ಬೈಕ್‌ನಲ್ಲಿ ಜಾಲಿರೈಡ್‌ ಹೋದ ಸ್ನೇಹಿತರು ಪೀಸ್‌ ಪೀಸ್: ದೇಹದ ತುಂಡುಗಳನ್ನು ಎತ್ತಿಕೊಂಡು ಹೋದ ಪೊಲೀಸರು

By Sathish Kumar KH  |  First Published Jun 14, 2023, 12:28 PM IST

ಬೆಳಗಾವಿಯ ಚಿಕ್ಕೋಡಿಯಲ್ಲಿ ಒಂದೇ ಬೈಕ್‌ನಲ್ಲಿ ರಾತ್ರಿವೇಳೆ ಜಾಲಿರೈಡ್‌ ಹೋದ ಸ್ನೇಹಿತರು ಟೆಂಪೋಗೆ ಡಿಕ್ಕಿ ಹೊಡೆದು ಪೀಸ್‌ ಪೀಸ್‌ ಆಗಿ ಬಿದ್ದು ಸಾವನ್ನಪ್ಪಿದ್ದಾರೆ.


ಬೆಳಗಾವಿ (ಜೂ.14): ಒಂದೇ ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಹೋಗುತ್ತಿದ್ದ ಯುವಕರು ಟೆಂಪೋಗೆ ಡಿಕ್ಕಿ ಹೊಡೆದಿದ್ದು, ಮೂವರು ಸ್ಥಳದಲ್ಲಿಯೇ ಭೀಕರವಾಗಿ ಸಾವನ್ನಪ್ಪಿದ್ದಾರೆ. ಇನ್ನು ಯುವಕರ ದೇಹದ ಒಂದೊಂದು ಭಾಗಗಳೂ ಕೂಡ ತುಂಡಾಗಿ ದಿಕ್ಕಾಪಾಲಕಾಗಿ ಬಿದ್ದಿವೆ. ಯುವಕರ ದೇಹದ ಕೈಗಳು, ಕಾಲು ಹಾಗೂ ದೇಹದ ಇತರೆ ಭಾಗಗಳು ಪೀಸ್‌ಪೀಸ್‌ಗಳಾಗಿ ಬಿದ್ದಿದ್ದವು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆ ಬಳಿ ರಾತ್ರಿ ಸಂಭವಿಸಿದೆ.  ಬೈಕ್ ಹಾಗೂ ಟೆಂಪೋ ಮಧ್ಯ ಭೀಕರ ರಸ್ತೆ ಅಪಘಾತ ಮೂವರು ಯುವಕರ ಸಾವಾಗಿದೆ. ಮೃತ ದುರ್ದೈವಿ ಯುವಕರನ್ನು ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಪ್ರಶಾಂತ ಬೈರು ಖೋತ(22), ಸತೀಶ ಕಲ್ಲಪ್ಪ ಹಿರೇಕೊಡಿ(23) ಹಾಗೂ ಬೆಳಗಾವಿಯ ನಿವಾಸಿ ಯಲಗೌಡ ಚಂದ್ರಕಾಂತ ಪಾಟೀಲ (22) ಎಂದು ಗುರ್ತಿಸಲಾಗಿದೆ. ರಾತ್ರಿ ವೇಳೆ ಬೈಕ್‌ನಲ್ಲಿ ಜಾಲಿರೈಡ್‌ ಹೊರಟಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. 

Tap to resize

Latest Videos

ಮದುವೆಯಾಗಿ 22 ದಿನಕ್ಕೆ ದುರಂತ ಅಂತ್ಯ, ಬೈಕ್‌ನಲ್ಲಿ ಜಾಲಿರೈಡ್‌ ಹೊರಟಿದ್ದ ನವಜೋಡಿಯ ದಾರುಣ ಸಾವು!

ಆಸ್ಪತ್ರೆಗೆ ಸಾಗಿಸುವಾಗ ಉಸಿರು ಚೆಲ್ಲಿದ ಯುವಕ: ಬೈಕ್‌ ಅಪಘಾತವಾದ ನಂತರ ಇಬ್ಬರು ಸ್ಥಳದಲ್ಲಿ ಮೃತಪಟ್ಟರೆ, ಓರ್ವ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಚಿಕ್ಕೋಡಿ ಪಟ್ಟಣದ ಹೊರವಲಯದ ಬಸನಾಳ ಗಡ್ಡೆ ರಾತ್ರಿ ವೇಳೆ ಅಪಘಾತ ಸಂಭವಿಸಿದಾಗ ಅಲ್ಲಿ ಸಹಾಯಕ್ಕೆ ಬೇರೆ ಯಾರೂ ಇರಲಿಲ್ಲ. ಇನ್ನು ಟೆಂಪೋ ಚಾಲಕ ಕೂಡ ಭಯಭೀತನಾಗಿದ್ದನು. ನಂತರ ಆಂಬುಲೆನ್ಸ್‌ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಚಿಕ್ಕೋಡಿ- ವಿಜಾಪುರ ರಾಜ್ಯ ಹೆದ್ದಾರಿ ಮೇಲೆ ನಡೆದ ಅಪಘಾತ ನಡೆದ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹಗಳನ್ನು ಹಾಗೂ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಒಬ್ಬ ಗಾಯಾಳು ಯುವಕನೂ ಕೂಡ ಆಸ್ಪತ್ರೆ ತಲುಪುವಷ್ಟರಲ್ಲೇ ಉಸಿರು ಚೆಲ್ಲಿದ್ದಾನೆ. ಈ ಘಟನೆ ಕುರಿತಂತೆ ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

