ಹೆಂಡತಿಯ ಸುಳ್ಳು ಕೇಸ್‌ಗಳ ಕಿರುಕುಳಕ್ಕೆ ಬಲಿಯಾದ ಬೆಂಗಳೂರು ಟೆಕ್ಕಿ..!

By Sathish Kumar KH  |  First Published Dec 9, 2024, 3:38 PM IST

ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಹೆಂಡತಿಯ ವಿರುದ್ಧ ದೂರು ನೀಡಿದ್ದಕ್ಕೆ ಮನನೊಂದು 40 ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.


ಬೆಂಗಳೂರು (ಡಿ.09): ಉತ್ತರ ಭಾರತದ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದಾನೆ. ಆದರೆ, ಹೆಂಡತಿ ತನ್ನೊಂದಿಗೆ ಬಾರದೇ ಉತ್ತರ ಪ್ರದೇಶದಲ್ಲಿ ಸ್ಥಳೀಯವಾಗಿ ಗಂಡನ ಮೇಲೆ ದೂರು ಕೊಟ್ಟಿದ್ದಾಳೆ. ಇದಕ್ಕೆ ಮನನೊಂದ ಗಂಡ 40 ಪುಟಗಳ ಡೆತ್ ನೋಟ್ ಬರೆದಿಟ್ಟು, #justice is due# ಎಂಬ ಫಲಕವನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ನಂತರ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಹೆಂಡತಿ ತನಗೆ ಹಿಂಸೆ ಕೊಡುತ್ತಿದ್ದಾಳೆ ಎಂದು ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದಿದೆ. ಮಾರತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿ #justice is due# ಬರಹ ಇರುವ ಬೋರ್ಡ್ ಅನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನನ್ನು ಉತ್ತರ ಪ್ರದೇಶ ಮೂಲದವರಾದ ಅತುಲ್ ಸುಭಾಷ್ ಎಂದು ಗುರುತಿಸಲಾಗಿದೆ. 

Tap to resize

Latest Videos

ಮೃತ ಅತುಲ್ ಸುಭಾಷ್‌ನ ಮೇಲೆ ಉತ್ತರ ಪ್ರದೇಶದಲ್ಲಿ ಠಾಣೆಯಲ್ಲಿ ಆತನ ಹೆಂಡತಿ ಕೇಸ್ ಹಾಕಿದ್ದಳು. ಇದರಿಂದ ಅತುಲ್ ಮಾನಸಿಕವಾಗಿ ನೊಂದು ಹೋಗಿದ್ದನು. ಹೀಗಾಗಿ, ಈತ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ. ಸಾಯುವುದಕ್ಕೂ ಮುನ್ನ NGOದ ವಾಟ್ಸಾಪ್ ಗ್ರೂಪ್‌ಗೆ ಮಧ್ಯರಾತ್ರಿ ಡೆತ್ ನೋಟ್ ಕಳುಹಿಸಿದ್ದನು. ಸಾಧ್ಯವಾದರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ವಾಟ್ಸಾಪ್ ಗುಂಪಿನಲ್ಲಿ ಮೆಸೇಜ್ ಮಾಡಿದ್ದಾನೆ. ನಂತರ ಕಬೋರ್ಡ್ ಮೇಲೆ ಒಂದಷ್ಟು ಮಾಹಿತಿಗಳನ್ನು ಅಂಟಿಸಿ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ:  ಧಾರವಾಡದ ಹುಡುಗಿ ಪ್ರೀತಿಸಲು ಒಪ್ಪಿಕೊಳ್ಳಲಿಲ್ಲವೆಂದು ಬೆಂಕಿ ಹಚ್ಚಿಕೊಂಡ ಹುಬ್ಬಳ್ಳಿ ಹುಡುಗ!

