ಮಂಗಳೂರಿನಲ್ಲಿ ಯುವತಿಯೊಬ್ಬರಿಗೆ ಜ್ಯೂಸ್‌ನಲ್ಲಿ ಅಮಲು ಪದಾರ್ಥ ಬೆರೆಸಿ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಫೀನ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ.
ಮಂಗಳೂರು (ಡಿ.6): ಜ್ಯೂಸ್‌ನಲ್ಲಿ ಅಮಲು ಪದಾರ್ಥ ಬೆರೆಸಿ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಮಂಗಳೂರು ನಗರದ ಕೊಡಿಯಾಲ್ ಬೈಲ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮೂರು ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ಯುವತಿ ಶುಕ್ರವಾರ ದೂರು ನೀಡಿದ್ದಾಳೆ. ಮಂಗಳೂರಿನ ದೇರಳಕಟ್ಟೆಯ ಶಫೀನ್ ಎಂಬ ಯುವಕನ ವಿರುದ್ಧ ಯುವತಿ ಅತ್ಯಾಚಾರ ಆರೋಪ ಮಾಡಿದ್ದಾಳೆ. ಕಳೆದ ಆಗಸ್ಟ್ 8ರಂದು ತನ್ನ ಮನೆಯಲ್ಲಿಯೇ ಶಫೀನ್ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಮನೆಯ ಫ್ರಿಡ್ಜ್ ಹಾಳಾಗಿದ್ದರಿಂದ ಯುವತಿ ಶಫೀನ್‌ಗೆ ಕರೆ ಮಾಡಿದ್ದಳು.
ಈ ವೇಳೆ ಶಫೀನ್ ಮೆಕಾನಿಕ್ ಕರೆದುಕೊಂಡು ಹೋಗಿ ಯುವತಿ ಮನೆಯ ಫ್ರಿಡ್ಜ್ ರಿಪೇರಿ ಮಾಡಿಸಿದ್ದ. ಮೆಕಾನಿಕ್‌ಅನ್ನು ಮನೆಯ ಹೊರಗೆ ಬಿಟ್ಟು ಬರುವ ವೇಳೆ ಯುವತಿಗೆ ಶಫೀನ್ ಜ್ಯೂಸ್ ತಂದುಕೊಟ್ಟಿದ್ದ. ಈತ ತಂದುಕೊಟ್ಟಿದ್ದ ಜ್ಯೂಸ್‌ನಲ್ಲಿ ಅಮಲು ಪದಾರ್ಥ ಮಿಕ್ಸ್ ಮಾಡಲಾಗಿತ್ತು. ಆ ಬಳಿಕ ಈತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಅತ್ಯಾಚಾರದ ಬಳಿಕ ಇದ ವಿಡಿಯೋ ಮಾಡಿದ್ದ ಶಫೀನ್ ಅದನ್ನು ವೈರಲ್ ಮಾಡುವ ಬೆದರಿಕೆ ಒಡ್ಡಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಜುಲೈ 21ರಂದು ಸಂತ್ರಸ್ತ ಯುವತಿಗೆ ಶಫೀನ್ ಮೊದಲ ಬಾರಿಗೆ ಪರಿಚಯವಾಗಿದ್ದ. ಕದ್ರಿ ರಸ್ತೆಯಲ್ಲಿ ಯುವತಿಯ ಕಾರು ಕೆಟ್ಟಿದ್ದ ವೇಳೆ ಶಫೀನ್ ನೆರವಿಗೆ ಬಂದಿದ್ದ. ಇನ್ನು ಯುವತಿ ಮಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಅತ್ಯಾಚಾರದ ಬಳಿಕ ಯುವತಿಯನ್ನ ಬ್ಲಾಕ್ ಮಾಡಿ ಆರೋಪಿ ಕಾರ್‌ಅನ್ನು ಕೂಡ ಎಗರಿಸಿದ್ದಾರೆ. ಹೀಗಾಗಿ ಅನುಮಾನ ಬಂದು ಆಗಸ್ಟ್ 25ರಂದು ವಿಳಾಸ ಹುಡುಕಿ ದೇರಳಕಟ್ಟೆಯ ಆತನ ಮನೆಗೆ ಯುವತಿ ತೆರಳಿದ್ದಳು.
Dhruv Jatti-Amogha Shettar: ಕೋಟಿ ಕೋಟಿ ಇದ್ದರೂ ಮಾಜಿ ಸಿಎಂ ಕುಟುಂಬದ ನಡುವೆ 'ವಚನ ಮಾಂಗಲ್ಯ'ಬಂಧ!
ಶಫೀನ್ ಬಗ್ಗೆ ಮನೆಯಲ್ಲಿ ವಿಚಾರಿಸಿದಾಗ, ಆತನ ಮನೆಯವರಿಂದಲೂ ಕೊಲೆ ಬೆದರಿಕೆ ಬಂದಿದೆ. ಶಫೀನ್ ಅಣ್ಣ ಮೊಹಮ್ಮದ್ ಶಿಯಬ್ ಕೂಡ ಅತ್ಯಾಚಾರಕ್ಕೆ ಯತ್ನಿಸಿದ್ದ. ಕೊಲೆ ಬೆದರಿಕೆ ಕೂಡ ಒಡ್ಡಿದ್ದ. ಆಗಸ್ಟ್ 27ರಂದು ಆರೋಪಿ ಶಫೀನ್ ಯುವತಿಯ ಮನೆಗೆ ನುಗ್ಗಿ ಹಣ ಕಳವು ಮಾಡಿರುವ ಬಗ್ಗೆಯೂ ದೂರು ದಾಖಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Cabinet Decisions: ಅಲ್ಪಸಂಖ್ಯಾತರ ಪರವಾಗಿ ಮತ್ತೊಂದು ನಿರ್ಣಯ ಕೈಗೊಂಡ ರಾಜ್ಯ ಸರ್ಕಾರ!