ಆತ ಖಾಸಗಿ ಶಾಲೆಯ ಶಿಕ್ಷಕ. ತಾನಾಯ್ತು ತನ್ನ ಕೆಲಸವಾಯ್ತೋ ಅಂತಾ ಇದ್ದರೇ ಇಷ್ಟೊಂದು ಹಣ ಮತ್ತು ತನ್ನ ಕೆಲಸ ಕಳೆದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಆದರೆ ಆತ ಮಾಡಿದ ಒಂದು ಎಡವಟ್ಟು, ಇವತ್ತು ಹತ್ತು ಲಕ್ಷ ಹಣದ ಜೊತೆ ಕೆಲಸವನ್ನು ಕಳೆದುಕೊಂಡು ಬೀದಿ ಬೀದಿ ಸುತ್ತುವ ಸ್ಥಿತಿ ಬಂದಿದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ
ಬಳ್ಳಾರಿ (ಡಿ.14): ಆತ ಖಾಸಗಿ ಶಾಲೆಯ ಶಿಕ್ಷಕ. ತಾನಾಯ್ತು ತನ್ನ ಕೆಲಸವಾಯ್ತೋ ಅಂತಾ ಇದ್ದರೇ ಇಷ್ಟೊಂದು ಹಣ ಮತ್ತು ತನ್ನ ಕೆಲಸ ಕಳೆದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಆದರೆ ಆತ ಮಾಡಿದ ಒಂದು ಎಡವಟ್ಟು, ಇವತ್ತು ಹತ್ತು ಲಕ್ಷ ಹಣದ ಜೊತೆ ಕೆಲಸವನ್ನು ಕಳೆದುಕೊಂಡು ಬೀದಿ ಬೀದಿ ಸುತ್ತುವ ಸ್ಥಿತಿ ಬಂದಿದೆ. ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯ ಜೊತೆಗಿನ ಸ್ನೇಹ ಮತ್ತು ಮದುವೆ ಮಾಡಿಕೊಳ್ಳುವುದಾಗಿ ಹೇಳಿದ ಮೋಸದಿಂದಾಗಿ ಹಣದ ಜೊತೆ ಮರ್ಯಾದೆಯನ್ನು ಕಳೆದುಕೊಂಡ ಸಂಡೂರಿನ ಶಿಕ್ಷಕ ಇದೀಗ ಸೈಬರ್ ಪೊಲೀಸರ ಮೊರೆ ಹೋಗಿದ್ದಾನೆ.
ಮೊಬೈಲ್‌ನಲ್ಲಿನ ಪೋಟೋ ನೋಡಿಯೇ ಕೇರಳ ಚೆಲುವೆಗೆ ಮನಸೋತ ಶಿಕ್ಷಕ: ವಾಟ್ಸಾಪ್ ಚಾಟ್, ಪೋನ್ ಕಾಲ್‌ಗಳನ್ನು ತೋರಿಸುತ್ತ ಅತ್ತಿಂದಿತ್ತ ಓಡಾಡುತ್ತಿರೋ ಶಿಕ್ಷಕ. ಮೆಡಿಕಲ್ ಓದುತ್ತಿರುವೆ ಸಹಾಯ ಮಾಡಿ ಎಂದು ವಂಚನೆ ಮಾಡಿದ ಕೇರಳಾದ ಯುವತಿಯರು. ಯುವತಿಯರ ವಂಚನೆ ಜಾಲಕ್ಕೆ ಹಣದ ಜೊತೆ ಕೆಲಸ ಕಲೆದುಕೊಂಡು ಭೂಪ. ಹೌದು! ಹೀಗೆ ಅಮಾಯಕನಂತೆ ವಾಟ್ಸಾಪ್ ಚಾಟ್‌ಗಳನ್ನು ಮತ್ತು ಪೋನ್ ಕಾಲ್‌ಗಳ ವಿವರವನ್ನು ನೀಡ್ತಿರೋ ಈ ಶಿಕ್ಷಕನ ಹೆಸರು ದೇವೇಂದ್ರಪ್ಪ. ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ಹೈಸ್ಕೂಲ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಇದ್ದ ಹೆಂಡ್ತಿಯನ್ನು ಕಾರಣಾಂತರದಿಂದ ಬಿಟ್ಟಿದ್ದ ಈ ಶಿಕ್ಷಕ ಮ್ಯಾಟ್ರಿಮೋನಿಯಲ್ಲಿ ಕೇರಳದ ಯುವತಿಯ (ಹರಿತಾ) ಜೊತೆ ಗೆಳೆತನ ಬೆಳೆಸಿದ್ದಾನೆ. ಕೊರೊನಾದ ಖಾಲಿ ಸಮಯದದಲ್ಲಿ ಪರಿಚಯವಾದ ಹಿನ್ನೆಲೆ ಯುವತಿಯ ಜೊತೆ ಚಾಟಿಂಗ್ ಜೋರಾಗಿ ನಡೆಸಿದ್ದಾನೆ.