ಇನ್ನು ಡೆತ್ ನೋಟ್ ಎಲ್ಲಿದೆ, ಕೀ ಎಲ್ಲಿದೆ, ಏನೇನು ಕೆಲಸ ಆಗಿದೆ, ಏನೇನ್ ಕೆಲಸ ಬಾಕಿ ಇದೆ ಎಲ್ಲವೂ ಉಲ್ಲೇಖ ಮಾಡಿದ್ದಾನೆ. ಈ ಘಟನಾ ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆತ್ಮಹತ್ಯೆಗೂ 3 ದಿನ ಮುನ್ನವೇ ಇದಕ್ಕಾಗಿ ತಯಾರಿ ನಡೆಸಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಮೊದಲ ದಿನ, 2ನೇ ದಿನ ಹಾಗೂ 3ನೇ ದಿನ ತಾನು ಏನೇನು ಮಾಡಬೇಕೆಂದು ಎಲ್ಲವನ್ನು ಬರೆದಿಟ್ಟುಕೊಂಡು ತಯಾರಿ ಮಾಡಿಕೊಂಡೇ ನಂತರ ಸಾವಿಗೆ ಕೊರಳೊಡ್ದಿದ್ದಾನೆ.

ಪ್ರತಿನಿತ್ಯ ಬೆಳಗ್ಗೆ ಎದ್ದೇಳುವ ಸಮಯ, ಸ್ನಾನ ಮಾಡಬೇಕು ಎನ್ನುವ ಮಾಹಿತಿಯಿಂದ ಹಿಡಿದು ತಾನು ಸಾವಿಗೆ ಶರಣಾಗುವವರೆಗೂ ಏನೇನು ಮಾಡಬೇಕು ಅನ್ನೋದನ್ನ ಪುಸ್ತಕದಲ್ಲಿ ಬರೆದಿಟ್ಟುಕೊಂಡಿದ್ದಾನೆ. ತನ್ನ ಇಚ್ಛೆಯಂತೆ ಮೂರು ದಿನ ಬದುಕಬೇಕೆಂದು ಪ್ಲಾನ್ ಮಾಡಿದ್ದು, ಅದನ್ನು ಗೋಡೆಗೂ ಅಂಟಿಸಿದ್ದಾನೆ. ಇಲ್ಲಿ ಮುಖ್ಯವಾಗಿ ತಾನು ಕುತ್ತಿಗೆಗೆ ಹಾಕಿಕೊಂಡಿರುವ 'JUSTICE IS DUE' ಎಂಬ ಪತ್ರ ಇತರೆ ಪ್ರತಿಗಳನ್ನು ಗೋಡೆಗಳ ಮೇಲೂ ಅಂಟಿಸಿದ್ದಾರೆ.

ಇದನ್ನೂ ಓದಿ: ಚುಚ್ಚಿ ಕೊಂದ ಚಿರಂಜೀವಿ, ಚಿನ್ನದಂಥ ಗಂಡನಿದ್ದರೂ ವಾಟ್ಸಪ್‌ ಪ್ರೇಮಿಗೆ ಬಲಿಯಾದ ತೃಪ್ತಿ!

ಇನ್ನು ಕುಟುಂಬಕ್ಕಾಗಿ ತಾನು ಬೆಂಗಳೂರಿಗೆ ಬಂದು ದುಡಿದು ಕಷ್ಟಪಡುತ್ತಿದ್ದು, ಸಾವಿನ ಕಡೆಯ ಕ್ಷಣದಲ್ಲಿ ತನ್ನ ಮಗಳು ನೆನಪಾದಂತೆ ಕಂಡುಬಂದಿದೆ. ಹೀಗಾಗಿ, ಮಗನಿಗೆ ಗಿಫ್ಟ್ ಅನ್ನು ತಂದು ಇಟ್ಟಿದ್ದಾನೆ. ನನ್ನ ನಾಲ್ಕು ವರ್ಷದ ಮಗನಿಗೆ ಈ ಗಿಫ್ಟ್ ಇಟ್ಟಿದ್ದು, ದಯಮಾಡಿ ಇದನ್ನು ತನ್ನ ಪುತ್ರಿಗೆ ತಲುಪಿಸಿ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿರುವುದು ಪೊಲೀಸರ ಪರಿಶೀಲನೆ ವೇಳೆ ತಿಳಿದುಬಂದಿದೆ. ಈ ಘಟನೆ ಕುರಿತಂತೆ ಮಾರತಹಳ್ಳಿ ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

click me!