ವಿಜಯನಗರ: ಕಣ್ಣು ಕಾಣದ ವೃದ್ಧೆಯ ಮೇಲೆ ಅತ್ಯಾಚಾರ, ಕಾಮುಕನ ಅಟ್ಟಹಾಸಕ್ಕೆ ಮನನೊಂದು ಆತ್ಮಹತ್ಯೆ

By Girish Goudar  |  First Published Jun 3, 2023, 8:52 AM IST

ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ, ಮದುವೆಯಾಗಿ ಮಕ್ಕಳಿದ್ರೂ ತಾಯಿ ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ ವೆಸಗಿದ ಲೋಕೇಶ ನಾಯ್ಕ್. ಕಾಮುಕನ ಕೃತ್ಯಕ್ಕೆ ಮನನೊಂದು ವೃದ್ಧೆ ಆತ್ಮಹತ್ಯೆ. 


ವಿಜಯನಗರ(ಜೂ.03): ಕಣ್ಣು ಕಾಣದ 58 ವರ್ಷದ ವೃದ್ಧೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ವೆಸಗಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಪುರ ತಾಂಡದಲ್ಲಿ ನಡೆದಿದೆ. ಲೋಕೇಶ ನಾಯ್ಕ್ ಎಂಬಾತನೇ ವೃದ್ಧೆಯ ಮೇಲೆ ಕಾಮತೃಷೆ ತೀರಿಸಿಕೊಂಡ ಕಾಮುಕನಾಗಿದ್ದಾನೆ. 

ಮೇ.30 ರಂದು ಅತ್ಯಾಚಾರವೆಸಗಿ ಆರೋಪಿ ಲೋಕೇಶ ನಾಯ್ಕ್ ಪರಾರಿಯಾಗಿದ್ದ, ಮದುವೆಯಾಗಿ ಮಕ್ಕಳಿದ್ರೂ ತಾಯಿ ವಯಸ್ಸಿನ ಮಹಿಳೆ ಮೇಲೆ ಲೋಕೇಶ ನಾಯ್ಕ್ ಅತ್ಯಾಚಾರ ವೆಸಗಿದ್ದಾನೆ. ಕಾಮುಕನ ಕೃತ್ಯಕ್ಕೆ ಮನನೊಂದು ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

Tap to resize

Latest Videos

undefined

ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ರೋಡಿಗೆ ಎಸೆದ ಅಲ್ಪಸಂಖ್ಯಾತ ಫೇಸ್‌ಬುಕ್ ಗೆಳೆಯ!

ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಾಪುರ ತಾಂಡದ  ಲೋಕೇಶ ನಾಯ್ಕ್‌ನನ್ನು ಪೊಲೀಸರು  ಬಂಧಿಸಿದ್ರೂ ಗ್ರಾಮಸ್ಥರ ಆಕ್ರೋಶ ಮಾತ್ರ ನಿಲ್ಲುತ್ತಿಲ್ಲ. ಕಾಮುಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರ ಜೊತೆ ವಾಗ್ದಾದ ನಡೆಸಿದ್ದಾರೆ. 

ಘಟನೆ ಬಳಿಕ ಸಂತ್ರಸ್ಥ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಊರಿಗೆ ಮರಳಿದ ವೃದ್ಧೆ  ವಯಸ್ಸಾದ ತನಗೆ ಹಿಂಗಾಯ್ತಲ್ಲ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

click me!