ಗಣೇಶ ಚತುರ್ಥಿಯಂದೇ ಕೆಎಸ್ಆರ್‌ಟಿಸಿ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತವಾಗಿದ್ದು, ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಮಗು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಡೆದಿದೆ.
ವಿಜಯಪುರ (ಸೆ.01): ಗಣೇಶ ಚತುರ್ಥಿಯಂದೇ ಕೆಎಸ್ಆರ್‌ಟಿಸಿ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತವಾಗಿದ್ದು, ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಮಗು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಡೆದಿದೆ. ಮಾತ್ರವಲ್ಲದೇ ಈ ಅಪಘಾತದಲ್ಲಿ ಐವರಿಗೆ ಗಂಭೀರ ಗಾಯಗಳಾಗಿದೆ. KA 42-F 1060 ನಂಬರಿನ ಕೆಎಸ್ಆರ್‌ಟಿಸಿ ಬಸ್ ಎದುರಿಗೆ ಬರುತ್ತಿದ್ದ KA 32-Z 1706 ಮತ್ತು KA 28-Z 5645 ನಂಬರಿನ ಎರಡು ಕಾರುಗಳಿಗೆ ಬಸ್ ಡಿಕ್ಕಿಯಾಗಿದೆ.
KA 32-Z 1706 ನಂಬರಿನ ಕಲಬುರಗಿ ಮೂಲದ ಕಿಯಾ ಕಾರಿನಲ್ಲಿದ್ದ ಏಳು ಜನರ ಪೈಕಿ ಓರ್ವ ಮಹಿಳೆ ಹಾಗೂ ಒಂದು ಮಗು ಸ್ಥಳದಲ್ಲೇ ಸಾವನಪ್ಪಿದ್ದು, ಇದೇ ಕಾರಿನ ಚಾಲಕ, ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ವಿಜಯಪುರ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ. ಇನ್ನು KA 28-Z 5645 ನಂಬರಿನ ಬುಲೆನೋ ಕಾರಿನಲ್ಲಿದ್ದ ವಿಜಯಪುರ ಮೂಲದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಘಾತದ ನಂತರ ಸ್ಥಳದಲ್ಲೇ ಗಾಯಾಳುಗಳು ಕಾರು ಬಿಟ್ಟು ಹೋಗಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಪಟ್ಟವರ ಹಾಗೂ ಗಾಯಾಳುಗಳ ಹೆಸರು ಲಭ್ಯವಾಗಿಲ್ಲ.
ಸಿಲಿಕಾನ್ ಸಿಟಿಯಲ್ಲಿ ಚಾಲಕನಿಂದ ಅಡ್ಡಾದಿಡ್ಡಿ ಆಂಬ್ಯುಲೆನ್ಸ್ ಚಾಲನೆ: ಬಂಧನ
ಕಾರು, ಸ್ಕೂಟರ್ ನಡುವೆ ಡಿಕ್ಕಿ ಚಾಲಕನಿಗೆ ಗಂಭೀರ ಗಾಯ: ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಹೋಬಳಿಯ ಮಹದೇಶ್ವರಪುರ ಬಳಿ ಶ್ರೀರಂಗಪಟ್ಟಣ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತಾಲೂಕಿನ ಹತ್ತಿಗಾನಹಳ್ಳಿ ಕೃಷ್ಣೇಗೌಡ ಗಾಯಗೊಂಡಿವರು. ಪಾಂಡಪುರದಿಂದ ನಾಗಮಂಗಲದ ಕಡೆಗೆ ಹೋಗುತ್ತಿದ್ದ ಕಾರು ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಎದುರು ಭಾಗದ ಮಹದೇಶ್ವರಪುರ ಕಡೆಯಿಂದ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಮೇಲುಕೋಟೆ ಇನ್ಸ್ ಪೆಕ್ಟರ್ ಸುಮಾರಾಣಿ ಮತ್ತು ಪೊಲೀಸ್ ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bengaluru: ರೈಲ್ವೆ ಇಲಾಖೆಯ ನೌಕರ ಎಂದು ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿ ಬಂಧನ
ಗುಂಡಿ ಮುಚ್ಚಲು ಗ್ರಾಮಸ್ಥರ ಆಗ್ರಹ: ರಾಷ್ಟ್ರೀಯ ಹೆದ್ದಾರಿ ಮಹದೇಶ್ವರದಿಂದ- ಲಕ್ಷ್ಮೀಸಾಗರಕ್ಕೆ ಸಾಗುವ ತಿರುವು ಬಳಿಯಲ್ಲಿ ಬಾಯ್ತೆರೆದು ಅಪಘಾತಕ್ಕೆ ಕಾದಿರುವ ಗುಂಡಿಗಳನ್ನು ಮುಚ್ಚುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹೆದ್ದಾರಿ ರಸ್ತೆಗಳು ಗುಂಡಿ ಬಿದ್ದಿರುವುದರಿಂದ ಅಪಘಾತಗಳು ನಡೆದು ಪ್ರಾಣಾಪಾಯ ಸಂಭವಿಸುವುದಕ್ಕೂ ಮೊದಲು ತಕ್ಷಣ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮಳೆ ಬಂದು ಗುಂಡಿಯಲ್ಲಿ ನೀರು ತುಂಬಿದರೆ ವಾಹನ ಸವಾರರಿಗೆ ಗುಂಡಿಗಳು ಕಾಣುವುದಿಲ್ಲ. ಇದರಿಂದ ದ್ವಿಚಕ್ರ ವಾಹನ ಸವಾರರು ಗುಂಡಿಯೊಳಕ್ಕೆ ವಾಹನ ಬಿಟ್ಟು ಕೆಳಕ್ಕೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿವೆ. ಹೆಚ್ಚಿನ ಅಪಾಯ ಸಾವು ನೋವು ಸಂಭವಿಸುವ ಮುನ್ನ ತಕ್ಷಣವೇ ರಸ್ತೆಗುಂಡಿಗಳನ್ನು ಮುಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.