ಬೆಂಗಳೂರಿನಲ್ಲಿ ಮದುವೆಯಾಗಿ ಕೇವಲ ಮೂರು ತಿಂಗಳಲ್ಲಿ ಐಷಾರಾಮಿ ಜೀವನ ನಡೆಸುವುದಕ್ಕೆ ಪತ್ನಿ ನೀಡಿದ ಕಿರುಕುಳದಿಂದ ಬೇಸತ್ತ ನವ ವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು (ಡಿ.14): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮದುವೆಯಾಗಿ ಕೇವಲ ಮೂರು ತಿಂಗಳಲ್ಲಿ ಐಷಾರಾಮಿ ಜೀವನ ನಡೆಸುವುದಕ್ಕೆ ಪತ್ನಿ ನೀಡಿದ ಕಿರುಕುಳದಿಂದ ಬೇಸತ್ತ ನವ ವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಗರದ ಜ್ಞಾನಭಾರತಿ ಬಳಿಯ ಉಲ್ಲಾಳದ ಎಂ.ವಿ. ಲೇಔಟ್‌ನಲ್ಲಿ ಘಟನೆ ನಡೆದಿದೆ. ಇನ್ನು ಪತ್ಮಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ಮಹೇಶ್ವರ (24). ಮೂಲತಃ ರಾಮಜನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೊಡ್ಲೂರು ಗ್ರಾಮದ ವಾಸಿಯಾಗಿದ್ದ ಮಹೇಶ್ವರ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಯುವತಿ ಕವನ (22) ಅವರನ್ನು ಆಗಸ್ಟ್ 21ರಂದು ಮದ್ದೂರಮ್ಮ ದೇವಸ್ಥಾನದಲ್ಲಿ ಕುಟುಂಬ ಸದಸ್ಯರನ್ನು ಒಪ್ಪಿಸಿ ಮದುವೆಯಾಗಿದ್ದರು. ಮದುವೆಯಾಗಿ ಮನಗೆ ಬಂದ ಪತ್ನಿ ಕವನ ಐಷಾರಾಮಿ ಜೀವನದ ಆಸೆಪಟ್ಟು, ಬೇರೆ ಮನೆಯನ್ನು ಮಾಡುವಂತೆ ಪಟ್ಟು ಹಿಡಿದಿದ್ದಳು. ಹೀಗಾಗಿ, ಮಹೇಶ್ವರ ಗ್ರಾಮವನ್ನು ಬಿಟ್ಟು ಬೆಂಗಳೂರಿಗೆ ಬಂದು ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ಕವನ ಜೊತೆ ಸಂಸಾರ ಹೂಡುತ್ತಾರೆ.
ಜೈಲಲ್ಲಿದ್ದ ಮೊದಲ ಪತಿ: 2ನೇ ಪತಿ ಜತೆ ಜಾಲಿಯಾಗಿದ್ದ ‘ಮೃತ’ ಮಹಿಳೆ..!
ಬೆಂಗಳೂರಿಗೆ ಬಂದರೂ ನಿಲ್ಲದ ಕಿರುಕುಳ: ಗ್ರಾಮದಲ್ಲಿ ಅತ್ತೆ, ಮಾವ ಎಲ್ಲರೂ ಇರುವ ಮನೆಯಲ್ಲಿ ನಾನು ವಾಸವಿರುವುದಿಲ್ಲ ಎಂದು ಗಂಡನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ವಾಸವಿದ್ದರೂ, ತನ್ನ ಐಷಾರಾಮಿ ಜೀವನದ ಹುಚ್ಚು ಹೋಗಿರಲಿಲ್ಲ. ಇನ್ನು ದುಬಾರಿ ಬೆಲೆಯ ಬಂಗಾರದ ಆಭರಣ ಕೇಳುವುದು, ತನ್ನ ತಂದೆಗೆ ಲಕ್ಷಾಂತರ ರೂ. ಹಗಣವನ್ನು ಕೊಡುವಂತೆ ಕೇಳಿದ್ದಾಳೆ. ನೀನು ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಬೆದರಿಕೆ ಹಾಕುತ್ತಿದ್ದಳು. ಜೊತೆಗೆ, ನೆಂಟರಿಷ್ಟರ ಮುಂದೆ ಹಾಗೂ ಅವರಿಗೆ ಕರೆ ಮಾಡಿ ಗಂಡನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಅವಮಾನ ಮಾಡುತ್ತಿದ್ದಳು. ಹೀಗೆ ಪ್ರತಿನಿತ್ಯ ಹಿಂಸೆ ಕೊಡುವುದನ್ನೇ ಮೈಗೂಡಿಸಿಕೊಂಡಿದ್ದಳು ಎಂದು ಮೃತ ಮಹೇಶ್ವರನ ತಾಯಿ ಆರೋಪಿಸಿದ್ದಾರೆ.