ಕಬ್ಬಿನ ಗದ್ದೆಯಲ್ಲಿ ಹೂತಿದ್ದ ಮಹಿಳೆ ಶವ ಹೊರಕ್ಕೆ: ಆರೋಪಿಯ ಬಂಧನ
ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರೋದಾಗಿ ಹೇಳಿದ ಯುವತಿ ಮೊದಲಿಗೆ ಊಟದ ಮ್ಯೆಸ್ ಗೆ ಕಟ್ಟಲು ಹಣವಿಲ್ಲವೆಂದಾಗ ಆರು ಸಾವಿರ ಹಣವನ್ನು ಯುವತಿಯ( ಹರಿತಾ) ಗೆಳೆತಿಯ ಅಕೌಂಟ್‌ಗೆ ವರ್ಗಾವಣೆ ಮಾಡಿದ್ದಾನೆ. ಅಲ್ಲಿಂದ ಆರಂಭವಾದ ಈ ಹಣದ ವ್ಯವಹಾರ ಹೆಚ್ಚು ಕಡಿಮೆ 8 ರಿಂದ 10 ಲಕ್ಷದ ವರೆಗೂ ಹಣವನ್ನು ವರ್ಗಾವಣೆ ಮಾಡೋವರೆಗೂ ಹೋಗಿದೆ. ಓದುವುಉದಕ್ಕೆ ಪುಸ್ತಕ ಖರೀದಿಗೆ, ಊಟಕ್ಕೆ, ವಸತಿಗೆ ಹೀಗೆ ನಾನಾ ಕಾರಣಗಳು ಹೇಳಿ ಇಬ್ಬರು ಯುವತಿಯರು ಹಣವನ್ನು ಲಪಟಾಯಿಸಿದ್ದಾರೆ. ಇಷ್ಟೊಂದು ಹಣ ನೀಡಿದರು, ಈವರೆಗೂ ಯುವತಿಯ ದರ್ಶನ ಮಾತ್ರ ಈ ಶಿಕ್ಷಕನಿಗೆ ಸಿಕ್ಕಿಲ್ಲ. ಯುವತಿಗಾಗಿ ಕೇರಳಕ್ಕೆ ಹೋಗಿ ಮುಖ ನೋಡಲಾಗದೇ ಖಾಲಿ ಕೈಯಲ್ಲಿ ವಾಪಸ್ ಬಂದಿದ್ದಾರೆ ದೇವೇಂದ್ರಪ್ಪ ಶಿಕ್ಷಕ.
