ಪ್ರತ್ಯೇಕ ಘಟನೆ: ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಶರಣು!

By Suvarna News  |  First Published Sep 11, 2022, 10:50 PM IST

ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಹಾಗೂ ಗದಗನಲ್ಲಿ ನಡೆದಿದೆ.


ವಿಜಯಪುರ, (ಸೆಪ್ಟೆಂಬರ್.11): ಮನನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದ ಜಲನಗರದಲ್ಲಿ ನಡೆದಿದೆ.

35 ವರ್ಷದ ಗಂಗಾ ನರ್ಸರೆಡ್ಡಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಕೌಟುಂಬಿಕ ಸಮಸ್ಯೆಯಿಂದಾಗಿ ಗಂಗಾ ಮಾನಸಿಕವಾಗಿನೊಂದ ಮನೆಯಲ್ಲೇ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಹೇಳಲಾಗಿದೆ.

Tap to resize

Latest Videos

undefined

ವಿಷಯ ತಿಳಿದು ಸ್ಥಳಕ್ಕೆ ಜಲನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ!

 ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಗದಗ: ಕೃಷಿ ಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೋಣ ತಾಲೂಕಿನ ಹೊನ್ನಾಪೂರ ಗ್ರಾಮದಲ್ಲಿ ನಡೆದಿದೆ. ರೇಣವ್ವ ಕುರಿ 38 ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 

ಜಮೀನಲ್ಲಿ ಹಾದು ಹಾದುಹೋಗುವ ವಿಚಾರಕ್ಕೆ ಮೈದುನನ ಕುಟುಂಬದ ಕಿರಕುಳಕ್ಕೆ ಬೇಸತ್ತು ಮಹಿಳೆ ತಮ್ಮದೇ ಜಮೀನಿನ‌ ಕೃಷಿ ಹೊಂಡದಲ್ಲಿ‌ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.

ಲೈನ್‍ಮ್ಯಾನ್ ಸಾವು
ತುಮಕೂರು: ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್ ಮ್ಯಾನ್  ಒಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಮಹೇಶ್ ಗೌಡ (40) ಎಂದು ಗುರುತಿಸಲಾಗಿದೆ. ಗುಬ್ಬಿ ತಾಲೂಕಿನ ತಿಪಟೂರಿನಲ್ಲಿ ಅವಘಡ ಸಂಭವಿಸಿದೆ. ಮಹೇಶ್ ಅವರು ಕೆರೆ ಮಧ್ಯೆ ನೀರಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ (Power) ತಂತಿ ಸರಿಪಡಿಸಲು ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ನೀರಿನಲ್ಲಿ ಈಜುತ್ತಾ ಸುಸ್ತಾಗಿ ಮುಳುಗಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳ (Fire Fighter) ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಂಣೆಯ ಬಳಿಕ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.

click me!