ಕರ್ನಾಟಕದಲ್ಲಿ ಮತ್ತೊಂದು ಖಾಸಗಿ ಬಸ್ ಪಲ್ಟಿ, ಚಾಮರಾಜನಗರ ಜಿಲ್ಲೆಯಲ್ಲಿ ವಾರದಲ್ಲಿ 2ನೇ ಪ್ರಕರಣ

By Suvarna News  |  First Published Mar 20, 2022, 7:27 PM IST

* ಕರ್ನಾಟಕದಲ್ಲಿ ಮತ್ತೊಂದು ಬಸ್ ದರಂತ
* ವಾರದ ಅಂತರದಲ್ಲಿ ಪಲ್ಟಿಯಾದ ಎರಡನೇ ಬಸ್
* ಚಾಮರಾಜನಗರ ಜಿಲ್ಲೆಯಲ್ಲಿ ಈ ತಿಂಗಳ ಎರಡನೇ ಪ್ರಕರಣ


ವರದಿ - ಪುಟ್ಟರಾಜು. ಆರ್.ಸಿ.  ಏಷ್ಯಾನೆಟ್ ಸುವರ್ಣ ನ್ಯೂಸ್. ಚಾಮರಾಜನಗರ

ಚಾಮರಾಜನಗರ, (ಮಾ.20): ತುಮಕೂರಿನ ಪಾವಗಡ ಬಳಿ ಖಾಸಗಿ ಬಸ್ ಪಲ್ಟಿಆಗಿ ಸುಮಾರ್ 8 ಜನರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದೊಡ್ಡ ದುರಂತ ಜನರ ಮನಸ್ಸಲ್ಲಿ ಮಾಸುವ ಮುನ್ನವೇ ಚಾಮರಾಜನಗರ ಜಿಲ್ಲೆಯಲ್ಲೂ ಸಹ ಖಾಸಗಿ ಬಸ್ (Private Bus) ಪಲ್ಟಿಯಾಗಿದೆ. ಇದು ಚಾಮರಾಜನಗರ ಜಿಲ್ಲೆಯಲ್ಲಿ ಈ ತಿಂಗಳ ಎರಡನೇ ಪ್ರಕರಣ ಇದಾಗಿದೆ.

Tap to resize

Latest Videos

undefined

ಹೌದು....  ಚಾಮರಾಜನಗರ ಜಿಲ್ಲೆಯ (Chamarajanagar District) ಹನೂರು ತಾಲೂಕು  ಮಂಗಲ-ಕಾಮಗೆರೆ ನಡುವಿನ ರಸ್ತೆಯಲ್ಲಿ ಇಂದು(ಭಾನುವಾರ) ಖಾಸಗಿ ಬಸ್ ಪಲ್ಟಿಯಾಗಿದ್ದು(Bus Overturned), ಹಲವರು ಗಾಯಗೊಂಡಿದ್ದಾರೆ.

Chamarajanagar: ಬೈಕ್-ಬಸ್ ನಡುವೆ ಡಿಕ್ಕಿ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಹನೂರು ತಾಲುಕು   ಮಂಗಲ-ಕಾಮಗೆರೆ ನಡುವಿನ ರಸ್ತೆಯಲ್ಲಿ ಎದುರಿನಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಹಳ್ಳ ಕ್ಕೆ ಬಸ್ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಹಲವರು ಗಾಯಗೊಂಡಿದ್ದು
ಗಾಯಾಳುಗಳನ್ಮು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಾರದ ಹಿಂದೆಯೊಂದು ಬಸ್ ಪಲ್ಟಿಯಾಗಿತ್ತು
ಯೆಸ್‌..ವಾರದ ಹಿಂದೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕುಡುವಾಳೆ ಬಳಿ ಕೊಳ್ಳೇಗಾಲದಿಂದ ಪಿ.ಜಿ.ಪಾಳ್ಯಕ್ಕೆ ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿತ್ತು. ಬಸ್ ಸೇತುವೆಯಿಂದ ಕಾಲುವೆಗೆ ಉರುಳಿ ಬಿದ್ದಿತ್ತು.  ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 96 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಒಂದು ವಾರದ ಹಿಂದೆ ಅಂದ್ರೆ ಮಾರ್ಚ್  14ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕುಡುವಾಳೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಪಟ್ಟಿಯಾಗಿತ್ತು ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಮಾಳಿಗನತ್ತ ಗ್ರಾಮದ ಶಿವಮ್ಮ(70), ಪಿ.ಜಿ.ಪಾಳ್ಯದ ರಮೇಶ್(28), ಆಸ್ಪತ್ರೆಗೆ ಸಾಗಿಸ್ತಿದ್ದಾಗ ಮಾರ್ಗಮಧ್ಯೆ ಸಣ್ಣರಾಯಪ್ಪ(60) ಮೃತಪಟ್ಟಿದ್ದರು.

