್ದರು. ವಿಳಾಸ ಸರಿಯಾಗಿ ಇಲ್ಲದ ಕಾರಣ ಆ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ತಾನಾಗಿಯೇ ಆರ್ಡರ್ ವಾಪಸ್ ಕಳುಹಿಸುವ ರಿಟರ್ನ್ ಪ್ರಕ್ರಿಯೆಯನ್ನು ಪ್ರಚೋದಿಸುತ್ತಿತ್ತು. ಈ ರಿಟರ್ನ್ ನೆಪದಲ್ಲಿ ಅಸಲಿ ದುಬಾರಿ ವಸ್ತುಗಳನ್ನು ಸುಲಭವಾಗಿ ಬೇರೆಡೆಗೆ ಸಾಗಿಸಿ, ಕಂಪನಿಗೆ ದೊಡ್ಡ ಮಟ್ಟದ ಮೋಸ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್‌ರು ಹೇಳುವುದೇನು?
ಪೊಲೀಸರ ಪ್ರಕಾರ, ಆರೋಪಿಗಳು ಪಾರ್ಸೆಲ್‌ಗಳನ್ನು ಹಿಂದಿರುಗಿಸುವ ಪ್ರಕ್ರಿಯೆಯಲ್ಲಿ ಮಧ್ಯದಲ್ಲಿ ವಶಪಡಿಸಿಕೊಂಡು ಒಳಗಿನ ದುಬಾರಿ ವಸ್ತುಗಳನ್ನು ತೆಗೆದುಹಾಕುತ್ತಿದ್ದರು. ನಂತರ, ಪ್ಯಾಕೇಜ್‌ಗಳನ್ನು ಮತ್ತೆ ಮುಚ್ಚಲಾಗುತ್ತಿತ್ತು, ಮೊದಲ ನೋಟದಲ್ಲೇ ಅವುಗಳಿಗೆ ಯಾವುದೇ ಅನುಮಾನ ಬರುತ್ತಿರಲಿಲ್ಲ. ಈ ವಿಧಾನವು ಕಂಪನಿಗೆ ಆರ್ಥಿಕ ನಷ್ಟವನ್ನುಂಟುಮಾಡಿತು ಮತ್ತು ಕದ್ದ ವಸ್ತುಗಳನ್ನು ನಂತರ ಮರುಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.
ತನಿಖೆಯಲ್ಲಿ ಆರೋಪಿಗಳು ಸುಮಾರು ₹1,00,000 ಮೌಲ್ಯದ 19 ಆಪಲ್ ವಾಚ್‌ಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಗಮಧ್ಯೆ ಎರಡು ಮೆಮೊರಿ ಕಾರ್ಡ್ ಪ್ಯಾಕೆಟ್‌ಗಳನ್ನು ಸಹ ಕಳವು ಮಾಡಲಾಗಿದೆ. ಈ ಸಂಪೂರ್ಣ ವಂಚನೆ ಚೆನ್ನಾಗಿ ಪ್ಲ್ಯಾನ್ ಮಾಡಿ ರೂಪಿಸಿದ್ದು ಎನ್ನಲಾಗಿದೆ. ಆರೋಪಿಗಳು ಬಹಳ ಸಮಯದಿಂದ ಇಂತಹ ಅಪರಾಧಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ನಂತರ, ಸೈಬರ್ ಕ್ರೈಮ್ ಪೊಲೀಸ್ ಠಾಣೆಯು ತಾಂತ್ರಿಕ ಪುರಾವೆಗಳು, ದಾಖಲೆಗಳು ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಪ್ರಾರಂಭಿಸಿದೆ. ತನಿಖೆಯಲ್ಲಿ ಆರೋಪಿಗಳ ಪಾತ್ರ ಬಹಿರಂಗಗೊಳ್ಳುತ್ತಿದ್ದಂತೆ, ಪೊಲೀಸರು ಸಾಹಿಲ್ ಬನ್ಸಾಲ್, ಮದನ್ ಜಂಗಿದ್, ಪರಾಸ್ ಸಾಹು ಮತ್ತು ನರೇಂದ್ರ ಬೈರ್ವಾ ಅವರನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ವಂಚನೆಯಲ್ಲಿ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ವಿತರಣಾ ಸರಪಳಿಯೊಳಗಿನ ವಂಚನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಆರೋಪಿಗಳು ಇತರ ಇ-ಕಾಮರ್ಸ್ ಕಂಪನಿಗಳ ವಿರುದ್ಧವೂ ಇದೇ ರೀತ ವಂಚನೆ ಮಾಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಜಾಆರಿಯಲ್ಲಿರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