
ಬೆಂಗಳೂರು (ನ.16) : ಆನ್‌ಲೈನ್ ಮೂಲಕ ಗ್ರಾಹಕರಿಗೆಡ್ರಗ್ಸ್ ಪೂರೈಸುತ್ತಿದ್ದ ಯುವತಿ ಹಾಗೂ ಆಕೆಯ ಸ್ನೇಹಿತ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ನಿವಾಸಿಗಳಾದ ವಿಷ್ಣು ಪ್ರಿಯಾ ಹಾಗೂ ಸಿಗಿಲ್ ವರ್ಗೀಸ್ ಬಂಧಿತರಾಗಿದ್ದು, ಆರೋಪಿಗಳಿಂದ 11.37 ಗ್ರಾಂ ತೂಕದ 23 ಎಂಡಿಎಂಎ ಸೇರಿದಂತೆ .5 ಲಕ್ಷ ಮೌಲ್ಯದ ಡ್ರಗ್‌್ಸ ಹಾಗೂ 2 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ತಮ್ಮ ಮನೆಯಲ್ಲೇ ಡ್ರಗ್‌್ಸ ಸಂಗ್ರಹಿಸಿ ಗ್ರಾಹಕರಿಗೆ ಆನ್‌ಲೈನ್ ಮೂಲಕ ಲೋಕೇಷನ್ ಶೇರ್ ಮಾಡಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಇನ್‌ಸ್ಪೆಕ್ಟರ್ ದೀಪಕ್ ನೇತೃತ್ವದ ತಂಡ ಬಂಧಿಸಿದೆ.
ಓದುವ ಬದಲು ಪೆಡ್ಲರ್‌ಗಳಾದರು:
ಆರೋಪಿಗಳು ಮೂಲತಃ ಕೇರಳ ರಾಜ್ಯದವರಾಗಿದ್ದು, ನಗರಕ್ಕೆ ನಾಲ್ಕು ವರ್ಷಗಳ ಹಿಂದೆ ವಿದ್ಯಾಭ್ಯಾಸದ ಸಲುವಾಗಿ ಬಂದಿದ್ದರು. ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ವಿದ್ಯಾರ್ಥಿಗಳಾಗಿದ್ದಾಗ ಮದ್ಯ ವ್ಯಸನಿಗಳಾದ ಇಬ್ಬರು, ನಂತರ ಸುಲಭವಾಗಿ ಹಣ ಸಂಪಾದನೆಗೆ ಡ್ರಗ್‌್ಸ ದಂಧೆಗಿಳಿದ್ದಾರೆ. ಕೊಲಂಬಿಯಾ ದೇಶದ ಕುಖ್ಯಾತ ಡ್ರಗ್‌್ಸ ದಂಧೆಕೋರ ಪ್ಯಾಬಲೋ ಎಕ್ಸೊಬಾರ್ ಭಾವಚಿತ್ರವನ್ನು ಮನೆಯಲ್ಲಿ ಹಾಕಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಏಷ್ಯಾನೆಟ್ ಮಾದಕ ದ್ರವ್ಯ ವಿರೋಧಿ ಅಭಿಯಾನ, ಜೊತೆಯಾಗಿ ನಿಲ್ಲೋಣ ನಾವು ಹಾಡಿನ ಮೂಲಕ ಆಂದೋಲನ!
ಆಫ್ರಿಕಾ, ಕೇರಳ ಹಾಗೂ ಮಂಗಳೂರಿನ ಪೆಡ್ಲರ್‌ಗಳ ಮೂಲಕ ಕಡಿಮೆ ಬೆಲೆಗೆ ಡ್ರಗ್‌್ಸ ಖರೀದಿಸಿ ಬಳಿಕ ಅದನ್ನು ನಗರದಲ್ಲಿ ಗ್ರಾಹಕರಿಗೆ ದುಬಾರಿ ಬೆಲೆಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಕಳೆದ ಮಾಚ್‌ರ್‍ನಲ್ಲಿ ಇವರನ್ನು ಬಂಧಿಸಿ 13 ಲೀಟರ್ ಹ್ಯಾಶಿಸ್ ಆಯಿಲನ್ನು ಹುಳಿಮಾವು ಠಾಣೆ ಪೊಲೀಸರು ಜಪ್ತಿ ಮಾಡಿದ್ದರು. ಇದಾದ ಬಳಿಕ ಜಾಮೀನು ಪಡೆದು ಹೊರ ಬಂದ ಆರೋಪಿಗಳು ಮತ್ತೆ ತಮ್ಮ ಚಾಳಿ ಮುಂದುವರೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಭಯದಿಂದ ಗ್ರಾಹಕರನ್ನು ನೇರವಾಗಿ ಭೇಟಿಯಾಗದೇ ಆನ್‌ಲೈನ್ ಮೂಲಕವೇ ತಮ್ಮ ಡ್ರಗ್‌್ಸ ವ್ಯವಹಾರ ನಡೆಸುತ್ತಿದ್ದರು. ರಸ್ತೆ ಬದಿ ಅಥವಾ ನಿರ್ಜನ ಪ್ರದೇಶದ ಕವರ್‌ನಲ್ಲಿ ಸುತ್ತಿ ಡ್ರಗ್‌್ಸ ಇಡುತ್ತಿದ್ದರು. ಈ ಸ್ಥಳದ ಲೋಕೇಷನ್ ಗ್ರಾಹಕರಿಗೆ ವಾಟ್ಸ್‌ಆಪ್‌ನಲ್ಲಿ ಶೇರ್ ಮಾಡಿ ಡ್ರಗ್‌್ಸ ತಲುಪಿಸುತ್ತಿದ್ದರು. ಹಣವನ್ನು ಸಹ ಆನ್‌ಲೈನ್ ಮೂಲಕವೇ ಸ್ವೀಕರಿಸುತ್ತಿದ್ದರು. ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ದಂಧೆ ನಡೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. Bengaluru: ಡ್ರಗ್ಸ್ ಸ್ಮಗ್ಲಿಂಗ್: ಔಷಧಿ ವ್ಯಾಪಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