
ಹುಬ್ಬಳ್ಳಿ(ಡಿ.09): ಮಾವನೂರ ಗ್ರಾಮದ ಇಟ್ಟಂಗಿ ಬಟ್ಟಿಗೆ ಕಾರ್ಮಿಕರನ್ನು ಕರೆ ತರುವುದಾಗಿ ಹೇಳಿದ ಇಬ್ಬರು ಗುತ್ತಿಗೆದಾರರು ಕೇಶ್ವಾಪುರದ ಉದ್ಯಮಿ ರವಿ ಕಾವಡೆ ಎಂಬುವರಿಂದ 18 ಲಕ್ಷ ಪಡೆದು ವಂಚನೆ ಮಾಡಿರುವ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒರಿಸ್ಸಾ ಹನ್ಸಚಂದ್ರ ಜುಡಿಸ್ಟರ್ ಮತ್ತು ಭಾಂದನಾ ಬಾಗ್ ಆರೋಪಿಗಳು. ಕೂಲಿ ಕಾರ್ಮಿಕರನ್ನು ಕರೆತರಲು ಒಬ್ಬರಿಗೆ 1 ಲಕ್ಷ ಕೊಡಬೇಕು ಎಂದು 2019ರ ಏಪ್ರಿಲ್‌ನಲ್ಲಿ ಹಣ ಪಡೆದು ತೆರಳಿದ್ದರು. ಬಳಿಕ ಸಂಪರ್ಕದಿಂದ ದೂರವಾಗಿದ್ದಾರೆ. ಹಣವನ್ನೂ ಮರಳಿಸಿಲ್ಲ, ಕೂಲಿಗಳನ್ನು ಕಳಿಸದೆ ವಂಚಿಸಿದ್ದಾರೆ ಎಂದು ಉದ್ಯಮಿ ರವಿ ದೂರಲ್ಲಿ ದಾಖಲಿಸಿದ್ದಾರೆ.
ಕಡಿಮೆ ಬೆಲೆಗೆ ಗ್ಲೌಸ್ ನೀಡುವುದಾಗಿ 45 ಲಕ್ಷ ದೋಚಿದ ಸೈಬರ್ ಕಳ್ಳರು
ಕರೋಡ್ ಪತಿ 1.75 ಲಕ್ಷ ವಂಚನೆ
ಕೌನ್ ಬನೇಗಾ ಕರೋಡಪತಿ, ಸ್ಪರ್ಧೆಯಲ್ಲಿ 25 ಲಕ್ಷ ಗೆದ್ದಿರುವುದಾಗಿ ಇಲ್ಲಿನ ಹೊಸೂರಿನ ನಿವಾಸಿ ಶ್ರೀಧರ ಚೌಧರಿ ಅವರನ್ನು ನಂಬಿಸಿ ಅವರ ಖಾತೆಯಿಂದ 1.75 ಲಕ್ಷವನ್ನು ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ. ಹಿಂದಿಯಲ್ಲಿ ಮಾತನಾಡಿದ ವಂಚಕ ಗೆದ್ದಿರುವ ಹಣ ಪಡೆಯಲು ಆದಾಯ ತೆರಿಗೆ, ಜಿಎಸ್ಟಿ ಶುಲ್ಕ ಎಂದು ಹಣ ವರ್ಗಾಯಿಸಬೇಕು ಎಂದು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