ಅಕ್ರಮ ಸಂಬಂಧ ಶಂಕೆ: ಪತ್ನಿ ತಲೆ ಕಡಿದು ಪೊಲೀಸ್‌ ಠಾಣೆಗೆ ತಗೊಂಡೋದ ಭೂಪ

By BK Ashwin  |  First Published Dec 14, 2023, 2:11 PM IST

ಆರೋಪಿ ಅರ್ಜುನ್ ಬಾಘಾ ತನ್ನ ಹೆಂಡತಿಯ ಕತ್ತರಿಸಿದ ತಲೆಯೊಂದಿಗೆ ಬನಿಗೋಚಾ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿದ್ದಾರೆ. ಅದನ್ನು ನೋಡಿದ ಜನರು ಹಾಗೂ ಪೊಲೀಸ್‌ ಠಾಣೆಯಲ್ಲಿದ್ದ ಸಿಬ್ಬಂದಿಯನ್ನೂ ಗಾಬರಿಯನ್ನುಂಟುಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.


ಭುವನೇಶ್ವರ (ಡಿಸೆಂಬರ್ 14, 2023): ಒಡಿಶಾದ ನಯಾಗಢ ಜಿಲ್ಲೆಯಲ್ಲಿ ಶನಿವಾರ 35 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ವಿವಾಹೇತರ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾಳೆಂದು ಶಂಕಿಸಿ ಕೊಂದು, ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಅರ್ಜುನ್ ಬಾಘಾ ತನ್ನ ಹೆಂಡತಿಯ ಕತ್ತರಿಸಿದ ತಲೆಯೊಂದಿಗೆ ಬನಿಗೋಚಾ ಪೊಲೀಸ್ ಠಾಣೆಗೆ ನಡೆದುಕೊಂಡು ಬಂದಿದ್ದಾರೆ. ಅದನ್ನು ನೋಡಿದ ಜನರು ಹಾಗೂ ಪೊಲೀಸ್‌ ಠಾಣೆಯಲ್ಲಿದ್ದ ಸಿಬ್ಬಂದಿಯನ್ನೂ ಗಾಬರಿಯನ್ನುಂಟುಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

Latest Videos

undefined

ಇದನ್ನು ಓದಿ: ಮಗಳಿಂದಲೇ ತಾಯಿ ಹತ್ಯೆ- 13 ತಿಂಗಳ ಬಳಿಕ ಶವ ಸ್ಮಶಾನದಲ್ಲಿ ಪತ್ತೆ! ಕಾರಣ ಕೇಳಿದ್ರೆ ಶಾಕ್!

ಬಿಡಪಾಜು ಗ್ರಾಮದ ನಿವಾಸಿ ಬಾಘಾ ಎಂಬಾತ ತನ್ನ ಪತ್ನಿ ಧರಿತ್ರಿ (30)ಯನ್ನು ಕೊಲೆ ಮಾಡಿದ್ದಾನೆ. ಆಕೆ ವಿವಾಹೇತರ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ಶಂಕಿಸಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆತ ತನ್ನ ಪತ್ನಿಯನ್ನು ಕೊಂದು ನಂತರ ಆಕೆಯ ತಲೆಯನ್ನು ಕತ್ತರಿಸಲು ಹರಿತವಾದ ಆಯುಧವನ್ನು ಬಳಸಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೆ, ತಲೆಯಿಲ್ಲದ ಮುಂಡವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಬನಿಗೋಚಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಲಕ್ಷ್ಮಣ ದಂಡಸೇನ ಹೇಳಿದ್ದಾರೆ.

ವಿಷ ಸೇವಿಸಿ ಅಪ್ರಾಪ್ತ ಪ್ರೇಮಿಗಳಿಬ್ಬರು ಆತ್ಮಹತ್ಯೆ!

ಇದೇ ರೀತಿ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು 7 ತಿಂಗಳುಗಳ ಹಿಂದೆ ತನ್ನ ಸಹೋದರಿಯ ಕತ್ತರಿಸಿದ ತಲೆಯನ್ನು ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋಗಿದ್ದ ಘಟನೆ ನಡೆದಿತ್ತು. 
ಈ ವರ್ಷದ ಜುಲೈನಲ್ಲಿ ಯುಪಿಯ ಬಾರಾಬಂಕಿಯಲ್ಲಿ ಈ ಘಟನೆ ನಡೆದಿತ್ತು. 

ಫತೇಪುರ್ ಪ್ರದೇಶದ ಮಿಥ್ವಾರಾ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಯುವಕನೊಬ್ಬ ತನ್ನ ಸಹೋದರಿಯ ಕತ್ತರಿಸಿದ ತಲೆಯನ್ನು ಹೊತ್ತು ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪೊಲೀಸ್ ವರದಿಗಳ ಪ್ರಕಾರ, ರಿಯಾಜ್ (22) ಮತ್ತು ಅವರ ಸಹೋದರಿ ಆಶಿಫಾ (18) ನಡುವೆ ಅವರ ಸಂಬಂಧದ ಬಗ್ಗೆ ತೀವ್ರ ವಾಗ್ವಾದದ ನಂತರ ಈ ಘೋರ ಕೃತ್ಯ ಸಂಭವಿಸಿದೆ ಎಂದು ತಿಳಿದುಬಂದಿತ್ತು.

Mysuru: ಅಪ್ರಾಪ್ತ ನಾದಿನಿಯನ್ನು ಗರ್ಭಿಣಿ ಮಾಡಿದವನಿಗೆ 25 ವರ್ಷ ಜೈಲು ಶಿಕ್ಷೆ

ಹರಿತವಾದ ಆಯುಧದಿಂದ ರಿಯಾಜ್ ತನ್ನ ಸಹೋದರಿಯ ಶಿರಚ್ಛೇದ ಮಾಡಿದ್ದ. ಬಳಿಕ, ಆಕೆಯ ತಲೆಯನ್ನು ಹೊತ್ತುಕೊಂಡು ಪೊಲೀಸ್‌ ಠಾಣೆಯತ್ತ ಸಾಗುತ್ತಿದ್ದ. ಆದರೆ, ಸ್ಥಳೀಯರ ಮಾಹಿತಿ ಮೇರೆಗೆ ಆ ವ್ಯಕ್ತಿ ಪೊಲೀಸ್‌ ಠಾಣೆ ತಲುಪುವ ಮೊದಲೇ ಪೊಲೀಸರು ಮಧ್ಯ ಪ್ರವೇಶಿಸಿ ಆತನನ್ನು ಬಂಧಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಮಿಶ್ರಾ ಈ ಘಟನೆಯ ವಿವರಗಳನ್ನು ಖಚಿತಪಡಿಸಿಸಿದ್ದರು. 

ಈ ಹಿಂದೆಯೂ ಇಂತಹ ಕೆಲ ಘಟನೆಗಳು ನಡೆದಿದ್ದು, ಈಗ ಒಡಿಶಾದಲ್ಲಿ ಅದೇ ರೀತಿ ಪ್ರಕರಣ ವರದಿಯಾಗಿದೆ. 

click me!