ನರ್ಸಿಂಗ್ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ನಾಗರತ್ನಾ ತುಳಸು ಗೌಡ| ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ನಡೆದ ಘಟನೆ| ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಪಿಐ ಕೃಷ್ಣಾನಂದ|
ಅಂಕೋಲಾ(ಡಿ.09): ನೇಣು ಬಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾರವಾಡದ ಒಕ್ಕಲಕೇರಿಯಲ್ಲಿ ಮಂಗಳವಾರ ನಡೆದಿದೆ. ನಾಗರತ್ನಾ ತುಳಸು ಗೌಡ (21) ಆತ್ಮಹತ್ಯೆ ಮಾಡಿಕೊಂಡವಳು.
ಮೂಲತ ಉಳವರೆಯವಳಾದ ನಾಗರತ್ನಾ ತನ್ನ ಮಾವ ಛತ್ರಪತಿ ಗೌಡ ಅವರ ಮನೆಯಲ್ಲಿ ಚಿಕ್ಕಂದಿನಿಂದಲೇ ವಾಸವಾಗಿದ್ದಳು. ಅಂಕೋಲಾದ ನರ್ಸಿಂಗ್ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ಇವಳು ಮಂಗಳವಾರ ಪರೀಕ್ಷೆಗೆ ಹಾಜರಾಗಬೇಕಿತ್ತು. ಬೆಳಗಿನ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳಿಗೆ ಅನಾರೋಗ್ಯ: ಆತ್ಮಹತ್ಯೆಗೆ ಶರಣಾದ ತಾಯಿ
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಿಪಿಐ ಕೃಷ್ಣಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಎಸೈ ಲಲಿತಾ ರಜಪೂತ್, ಹಾರವಾಡ ಬೀಟ್ ಸಿಬ್ಬಂದಿ ಮಂಜುನಾಥ ಲಕ್ಷ್ಮಾಪುರ, ತನಿಖಾ ಸಹಾಯಕ ಸಂತೋಷ ಆರ್.ಕೆ. ಪರಿಶೀಲನೆ ನಡೆಸಿದ್ದಾರೆ.