* ಮರಳು ಅಡ್ಡೆ ಕಿಂಗ್ ಪಿನ್ ಮೇಲೆ ಮತ್ತೊಂದು ಪ್ರಕರಣ ದಾಖಲು
* ಸದಾ ಫಾರಿನ್ ಟ್ರಿಪ್ ನಲ್ಲೇ ಕಾಲ ಕಳೆಯುತ್ತಿದ್ದ ಇಮ್ರಾನ್ ಸಿದ್ದಿಕಿ ಇದೀಗ ಜೈಲು ಹಕ್ಕಿ
* ಇಮ್ರಾನ್ ಬಳಿ ಇದ್ದ ಕೋಟಿ ಕೋಟಿ ಹಣ ಹೋಗಿದ್ದು ಎಲ್ಲಿಗೆ?
ವರದಿ: ವರದರಾಜ್
ದಾವಣಗೆರೆ (ಮೇ.10 ) ದಾವಣಗೆರೆ ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನಲ್ಲಿರುವ ಮರಳು ಅಡ್ಡೆ ಕಿಂಗ್ ಪಿನ್ ಇಮ್ರಾನ್ ಸಿದ್ದಕ್ಕಿ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಶೋಕ್ ಎಂಬ ಮರಳು ವ್ಯಾಪಾರಿ ಪ್ರಕರಣ ದಾಖಲಿಸಿದ್ದಾರೆ. ಇಮ್ರಾನ್ ಸಿದ್ದಿಕಿ ದೌರ್ಜನ್ಯದಿಂದ 8 ಲಕ್ಷ ರೂ ಗಳನ್ನು ಪಡೆದುಕೊಂಡು ಇನ್ನು 2 ಲಕ್ಷ ಕೊಡು ಎಂದು ಜೀವಬೆದರಿಕೆ ಹಾಕಿದ್ದಾನೆ.ಆದ್ದರಿಂದ ಜೀವ ರಕ್ಷಣೆ ಕೊಡಿ ಎಂದು ದೂರು ದಾಖಲಿಸಿದ್ದಾರೆ.
ದಾಖಲಾಗಿರುವ ಪ್ರಕರಣ ವಿವರ
05/05/2022 ರಾತ್ರಿ 7-00 ಗಂಟೆಗೆ ದಾವಣಗೆರೆ ವಿನೋಭನಗರದ ಮರಳು ವ್ಯಾಪಾರಿ ಶ್ರೀ ಅಶೋಕ್ ರವರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನ ಸಾರಂಶ ಇಲ್ಲಿದೆ. ದಾವಣಗೆರೆ ಮರಳು ವ್ಯಾಪಾರಿ ಅಶೋಕ್ ಹಾವೇರಿ ಜಿಲ್ಲೆಯ ಐರಣಿಯಲಿ, ಇಮಾಮ್ ಸಾಬ್ ಬಾಗಲಕೋಟೆ ರವರು ಯವರಿಂದ ಮರಳು ಪಾಯಿಂಟ್ ಲೀಜ್ ಪಡೆದು ಗಣಿಗಾರಿಕೆ ಮಾಡುತ್ತಿದ್ದು ಲೀಜ್ ಪಾಯಿಂಟ್ ನಲ್ಲಿ ಮ್ಯಾನೇಜ್ ಮೆಂಟ್ ಕೆಲಸ ಮಾಡಿಕೊಂಡಿರುತ್ತಾರೆ. ಕಳೆದ ನಾಲ್ಕು 04 ವರ್ಷಗಳಿಂದ ಮರಳಿನ ವ್ಯಾಪಾರ ಮಾಡುತ್ತಿರುವ ಆಶೋಕ್ ಗೆ ದಿನಾಂಕ 13/09/2021 ರಂದು ಶಿವಮೊಗ್ಗ, ಹರಿಹರ ರಸ್ತೆಯಲ್ಲಿರುವ ಶಾಂತಿಸಾಗರ ಡಾಬಾದಲ್ಲಿ ಊಟಕ್ಕೆ ಕುಳಿತಿದ್ದಾಗ ಅಲ್ಲಿಗೆ ಭೇಟಿ ನೀಡಿದ ಇಮ್ರಾನ್ ಸಿದ್ದಕ್ಕಿ ಆತನ ಸಹಚರ ಜುಲ್ಪಿಕರ್ ನೀನು ಮರಳು ವ್ಯಾಪಾರ ಮಾಡೋದಾದ್ರೆ ನನಗೆ ಆಪ್ತಾ ಕೊಡಬೇಕೆಂದು ಧಮಕಿ ಹಾಕುತ್ತಾನೆ.
