ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ

By Kannadaprabha News  |  First Published Jun 6, 2020, 8:58 AM IST

ಪತ್ನಿ ಹತ್ಯೆಗೈದ ಅರೋಪ| ಜೂನ್‌ 3ರಂದು ನಡೆದಿದ್ದ ಕೊಲೆ| ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ  ನಡೆದ ಹತ್ಯೆ| ತಲೆ ಮರೆಸಿಕೊಂಡ ಮೃತ ಮಹಿಳೆ ಭಾವ|


ಕಂಪ್ಲಿ(ಜೂ.06): ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಜೂನ್‌ 3ರಂದು ಹತ್ಯೆಯಾಗಿದ್ದ ಮಹಾಲಕ್ಷ್ಮಿಯ(ಗಂಡ) ಹತ್ಯೆ ಪ್ರಕರಣದ ಮೊದಲ ಆರೋಪಿ ಕರೇಗೌಡರ ಪಂಪಾಪತಿ (31)ತಮ್ಮದೇ ಹೊಲದ ಬೇವಿನ ಮರಕ್ಕೆ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಬೆಳಿಗ್ಗೆ 6 ಗಂಟೆ ಸುಮಾರಿಗೆ ಹೊಲಕ್ಕೆ ನೀರು ಹಾಯಿಸಲು ತೆರಳಿದ್ದ ರೈತನೊಬ್ಬ ನೋಡಿ ಊರಿನವರಿಗೆ ತಿಳಿಸಿದ್ದು, ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Tap to resize

Latest Videos

ಕದಿಯಲು ಬಂದವ ಕೊಲೆಯಾಗಿ ಹೋದ; ಶ್ರೀರಾಮ್‌ ಪುರ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬುಧವಾರ ಮಹಾಲಕ್ಷ್ಮಿ ತಂದೆ ಗೋಪಾಲ ತನ್ನ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಮೃತ ಮಹಿಳೆ ಅತ್ತೆ ರತ್ನಮ್ಮ ಮತ್ತು ಮಾವ ಕರೇಗೌಡ್ರು ಜಡೆಮ್ಮ ಅವರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೃತ ಮಹಿಳೆ ಭಾವ(ಗಂಡನ ಅಣ್ಣ)ತಲೆ ಮರೆಸಿಕೊಂಡಿದ್ದಾನೆ. ಸಿಪಿಐ ಡಿ. ಹುಲುಗಪ್ಪ ತನಿಖೆ ಕೈಗೊಂಡಿದ್ದಾರೆ.
 

click me!