* ಮದ್ವೆಯಾದ ಒಂದೇ ವರ್ಷದಲ್ಲಿ ನವವಿವಾಹಿತೆ ಸಾವು
* ಮನೆಯವರ ವಿರೋಧದ ನಡುವೆಯೂ ಪ್ರೇಮ ವಿವಾಹ
* ಅನುಷಾ ಕಿವಿ ಕಟ್ ಆಗಿದ್ದು ಅನುಮಾನ
ಚಿಕ್ಕಬಳ್ಳಾಪುರ, (ಜೂನ್.04): ವಿವಾಹಿತ ಯುವತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಶೆಟ್ಟಿಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಅಂತಿಮ ವರ್ಷದ ಬಿಬಿಎಂ ವ್ಯಾಸಾಂಗ ಮಾಡುತ್ತಿದ್ದ ಅನುಷಾ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ. ಕಳೆದ ವರ್ಷವಷ್ಟೇ ಅಭಿಷೇಕ್ ಎಂಬಾತನ ಜೊತೆ ಅನುಷಾ ಪ್ರೀತಿಸಿ ಮದುವೆಯಾಗಿದ್ದಳು, ತಮ್ಮ ಮನೆಯವರ ವಿರೋಧದ ನಡುವೆಯೂ ಅನುಷಾ ಅಭಿಷೇಕ್ ಜೊತೆ ವಿವಾಹವಾಗಿ ಚಿಕ್ಕಬಳ್ಳಾಪುರದಲ್ಲೆ ವಾಸವಾಗಿದ್ದಳು. ಆದ್ರೆ, ಇದ್ದಕ್ಕಿದ್ದಂತೆ
ವಿಷ್ಣುಪ್ರಿಯ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಅನುಷಾ ಗಂಡನ ಮನಯಲ್ಲೇ ನೇಣುಬಿಗಿದುಕೊಂಡು ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಕಂಡುಬಂದಿದೆ. ಆದ್ರೆ, ಅನುಷಾ ಕಿವಿ ಕಟ್ ಆಗಿರೋದು ಈಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಈ ಆಂಗಲ್ ನಲ್ಲೂ ತನಿಖೆ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಪತಿ ಹಾಗೂ ಪತ್ನಿ ಜೊತೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇನ್ನೂ ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಸಂಬಂಧ ಪತಿ ಅಭಿಷೇಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅನುಷಾ ಕುಟುಂಬದವರು ಅಭಿಷೇಕ್ ವಿರುದ್ಧ ವರದಕ್ಷಿಣೆ ಕಿರುಕುಳ, ಕೊಲೆ ಮಾಡಿರುವ ದೂರು ನೀಡಿದ್ದಾರೆ.
ಮುಂಬೈನಿಂದ ಬಂದು ಅತ್ತೆಯನ್ನು ಕೊಂದ ಪಾಪಿ ಅಳಿಯ..!
ಮನೆಯವರ ವಿರೋಧದ ನಡುವೆಯೂ ಪ್ರೇಮ ವಿವಾಹ
ಹೌದು... ಅನುಷಾ ಹಾಗೂ ಅಭಿಷೇಕ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ, ಅನುಷಾಗೆ ಮದುವೆ ಮಾಡಬೇಕೆಂದು ಮನೆಯಲ್ಲಿ ಮಾತನಾಡುತ್ತಿರುತ್ತಾರೆ. ಈ ವೇಳೆ ಅನುಷಾ ಹಾಗೂ ಅಭಿಷೇಕ್ ಅನುಷಾ ತಂದೆ ತಾಯಿ ಬಳಿ ತಮ್ಮ ಪ್ರೀತಿಯ ವಿಷಯವನ್ನು ಹೇಳಿದ್ದಾರೆ. ಆದ್ರೆ
ಇವರ ವಿವಾಹಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದು ಅನುಷಾ ಅಭಿಷೇಕ್ ಜೊತೆ ವಿವಾಹವಾಗಿದ್ದಾಳೆ. ಬಳಿಕ ಚಿಕ್ಕಬಳ್ಳಾಪುರ ನಗರದಲ್ಲಿ ಮನೆ ಮಾಡಿಕೊಂಡಿದ್ದರು
ಅನುಷಾ ಕಿವಿಕಟ್ ಆಗಿದ್ದು ಅನುಮಾನ
ಚಿಕ್ಕಬಳ್ಳಾಪುರ ನಗರದ ಶೆಟ್ಟಿಹಳ್ಳಿ ಬಡಾವಣೆಯಲ್ಲಿ ಅಭಿಷೇಕ್ , ಅನುಷಾ ವಾಸವಾಗಿದ್ದು,, ಮನೆಯಲ್ಲಿ ಅನುಷಾ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಳು, ಆದ್ರೆ ಅನುಷಾ ಕಿವಿ ಕಟ್ ಆಗಿರೋದು ಈಗ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಅನುಮಾನ ಅನುಷಾ ಕುಟುಂಬಸ್ಥರನ್ನು ಕಾಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಮದುವೆಯಾದ ಬಳಿಕವೂ ಅನುಷಾ ಅಂತಿಮ ಬಿಬಿಎಂ ಪದವಿ ವ್ಯಾಸಾಂಗ ಮಾಡುತ್ತಿದ್ದು, ಮದುವೆಯಾದ ಬಳಿಕವು
ಓದುವುದನ್ನು ಬಿಟ್ಟಿರಲಿಲ್ಲ, ನಗರದ ಹೊರವಲಯದ ವಿಷ್ಣುಪ್ರಿಯ ಕಾಲೇಜಿನಲ್ಲಿ ಬಿಬಿಎಂ ವ್ಯಾಸಾಂಗ ಮಾಡುತ್ತಿದ್ದಳು. ಓದಿನಲ್ಲಿ ಕಾಲೇಜಿನಲ್ಲೆ ಸಖತ್ ಆಕ್ಟಿವ್ ಆಗಿದ್ದ ಅನುಷಾ ಉನ್ನತ ವ್ಯಾಸಾಂಗ ಮಾಡಿ ಒಳ್ಳೆಯ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದಳು.ಆದ್ರೆ ವಿಧಿ ಆಕೆಯನ್ನು ಬಲಿ ಪಡೆದುಕೊಂಡಿದೆ.
ಅಭಿಷೇಕ್ ವಿರುದ್ಧ ವರದಕ್ಷಿಣೆ ಕಿರುಕುಳ, ಕೊಲೆ ಆರೋಪ
ಅನುಷಾ ಪತಿ ಅಭಿಷೇಕ್ ವಿರುದ್ಧ ಅನುಷಾ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದು, ಆತನೇ ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಭಿಷೇಕ್ ಇತ್ತೀಚೆಗೆ ಹಣ, ವಡವೆ ತರುವಂತೆ ಅನುಷಾ
ಮೇಲೆ ಒತ್ತಡ ಮಾಡುತ್ತಿದ್ದ ಎಂದು ಆರೋಪಿಸಿರುವ ಕುಟುಂಬಸ್ಥರು ಪೊಲೀಸರು ಅಭಿಲಾಷ್ ಅವರ ಕುಟುಂಬದವರನ್ನು ಕರೆದು ವಿಚಾರಣೆ ನಡೆಸಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆ.