ಇಡೀ ಬೆಂಗಳೂರು ಹೊಸವರ್ಷಾಚರಣೆ ಸಂಭ್ರದಲ್ಲಿರುವಾಗ ಹನುಮಂತ ನಗರದ 80 ಅಡಿ ರಸ್ತೆಯ ನಡುರಸ್ತೆಯಲ್ಲಿ ನಡೆಯಿತು ಭೀಕರ ಹತ್ಯೆ. ಆಟೋದಲ್ಲಿ ಬಂದ ದುಷ್ಮರ್ಮಿಗಳು ಮಾರಾಕಾಸ್ತ್ರಗಳನ್ನು ಯುವಕನ ಕೊಚ್ಚಿಕೊಂದು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.
ಬೆಂಗಳೂರು (ಜ.1) ಇಡೀ ಬೆಂಗಳೂರು ಹೊಸವರ್ಷಾಚರಣೆ ಸಂಭ್ರದಲ್ಲಿರುವಾಗ ಹನುಮಂತ ನಗರದ 80 ಅಡಿ ರಸ್ತೆಯ ನಡುರಸ್ತೆಯಲ್ಲಿ ನಡೆಯಿತು ಭೀಕರ ಹತ್ಯೆ. ಆಟೋದಲ್ಲಿ ಬಂದ ದುಷ್ಮರ್ಮಿಗಳು ಮಾರಾಕಾಸ್ತ್ರಗಳನ್ನು ಯುವಕನ ಕೊಚ್ಚಿಕೊಂದು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.
ಬನಶಂಕರಿ ಮೂಲದ ವಿಜಯ(21)ಹತ್ಯೆಯಾದ ಯುವಕ. ನಿನ್ನೆ ಹೊಸವರ್ಷಾಚರಣೆ ಹಿನ್ನಲೆ ಗಳೆಯರೊಂದಿಗೆ ಸೆಲೆಬ್ರೇಷನ್ ಗೆ ಬಂದಿದ್ದ ವಿಜಯ್. ರಾತ್ರಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿ ಕುಡಿದಿದ್ದಾರೆ. ಕಂಠಪೂರ್ತಿ ಕುಡಿದು ಮನೆಗೆ ಹೋಗುವಾಗ ವಿಜಯ್ ಹಾಗೂ ಗೆಳೆಯರ ಮಧ್ಯೆ ಜಗಳ ಶುರುವಾಗಿತ್ತು. ಆಟೋದಲ್ಲಿ ಹೋಗೋವಾಗ ಜಗಳ ಹೆಚ್ಚು ಮಾಡಿಕೊಂಡಿದ್ದ ವಿಜಯ್ ಹಾಗೂ ಸ್ನೇಹಿತರು. ಜಗಳದ ವೇಳೆ ವಿಜಯ್ ಎದೆಗೆ ಚಾಕು ಇರಿದಿರೋ ಓರ್ವ. ಚಾಕು ಇರಿದ ಬಳಿಕ ಶ್ರೀನಿವಾಸ್ ನಗರ ಬಸ್ ನಿಲ್ದಾಣದ ಮುಂದೆ ಬಿಸಾಕಿ ಎಸ್ಕೇಪ್. ಈ ವೇಳೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿರೋ ವಿಜಯ್. ರಾತ್ರಿ 1ಗಂಟೆ ಸುಮಾರಿಗೆ ನಡೆದಿರೋ ಕೊಲೆ
ಹತ್ಯೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಹನುಮಂತನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹಳೇ ದ್ವೇಷವೇ ಹತ್ಯೆಗೆ ಕಾರಣವಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಕೊಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಗರದ ಆಯಾಕಟ್ಟಿನಲ್ಲಿ ಅಳವಡಿಸಿರುವ ಸಿಸಿಟಿವಿ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಬ್ರಿಗೇಡ್, ಎಂಜಿ ರೋಡ್ ಹೊಸ ವರ್ಷಾಚರಣೆಯಲ್ಲಿ ಮೊಬೈಲ್ ಕಳ್ಳರ ಹಾವಳಿ; ಸುಮಾರು 10 ಕ್ಕೂ ಹೆಚ್ಚು ಮೊಬೈಲ್ ಕಳವು!