Bengaluru assault case : ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌ಗೆ ‘ಹಲ್ಲೆ' ಕೇಸ್ ಬಿಸಿ

By Kannadaprabha NewsFirst Published Nov 16, 2022, 7:17 AM IST
Highlights
  • ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌ಗೆ ‘ಹಲ್ಲೆ’ ಸಂಕಷ್ಟ
  • -ವಿಚಾರಣೆ ಮುಂದುವರಿಸಲು ಸೆಷನ್ಸ್‌ ಕೋರ್‌್ಟನಿರ್ಧಾರ

ಬೆಂಗಳೂರು (ನ.16) : ಉದ್ಯಮಿ ಪುತ್ರ ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ಸೆಷನ್ಸ್‌ ನ್ಯಾಯಾಲಯ ನಿರ್ಧರಿಸಿದೆ.

ಪ್ರಕರಣಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಹೈಕೋರ್ಚ್‌ ವಿಸ್ತರಿಸದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದುವರಿಸಲು ನಗರದ 66ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಚ್‌ ನ್ಯಾಯಾಲಯದ ನ್ಯಾಯಾಧೀಶ ಎಸ್‌.ನಟರಾಜ್‌ ಅವರು ನಿರ್ಧರಿಸಿದ್ದಾರೆ.

Mohammed Nalapad : ಯುವ ಕಾಂಗ್ರೆಸ್ ನಾಯಕನ ಮೇಲೆ ನಲಪಾಡ್ ಹಲ್ಲೆ!

ಪ್ರಕರಣ ಸರ್ಕಾರಿ ವಿಶೇಷ ಅಭಿಯೋಜಕರಾಗಿರುವ ಹಿರಿಯ ವಕೀಲ ಎಂ.ಶ್ಯಾಮ್‌ ಸುಂದರ್‌ ಅವರು ಹಾಜರಾಗಿ, ಸೆಷನ್ಸ್‌ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಚ್‌ ನೀಡಿದ್ದ ತಡೆಯಾಜ್ಞೆ ಆದೇಶವನ್ನು ಕೊನೆಯದಾಗಿ 2019ರ ಜೂ.17ರಂದು ವಿಸ್ತರಿಸಿತ್ತು. ತದ ನಂತರ ತಡೆಯಾಜ್ಞೆ ಆದೇಶ ವಿಸ್ತರಣೆಯಾಗಿಲ್ಲ. ಈಗಾಗಲೇ 6 ತಿಂಗಳ ಕಾಲ ಕಳೆದಿದ್ದು, ತಡೆಯಾಜ್ಞೆ ವಿಸ್ತರಣೆ ಆದೇಶವು ಇಲ್ಲದಿರುವುದರಿಂದ ಸೆಷನ್ಸ್‌ ನ್ಯಾಯಾಲಯ ವಿಚಾರಣೆಯನ್ನು ಮುಂದುವರಿಸಬಹುದು ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ನಲಪಾಡ್‌ ಪರ ವಕೀಲರು, ಸೆಷನ್ಸ್‌ ನ್ಯಾಯಾಲಯ, ಪ್ರಕರಣವು ವಿಚಾರಣಾ ನ್ಯಾಯಾಲಯದ ಮುಂದೆ ಇರುವಾಗ ವಕೀಲ ಎಂ.ಶ್ಯಾಮ್‌ ಸುಂದರ್‌ ಅವರನ್ನು ಸರ್ಕಾರಿ ವಿಶೇಷ ಅಭಿಯೋಜಕರನ್ನಾಗಿ 2018ರ ಫೆ.23ರಂದು ನೇಮಕ ಮಾಡಲಾಗಿತ್ತು. ತದ ನಂತರ ಶ್ಯಾಮ್‌ ಸುಂದರ್‌ ಅವರು ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿದ್ದಾರೆ. ಹಾಗಾಗಿ ಅವರು ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಕಳೆದ ಆರು ತಿಂಗಳಿಂದ ಪ್ರಕರಣದ ವಿಚಾರಣೆಗೆ ನೀಡಲಾಗಿದ್ದ ತಡೆಯಾಜ್ಞೆ ಆದೇಶವು ವಿಸ್ತರಣೆಯಾಗಿಲ್ಲ. ಹಾಗಾಗಿ, ಪ್ರಕರಣ ಮುಂದುವರಿಸಬಹುದಾಗಿದೆ. ಹೈಕೋರ್ಚ್‌ ಹಿರಿಯ ವಕಿಲರಾಗಿ ಪದೋನ್ನತಿ ಪಡೆದಿರುವ ಎಂ.ಶ್ಯಾಮ್‌ ಸುಂದರ್‌ ಅವರಿಗೆ ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಸರ್ಕಾರಿ ಅಭೀಯೋಜಕರಾಗಿ ಹಾಜರಾಗಲು ಯಾವುದೇ ಅಡ್ಡಿಯಿಲ್ಲ. ಅವರು ಪ್ರಾಸಿಕ್ಯೂಷನ್‌ ಪರವಾಗಿ ಪ್ರಕರಣ ಮುಂದುವರಿಸಲು ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.

ನಲಪಾಡ್ ಹಲ್ಲೆ ಪ್ರಕರಣ: ಫರ್ಜಿ ಕೆಫೆಯಲ್ಲಿ ನಡೆದಿದ್ದೇನು?

ಪ್ರಕರಣದ ಹಿನ್ನೆಲೆ

ಮೊಹಮದ್‌ ನಲಪಾಡ್‌ ಮತ್ತು ಅವರ ಸಹಚರರು ನಗರದ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ 2018ರ ಫೆ.17ರಂದು ರಾತ್ರಿ ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ನಲಪಾಡ್‌ಗೆ ಜಾಮೀನು ನೀಡಿದ್ದ ಹೈಕೋರ್ಚ್‌, ಪ್ರಕರಣದ ವಿಚಾರಣೆಗೂ ತಡೆ ನೀಡಿತ್ತು. ಕಾಲಕಾಲಕ್ಕೆ ಆ ತಡೆಯಾಜ್ಞೆಯನ್ನು ವಿಸ್ತರಣೆ ಮಾಡುತ್ತಾ ಬಂದಿತ್ತು. ಆದರೆ, ಇದೀಗ ತಡೆಯಾಜ್ಞೆ ವಿಸ್ತರಣೆ ಮಾಡದ ಕಾರಣ ಪ್ರಕರಣವನ್ನು ಮುಂದುವರಿಸಲು ವಿಶೇಷ ಅಭಿಯೋಜಕರಾಗಿರುವ ಹಿರಿಯ ವಕೀಲ ಶ್ಯಾಮ್‌ ಸುಂದರ್‌ ಅವರಿಗೆ ಸೆಷನ್ಸ್‌ ನ್ಯಾಯಾಲಯ ಅನುಮತಿ ನೀಡಿದೆ. ಇದರಿಂದ ನಲ್‌ಪಾಡ್‌ಗೆ ಮತ್ತೆ ಸಂಕಷ್ಟಎದುರಾಗಿದೆ.

click me!