ಬೈಕ್‌ನಲ್ಲಿ ತೆರಳುತ್ತಿರುವ ವೇಳೆ ಕೇಬಲ್ ವೈರ್ ಮೈಮೇಲೆ ಬಿದ್ದು ವಿದ್ಯುತ್ ಸ್ಪರ್ಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ದುರ್ಮರಣಕ್ಕೀಡಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ.
ತುಮಕೂರು (ಮಾ.22): ಬೈಕ್‌ನಲ್ಲಿ ತೆರಳುತ್ತಿರುವ ವೇಳೆ ಕೇಬಲ್ ವೈರ್ ಮೈಮೇಲೆ ಬಿದ್ದು ವಿದ್ಯುತ್ ಸ್ಪರ್ಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ದುರ್ಮರಣಕ್ಕೀಡಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀ ಬಾಯಿ ಜಾದವ್ (36), ಮೃತ ದುರ್ದೈವಿ. ಬೈಕ್ ಸವಾರ ಲಕ್ಷ್ಮಣ್ ಗೆ ಗಂಭೀರ ಗಾಯಗೊಂಡಿದ್ದು, ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮಗಳೂರು: ಬೆಂಕಿ ಕಿಡಿಗೆ ಹೊತ್ತಿ ಉರಿದ ಕಾಫಿ ತೋಟ, ಲಕ್ಷಾಂತರ ರೂ. ಮೌಲ್ಯದ ಮೆಣಸು, ಅಡಿಕೆ, ಬಾಳೆ ಭಸ್ಮ..!
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟೆ ಮೂಲದವರಾಗಿರುವ ಲಕ್ಷ್ಮೀಬಾಯಿ. ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ರು. ಇತ್ತೀಚೆಗಷ್ಟೇ ಮೃತ ಲಕ್ಷ್ಮೀಬಾಯಿಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಇಂದು ಕೆಲಸ ಮುಗಿಸಿ ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಣ್ಮಣ್ ಜೊತೆ ಇಪ್ಪಾಡಿಯಿಂದ ಕುಣಿಗಲ್ ಗೆ ಬೈಕ್ ನಲ್ಲಿ ಬರುತ್ತಿದ್ದಾಗ ದಾರಿಯಲ್ಲಿ ಹಾದುಹೋಗಿದ್ದ ಕೇಬಲ್ ವೈರ್ ಗೆ ವಿದ್ಯುತ್ ತಂತಿ ತಗುಲಿ ಲಕ್ಷ್ಮೀಬಾಯಿ ಮೇಲೆ ಬಿದ್ದಿದೆ. ಕೇಬಲ್ ವೈರ್ ಮೇಲೆ ಬಿದ್ದ ಪರಿಣಾಮ ಲಕ್ಷ್ಮೀಬಾಯಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಈ ವೇಳೆ ಬೈಕ್ ಸವಾರ ಲಕ್ಷ್ಮಣ್ ಗೆ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಲಕ್ಷ್ಮೀಬಾಯಿ ಮೃತದೇಹ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ!
ಘಟನೆ ಬಳಿಕ ಕುಣಿಗಲ್ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.