undefined
4 ಜಿಲ್ಲೆಗಳಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿದ್ದ ಕಿಂಗ್ ಪಿನ್ ಅರೆಸ್ಟ್, ಬೆಂಜ್ ಕಾರಲ್ಲಿ ಬರ್ತಿದ್ದ
ನಾನು ಶಿವಮೊಗ್ಗ ಮೈಸೂರು ಡಾನ್ ಎಂದು ಬೆದರಿಸಿ 10 ಲಕ್ಷ ಕೊಡುವಂತೆ ಧಮ್ಕಿ ಹಾಕುತ್ತಾನೆ. ನನಗೆ ಎಲ್ಲಾ ಹಂತದ ಪೊಲೀಸರು ಗೊತ್ತು ನೀನು ಹಣ ಕೊಡದ ಹೊರತು ನಾನು ನಿನಗೆ ಮರಳು ವ್ಯಾಪಾರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಧಮಿಕಿ ಹಾಕಿ ಮೊದಲ ಕಂತಿನಲ್ಲಿ 4 ಲಕ್ಷ ನಂತರ ಇನ್ನೊಂದು ಕಂತಿನಲ್ಲಿ 4 ಲಕ್ಷ ಹಣ ಪಡೆಯುತ್ತಾನೆ. ಉಳಿದಿರುವ ಬಾಕಿ 2 ಲಕ್ಷ ಕೊಡದಿದ್ದರೇ ನಿನ್ನನ್ನು ಉಳಿಸುವುದಿಲ್ಲ ಎಂದು ಧಮಿಕಿ ಹಾಕಿರುತ್ತಾನೆ. ಇದರಿಂದ ಮನನೊಂದ ಆಶೋಕ್ ಜೀವಬೆದರಿಕೆಯಿಂದ ಇಮ್ರಾನ್ ಸಿದ್ದಿಕಿ ಮೇಲೆ ಪ್ರಕರಣ ದಾಖಲಿಸಿದ್ದಾನೆ.
ದಾವಣಗೆರೆ ಕಾರಾಗೃಹದಲ್ಲಿರುವ ಇಮ್ರಾನ್ ಸಿದ್ದಿಕಿ ನ್ಯಾಯಾಂಗ ಬಂಧನದಲ್ಲಿದ್ದು ಎರಡು ಪ್ರಕರಣದಲ್ಲು ಬೇಲ್ ಗೆ ಅರ್ಜಿ ಸಲ್ಲಿಸಿದ್ದಾನೆ. ಇಮ್ರಾನ್ ಸಿದ್ಧಕ್ಕಿ ಮೇಲೆ ಅಕ್ರಮ ಮರಳು ವ್ಯಾಪಾರಕ್ಕೆ ಸಂಬಂಧಿಸಿ ಇದೀಗ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.. ರಾಣೇಬೆನ್ನೂರು ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದ್ದರು ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾನೆ.
ಇಮ್ರಾನ್ ಬಳಿ ಇದ್ದ ಕೋಟಿ ಕೋಟಿ ಹಣ ಹೋಗಿದ್ದು ಎಲ್ಲಿಗೆ?
ಇಮ್ರಾನ್ ಸಿದ್ದಿಕಿ ಮೈಸೂರಿನಲ್ಲಿ ಬಂಧಿಸಲು ಪೊಲೀಸರು ಒಂದು ತಿಂಗಳ ಹಿಂದೆಯೇ ಹೊಂಚು ಹಾಕಿದ್ದರು. ಇಮ್ರಾನ್ ಮನೆಯಲ್ಲಿದ್ದ ಕೋಟಿ ಕೋಟಿ ಹಣವನ್ನು ರೈಡ್ ಮಾಡಬೇಕೆಂದು ಪ್ಲಾನ್ ರೂಪಿಸಿದ್ದರು. ಆದ್ರೆ ಪೊಲೀಸರ ಅರೆಸ್ಟ್ ಗು ಮುನ್ನವೇ ಕೋಟಿ ಕೋಟಿ ಹಣವನ್ನು ದುಬೈಗೆ ಸಾಗಿಸಿದ್ದಾನೆ ಪೊಲೀಸ್ ಮೂಲಗಳು ತಿಳಿಸಿವೆ. ಆದ್ದರಿಂದ ಇಮ್ರಾನ್ ಮನೆಯಲ್ಲಿ ಸಿಕ್ಕಿದ್ದು ಕೇವಲ 85 ಲಕ್ಷ ಸಿಕ್ಕಿತು ಎಂದು ಪೊಲೀಸರು ಧೃಡಪಡಿಸಿದ್ದಾರೆ.