ಕಿರುಕುಳಕ್ಕೆ ತಂದೆ- ತಾಯಿಯೂ ಸಾಥ್: ಇನ್ನು ಪತ್ನಿಯ ಕಿರುಕುಳಕ್ಕೆ ಅವರ ತಂದೆ ಆತ್ಮಾನಂದ ಮತ್ತು ತಾಯಿ ಪದ್ಮಾ ಕೂಡ ಸಾಥ್ ನೀಡುತ್ತಿದ್ದು, ಹಣ ಕೇಳುತ್ತಿದ್ದರು. ಕಳೆದ ನಾಲ್ಕೈದು ವರ್ಷದಿಂದ ಅವರ ಕುಟುಂಬವನ್ನು ನನ್ನ ಮಗನೇ ನೋಡಿದಕೊಳ್ಳುತ್ತಿದ್ದನು. ಮದುವೆಯಾದ ನಂತರ ಈ ಕಿರುಕುಳ ಮತ್ತಷ್ಟು ಹೆಚ್ಚಾಗಿದೆ. ದಿನನಿತ್ಯ ಕಿರುಕುಳ ನೀಡುತ್ತಿದ್ದುದನ್ನು ಸಹಿಸಲಾಗದೇ ಜರ್ಜಿರತಗೊಂಡು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಕವನ, ಆಕೆಯ ತಂದೆ ಆತ್ಮಾನಂದ ಹಾಗೂ ತಾಯಿ ಪದ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತನ ತಾಯಿ ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮದ್ವೆಯಾಗಿ ಆರು ತಿಂಗಳಾಗಿಲ್ಲ, ಡಿವೋರ್ಸ್ ಕೇಳ್ತಿದ್ದಾನಂತೆ ಪತಿ!
ಮದುವೆಯಾಗಿ ಮೂರು ತಿಂಗಳು ಇರದ ಜೀವ: ಮದುವೆ ಎಂದರೆ ಜೀವನದ ಅವಿಭಾಜ್ಯ ಅಂಗವಾಗಿದೆ. ಇಡೀ ಜೀವನ ಪೂರ್ತಿ ಕಷ್ಟ ಸುಖಗಳಲ್ಲಿ ಜೊತೆಯಾಗಿ ಇರುವುದಾಗಿ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಕೊಂಡ ಪತ್ನಿ ಕವನ ತನ್ನ ಗಂಡನಿಗೆ ಕೊಡಬಾರದ ಕಷ್ಟವನ್ನು ಕೊಟ್ಟಿದ್ದಾಳೆ. ಮಡದಿ ಇಚ್ಛೆಯಂತೆ ಹೊಸ ಮದುವೆಯ ಜೋಡಿ ಸೂಖವಾಗಿ ಇರಲೆಂದು ಕುಟುಂಬ ಸದಸ್ಯರು ಇಬ್ಬರನ್ನೂ ಬೆಂಗಳೂರಿನಲ್ಲಿ ಇರಿಸಿದ್ದಾರೆ. ಆದರೂ ತನ್ನ ಹಳೆಯ ಐಷಾರಾಮಿ ಹುಚ್ಚು ಬಿಡದ ಕವನ ಹಾಸಿಗೆ ಇದ್ದಷ್ಟು ಕಾಲು ಚಾಚದೇ ಹೆಚ್ಚಿನದನ್ನು ಆಸೆ ಪಟ್ಟಿದ್ದಾಳೆ. ಕೋಳಿ ಚಿನ್ನದ ಮೊಟ್ಟೆ ಇಡುತ್ತದೆ ಎಂದು ಅದರ ಹೊಟ್ಟೆಯನ್ನೇ ಕೊಯ್ದಂತೆ ಗಂಡನನ್ನು ಆಭರಣ ಹಾಗೂ ಹಣಕ್ಕಾಗಿ ಪೀಡಿಸಿದ್ದಾಳೆ. ಇನ್ನು ವಧುವಿನ ತಂದೆ- ತಾಯಿ ಕೂಡ ಬುದ್ಧಿ ಹೇಳದಿರುವ ಕಾರಣ ಮಹೇಶ್ವರನ ಜೀವನವೇ ದುರಂತ ಅಂಯತ್ಯಾವಗಿರುವುದು ಈ ಘಟನೆಯಿಂದ ತಿಳಿದುಬರುತ್ತಿದೆ.