ಸ್ನೇಹಿತನ ಮದುವೆಗೆ ಹೋಗಿ ಬರ್ತಿದ್ದವರು ಮಸಣ ಸೇರಿದರು :
ತುಮಕೂರು (ಜೂ.14): ಮದುವೆ ಸಮಾರಂಭಗಳಿಗೆ ಸ್ನೇಹಿತರು ಒಟ್ಟಾಗಿ ಹೋಗುವುದು ಸರ್ವೇಸಾಮಾನ್ಯ. ಹೀಗೆ ದಾಬಸ್ ಪೇಟೆಯಲ್ಲಿದ್ದ ಸ್ನೇಹಿತನ ಮದುವೆಗೆ ಹೋಗಿದ್ದ 7 ಮಂದಿ ಸ್ನೇಹಿತರು ಮದುವೆ ಮುಗಿಸಿಕೊಂಡು ಕಾರಿನಲ್ಲಿ ವಾಪಸ್‌ ಬರುವಾಗ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.

ಸ್ನೇಹಿತನ ಮದುವೆಗೆ ಹೋಗಿ ಬರ್ತಿದ್ದವರು ಮಸಣ ಸೇರಿದರು : ಇಬ್ಬರ ಸಾವು, ಐವರಿಗೆ ಗಂಭೀರ

ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸ್ಥಳದಲ್ಲೇ‌ ಸಾವನ್ನಪ್ಪಿದ ದುರ್ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಗ್ರಹಾರದ ಬಳಿ ನಡೆದಿದೆ. ತಡ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಘಟನೆ ನಡೆದಿದೆ. ಸ್ನೇಹಿತನ ಮದುವೆಗೆ ತೆರಳಿ ಕೊರಟಗೆರೆ ಹಾಗೂ ಕೊಡಗೇನಹಳ್ಳಿಗೆ ವಾಪಸ್ ಬರುತಿದ್ದ ಯುವಕರ ತಂಡವು ರಸ್ತೆಯ ಮಧ್ಯಯೇ ಅಪಘಾತವಾಗಿ ಮಸಣವನ್ನು ಸೇರಿದ್ದಾರೆ. ಈ ಕಾರಿನಲ್ಲಿ ಒಟ್ಟು 7 ಮಂದಿ ಇದ್ದರು. ಗಾಯಾಳುಗಳನ್ನು ಸ್ಥಳೀಯ ಕೊರಟಗೆರೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಸ್ಥಳದಲ್ಲಿಯೇ ಇಬ್ಬರ ಸಾವು, ಐವರಿಗೆ ಗಂಭೀರ ಗಾಯ:  ಮೃತ ಯುವಕರನ್ನು ದಾವಣೆಗೆರೆ ಮೂಲದ ಶಿವು ನಾಯಕ್( 32),  ಕೊಡಿಗೇನಹಳ್ಳಿಯ ಪರಮೇಶ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಒಟ್ಟು 7 ಜನರು ಇದ್ದರು. ಐವರಿಗೆ ಗಾಯ ನಿಮಾನ್ಸ್ ಗೆ ದಾಖಲು ಮಾಡಲಾಗಿದೆ. ದಾಬಸ್ ಪೇಟೆಯಲ್ಲಿ ಮದುವೆ ಮುಗಿಸಿ ತುಮಕೂರು ಮೂಲಕ ಕೊಡಿಗೇನಹಳ್ಳಿ ಕಡೆ ಹೋಗುತ್ತಿದ್ದರು. ಆಂಧ್ರದಿಂದ ತುಮಕೂರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಮೃತರು ಹಾಗೂ ಗಾಯಾಳುಗಳು ಎಲ್ಲರೂ ಸ್ನೇಹಿತರು ಆಗಿದ್ದರು. ಘಟನೆ ಕುರಿತಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

click me!