ಸದಾ ಫಾರಿನ್ ಟ್ರಿಪ್ ನಲ್ಲೇ ಕಾಲ ಕಳೆಯುತ್ತಿದ್ದ ಇಮ್ರಾನ್ ಸಿದ್ದಿಕಿ ಇದೀಗ ಜೈಲು ಹಕ್ಕಿ
ಇಮ್ರಾನ್ ಸಿದ್ದಿಕಿ ಬಗ್ಗೆ ಹೇಳ್ತಾ ಹೋದ್ರೆ ಆತನ ಐಷಾರಾಮಿ ಕತೆ ಎಂತವರನ್ನು ಬೆಚ್ಚಿಬೀಳಿಸುತ್ತದೆ. ಇಮ್ರಾನ್ ಸಿದ್ದಿಕಿ ಫಾರಿನ್ ಪ್ರಿಯ. ಒಂದು ತಿಂಗಳಲ್ಲಿ 20 ದಿನ ಫಾರಿನ್ ಟ್ರಿಪ್‌ನಲ್ಲೆ ಇರುತ್ತಿದ್ದ. ಯುಕೆ ಯು ಎಸ್ ಎ, ದುಬೈ ಸೌತ್ ಆಪ್ರೀಕಾ ದೇಶಗಳಲ್ಲಿ ಇಮ್ರಾನ್ ಸಂಚಾರ ಮಾಮೂಲಿಯಾಗಿತ್ತು.ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಈತನ ಅಕ್ರಮ ಮರಳು ದಂಧೆ ಬಿಸನಸ್ ಹಣ ಫಾರಿನ್ ಟ್ರಿಪ್ ಫಾರಿನ್ ಇನ್ವೆಸ್ಟ್ ಮೆಂಟ್ ಗು ಬಳಕೆಯಾಗಿದೆ.ಇಮ್ರಾನ್ ಸಿದ್ದಿಕಿ ಈ ಮೊದಲು ಸೌತ್ ಆಪ್ರೀಕಾದಲ್ಲಿ ಐದು ವರ್ಷಗಳ ಕಾಲ ಇದ್ದ.ಇಮ್ರಾನ್ ಓದಿರುವುದು ಎಂಬಿಎ ಅದು ಓದಿದ್ದು ಫಾರಿನ್ ನಲ್ಲೇ..ಇವರ ತಂದೆಗೆ ಕ್ಯಾನ್ಸರ್ ಬಂದಾಗ ಯು ಕೆ ಯಲ್ಲಿ ಟ್ರಿಟ್ಮೆಂಟ್ ಕೊಡಿಸಿದ ಅಸಾಮಿ ಈತ. ಮೈಸೂರಿನಲ್ಲೇ ಎರಡು ಮೂರು ಮನೆಯೊಂದಿರುವ ಇಮ್ರಾನ್ ಬೇನಾಮಿ ಆಸ್ತಿ ಲೆಕ್ಕಿಕ್ಕಲ್ಲ ಎನ್ನುತ್ತಾರೆ ಪೊಲೀಸರು. ಕರ್ನಾಟಕದಲ್ಲಿ ಗಳಿಸಿದ ಹಣದಿಂದಲೇ ಫಾರಿನ್ ನಲ್ಲು ಹೂಡಿಕೆ ಮಾಡಿರುವ ವದಂತಿಗಳು ಇವೆ.
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಇಮ್ರಾನ್ ಸಿದ್ದಿಕಿ ಹೆಸರು ಇಲ್ವಾ.?
ಇಮ್ರಾನ್ ಸಿದ್ದಿಕಿ ಗೆ ಹೈಲೆವಲ್ ಐಜಿಪಿ ಹಂತದ ಪೊಲೀಸ್ ಅಧಿಕಾರಿಗಳ ನೇರ ಸಂಪರ್ಕವಿದ್ದು ಪಿಎಸ್ ಐ ನೇಮಕಾತಿ ಹಗರಣದಲ್ಲಿ ಈತನ ಹೆಸರು ಇರುವ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಐಜಿಪಿ ಹಂತದ ಪೊಲೀಸ್ ಅಧಿಕಾರಿಗಳ ಜೊತೆ ಡೈರೆಕ್ಟ್ ಲಿಂಕ್ ಇದ್ದಿದ್ದರಿಂದ ಹಲವರಿಗೆ ಜಾಬ್ ಕೊಡಿಸುವುದಾಗಿ ಭರವಸೆ ನೀಡಿದ್ದ ಎಂಬ ಮಾಹಿತಿ ಪೊಲೀಸರ ಬಳಿ ಇದೆ. ಒಂದು ವೇಳೆ ಇಮ್ರಾನ್ ಬಾಯ್ಬಿಟ್ಟರೆ ಹಲವು ಪೊಲೀಸ್ ಅಧಿಕಾರಿಗಳ ಬಣ್ಣ ಬಯಲಾಗುವ ಸಾಧ್ಯತೆಗಳಿವೆ ಎಂಬ ಮಾತುಗಳಿವೆ.