ಕೊಳ್ಳೇಗಾಲದಿಂದ ಪಿ.ಜಿ.ಪಾಳ್ಯಕ್ಕೆ ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಸೇತುವೆ ಕೆಳಗಿನ ಕಾಲುವೆಗೆ ಬಸ್ ಬಿದ್ದಿತ್ತು.ಕಾಲುವೆಯಲ್ಲಿನ ನೀರಿಗೆ ಬಸ್ ಬಿದ್ದ ಕಾರಣ  ಸ್ಥಳೀಯರು ಪ್ರಯಾಣಿಕರ ರಕ್ಷಣೆ ಮಾಡಿದ್ದರು.

ತುಮಕೂರಿನಲ್ಲಿ ಬಸ್ ದುರಂತ
ಮಾರ್ಚ್ 19ರಂದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು, ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದು, ಹಲವು ಗಾಯಗೊಂಡಿದ್ದರು. ಗಾಯಾಳುಗಳು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಬಗ್ಗೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಯಾಣಿಕರು ಬಸ್ ಟಾಪ್‌ನಲ್ಲಿ ಕುಳಿತಿದ್ದರು. ಚಾಲಕನ ಅಜಾಗರೂಕತೆ ಚಾಲನೆಯಿಂದ ಪಳವಳ್ಳಿ ಕಟ್ಟೆಯ ಕೆರೆಯ ಬಳಿ ಬಸ್ ಪಲ್ಟಿಯಾಗಿದೆ. ಬಸ್ 90ರ ವೇಗದಲ್ಲಿ ಬಸ್ ಚಾಲನೆಯಾಗುತ್ತಿತ್ತು. ಕೆರೆ ಬಳಿಯ ಕಂಬಿಗೆ ಬಡಿದು ಪಲ್ಟಿಯಾಗಿದೆ. ಪ್ರತಿದಿನ ಖಾಸಗಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಹತ್ತುತ್ತಾರೆ. ಟಾಪ್‌ನಲ್ಲಿದ್ದ ವಿದ್ಯಾರ್ಥಿಗಳು ಬಸ್ ಪಲ್ಟಿಯಾಗುತ್ತಿದ್ದಂತೆ ತೂರಿ ಹೋಗಿ ಬಿದ್ದಿದ್ದಾರೆ. ಬಸ್‌ನಲ್ಲಿ ಒಟ್ಟು 100ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಟಾಪ್‌ನಲ್ಲಿಯೇ 40 ಜನರು ಇದ್ದರು. ಸುಮಾರು 16 ಕಿ.ಮೀ ದೂರದವರೆಗೆ ಓವರ್ ಲೋಡ್ ಆಗಿ ಪ್ರಯಾಣಿಸುತ್ತಿತ್ತು. 

ಹೀಗೆ ಕರ್ನಾಟಕದಲ್ಲಿ ಬಸ್‌ಗಳ ಪಲ್ಟಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಸರ್ಕಾರ ಒಂದು ಪರಿಹಾರ ಹುಡುಕಿ ಬಸ್ ದುರಂತಳನ್ನ ತಪ್ಪಿಸಬೇಕಿದೆ.

click me!