ಚೆಲುವೆಯ ಅಂದ ನೋಡಿ ನೋಡಿ ಹಣ ಕಳೆದುಕೊಂಡಿದ್ದೇ ಗೊತ್ತಾಗಲಿಲ್ಲ: 2020ರ ಕೊರೊನಾ ವೇಳೆ ಪರಿಚಯವಾದಾಗಿನಿಂದಲೂ ಭೇಟಿಯಾಗೋದಕ್ಕೆ ಹವಣಿಸೋ ಶಿಕ್ಷಕನ್ನು ಒಮ್ಮೆ ಹೈದ್ರಾಬಾದ್ ಕರೆಸಿದ ಈ ಇಬ್ಬರು ಯುವತಿಯರು (ಮೋಸ ಮಾಡಿದ ಮತ್ತು ಹಣ ವರ್ಗಾವಣೆ ಮಾಡಿದ ಕೇರಳದ ಇಬ್ಬರು) ಅಲ್ಲಿ ಮತ್ತೊಂದು ಯುವತಿಯ ಪರಿಚಯ ಮಾಡಿಸಿದ್ದಾರೆ. ಅದು ಕೂಡ ಪೋನ್‌ನಲ್ಲಿಯೇ ಅಲ್ಲಿಯೂ ಒಂದಷ್ಟು ಹಣ ಕಳೆದುಕೊಂಡು ಬಂದ ಶಿಕ್ಷಕ ಇದೀಗ ಯುವತಿಯ ಜೊತೆ ಮದುವೆಯಾಗಲು ಹತೋರೆಯುತ್ತಿದ್ರು. ಯುವತಿ ಮಾತ್ರ ಸಂಪರ್ಕಕ್ಕೆ ಸಿಗುತ್ತಿಲ್ಲ. ಎರಡು ವರ್ಷದ ಈ ಪಯಣದಲ್ಲಿ ಹಣ ಕಳೆದುಕೊಂಡಿದ್ದು, ಬಿಟ್ಟರೆ ಈ ಶಿಕ್ಷಕನಿಗೆ ಯಾವುದೇ ರೀತಿಯ ಲಾಭವಾಗಿಲ್ಲ. ವಿಶೇಷವೆಂದ್ರೇ ವಾಟ್ಸಾಪ್‌ನಲ್ಲಿ ಆರಂಭದಲ್ಲಿ ಒಳ್ಳೆಯ ರೀತಿಯಲ್ಲಿ ಮಾತನಾಡಿದ್ದ ಶಿಕ್ಷಕ ಮತ್ತು ಆ ಯುವತಿ ನಂತರ ಅಶ್ಲೀಲವಾಗಿ ಚಾಟ್ ಮಾಡೋದರ ಜೊತೆ ಅಶ್ಲೀಲವಾಗಿ ಮಾತುಗಳನ್ನು ಆಡಿದ್ದಾರೆ. ಆದರೆ ಮದುವೆಯಾಗೋ ಯುವತಿ ಜೊತೆ ಹೀಗೆ ಮಾತನಾಡಿದ್ರೇ ತಪ್ಪೇನು ಅನ್ನುತ್ತಾನೆ ಶಿಕ್ಷಕ.
ಉದ್ಯಮ ಯಶಸ್ಸಿಗೆ ಆತ್ಮವಿಶ್ವಾಸ, ಧೈರ್ಯ ಮುಖ್ಯ: ಕೆ.ಎಸ್.ಈಶ್ವರಪ್ಪ
ಮಾದರಿಯಾಗಬೇಕಿದ್ದ ಶಿಕ್ಷಕ ಕಂಗಾಲಾಗಿದ್ದಾನೆ: ಮ್ಯಾಟ್ರಿಮೋನಿ ಹೆಸರಲ್ಲಿ ಪರಿಚಯವಾದ ಯುವತಿ ಬಣ್ಣ ಬಣ್ಣದ ಮಾತುಗಳನ್ನು ಹೇಳುವ ಮೂಲಕ ಸಂಡೂರು ಮೂಲದ ಶಿಕ್ಷಕನಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ಅದೇನೇ ಇರಲಿ ಶಿಕ್ಷಕನಾಗಿ ಮತ್ತೊಬ್ಬರಿಗೆ ಮಾದರಿಯಾಗಬೇಕಿದ್ದ ಶಿಕ್ಷಕ ಇದೀಗ ಕೆಲಸ ಜೊತೆ ಹಣ ಕಳೆದುಕೊಂಡು ಇಂಗು ತಿಂದ ಮಂಗನಂತಾಗಿದ್ದಾರೆ.