ಹೊಸವರ್ಷದ ಮೊದಲ ದಿನವೇ ಕನ್ನಡ ಧ್ವಜವನ್ನು ಸುಟ್ಟು ಕಿಡಿಗೇಡಿಗಳು ಉದ್ಧಟತನ ಮೆರೆದಿರುವ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ. ಸುಳಗಾ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಳವಡಿಸಿದ್ದ ನಾಡಧ್ವಜ ಸುಟ್ಟಿರುವ ಕಿಡಿಗೇಡಿಗಳು. ಆರೋಪಿಗಳನ್ನು ಬಂಧಿಸುವಂತೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಬೆಳಗಾವಿ (ಜ.1) : ಹೊಸವರ್ಷದ ಮೊದಲ ದಿನವೇ ಕನ್ನಡ ಧ್ವಜವನ್ನು ಸುಟ್ಟು ಕಿಡಿಗೇಡಿಗಳು ಉದ್ಧಟತನ ಮೆರೆದಿರುವ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.
ಸುಳಗಾ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಳವಡಿಸಿದ್ದ ನಾಡಧ್ವಜ. ಓಲ್ಡ್‌ಮ್ಯಾನ್ ಸುಟ್ಟ ಬಳಿಕ ಕನ್ನಡ ಧ್ವಜಕ್ಕೂ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು. ಕಿಡಿಗೇಡಿಗಳ ಕೃತ್ಯಕ್ಕೆ ಸಿಡಿದೆದ್ದಿರೋ ಕನ್ನಡ ಸಂಘಟನೆಗಳು. ಆರೋಪಿಗಳನ್ನ ಶೀಘ್ರ ಬಂಧಿಸುವಂತ ಆಕ್ರೋಶವ್ಯಕ್ತಪಡಿಸಿದ್ಧಾರೆ.
ನ್ಯೂ ಇಯರ್ ಎಣ್ಣೆಪಾರ್ಟಿ ಮುಗಿಸಿ ವಾಪಸ್ಸಾಗುತ್ತಿದ್ದಾಗ ಬೈಕ್ ಅಪಘಾತ ಓರ್ವ ಸಾವು, ಇನ್ನೋರ್ವ ಗಂಭೀರ ಗಾಯ!
ಒಂದೆಡೆ ರಾಜ್ಯಾದ್ಯಂತ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಅಭಿಯಾನ ನಡೆಸುವ ಮೂಲಕ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದಾರೆ. ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ನಾರಾಯಣಗೌಡ ಸೇರಿ ಹಲವರು ಕನ್ನಡ ಕಾರ್ಯಕರ್ತರು ಬಂಧನಕ್ಕೆ ಒಳಗಾಗಿದ್ದಾರೆ. ಇಂಥ ಹೊತ್ತಲ್ಲಿ ಮತ್ತೊಂದು ವರ್ಷದ ಮೊದಲ ದಿನವೇ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿರುವ ಕರವೇ ಕಾರ್ಯಕರ್ತರು. ಆರೋಪಿಗಳನ್ನ ಬಂಧಿಸಿ ಶಿಕ್ಷಿಸಿ, ಇಲ್ಲವೆ ನಾವು ಆ ಕೆಲಸವನ್ನು ಮಾಡುತ್ತೇವೆ ಎಂದು ಎಚ್ಚರಿಸಿರುವ ಕನ್ನಡಪರ ಹೋರಾಟಗಾರರು. ಬೆಳಗಾವಿ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕುಲಾಲ್ ವಗ್ಗ ದುರ್ಮರಣ!